ಭಾವನೆ, ಆಕ್ಷನ್ ಮತ್ತು ಹಾಸ್ಯದ ಮಿಶ್ರಣ ಪೈಲ್ವಾನ್: ಸಲ್ಮಾನ್ ಖಾನ್
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ನಿನ್ನೆ ತೆರೆಗೆ ಬಂದಿದೆ. ಪೈಲ್ವಾನ್ ಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಕಿಚ್ಚನಿಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
ಪೈಲ್ವಾನ್ ಬಗ್ಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ರಿಕೆಯ ಒಂದು ಆರ್ಟಿಕಲ್ ಹೆಡ್ ಲೈನ್ ಅನ್ನು ಶೇರ್ ಮಾಡುವ ಮೂಲಕ "ಈ ಇಬ್ಬರು ಪೈಲ್ವಾನರು ಸರಿಯಾಗಿ ಹೇಳುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ"
"ಪೈಲ್ವಾನ್ ಭಾವನೆ, ಆಕ್ಷನ್ ಮತ್ತು ಹಾಸ್ಯದ ಉತ್ತಮವಾದ ಮಿಶ್ರಣವಾಗಿದೆ" ಎನ್ನುವ ಪತ್ರಿಯ ಹೆಡ್ ಲೈನ್ ಹಂಚಿಕೊಳ್ಳುವ ಮೂಲಕ ಪೈಲ್ವಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್ ಮಾತಿಗೆ ಕಿಚ್ಚ ಸುದೀಪ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. "ತುಂಬಾ ಧನ್ಯವಾದಗಳು. ಇವತ್ತು ನನಗೆ ಉತ್ತಮವಾದ ದಿನ. ಪ್ರತಿಯೊಬ್ಬ ಸ್ನೇಹಿತರು ಬೆನ್ನು ತಟ್ಟಿದ್ದಾರೆ. ಧನ್ಯಾವಾದಗಳು" ಎಂದಿದ್ದಾರೆ.
ಸಲ್ಮಾನ್ ಖಾನ್ ಪೈಲ್ವಾನ್ ಸಿನಿಮಾವನ್ನು ತೋರಿಸುವಂತೆ ಸುದೀಪ್ ಬಳಿ ಕೇಳಿಕೊಂಡಿದ್ದರಂತೆ. ಪೈಲ್ವಾನ್ ನೋಡುವ ಆಸೆ ವ್ಯಕ್ತಪಡಿಸಿದ್ದ ಸಲ್ಮಾನ್ ಗೆ ವಿಶೇಷ ಶೋ ಆಯೋಜಿಸಿ ಪೈಲ್ವಾನ್ ತೋರಿಸುವ ಪ್ಲಾನ್ ಮಾಡಿದ್ದಾರೆ ಕಿಚ್ಚ ಮತ್ತು ಟೀಂ.
ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಚಿತ್ರದಲ್ಲಿ ಕಿಚ್ಚ ಸುದೀಪ್ ವಿಲನ್ ಆಗಿ ಕಾಣಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ಕಿಚ್ಚನನ್ನು ನೋಡಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ. ದಬಾಂಗ್-3 ಚಿತ್ರದ ನಂತರ ಸಲ್ಮಾನ್ ಮತ್ತು ಸುದೀಪ್ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿದೆ.


Click it and Unblock the Notifications











