For Quick Alerts
  ALLOW NOTIFICATIONS  
  For Daily Alerts

  ಹೊಸ ಇತಿಹಾಸ ಸೃಷ್ಟಿಸಿದ 'ಪೈಲ್ವಾನ್': ಇದು ಕನ್ನಡದಲ್ಲಿ ಮೊದಲು

  |
  Pailwaan Movie : ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದ ಸುದೀಪ್ ಪೈಲ್ವಾನ್ ಸಿನಿಮಾ|FILMIBEAT KANNADA

  ಕೆಜಿಎಫ್ ನಂತರ ನಟಸಾರ್ವಭೌಮ, ಪೈಲ್ವಾನ್, ಯಜಮಾನ, ಕುರುಕ್ಷೇತ್ರ ಹೀಗೆ ದೊಡ್ಡ ದೊಡ್ಡ ಸಿನಿಮಾಗಳು ಸರದಿ ಸಾಲಿನಲ್ಲಿ ಸಿದ್ಧವಾಗ್ತಿದೆ. ಇಂದು ನಟಸಾರ್ವಭೌಮ ಸಿನಿಮಾ ತೆರೆಕಂಡು ಅದ್ಭುತವಾಗಿ ಪ್ರದರ್ಶನವಾಗ್ತಿದೆ.

  ಈ ಕಡೆ ಯಜಮಾನ ಚಿತ್ರ ಹಾಡುಗಳಿಂದ ಅಬ್ಬರಿಸುತ್ತಿದ್ದು, ಫೆಬ್ರವರಿ 10 ರಂದು ಟ್ರೈಲರ್ ಬರಲಿದೆ. ಈಗಾಗಲೇ ಪೈಲ್ವಾನ್ ಟೀಸರ್ ರಿಲೀಸ್ ಮಾಡಿರುವ ಸುದೀಪ್ ತಂಡ ಸದ್ಯಕ್ಕೆ ಶೂಟಿಂಗ್ ಕಡೆ ಗಮನ ಕೊಟ್ಟಿದೆ.

  ಈ ಚೋಟ 'ಪೈಲ್ವಾನ್'ನನ್ನು ಕಿಚ್ಚನೇ ಮೆಚ್ಚಿಕೊಂಡಿದ್ದಾರೆ ಈ ಚೋಟ 'ಪೈಲ್ವಾನ್'ನನ್ನು ಕಿಚ್ಚನೇ ಮೆಚ್ಚಿಕೊಂಡಿದ್ದಾರೆ

  ಜನವರಿ 15 ರಂದು ಬಿಡುಗಡೆಯಾಗಿದ್ದ ಪೈಲ್ವಾನ್ ಟೀಸರ್ ಈಗ ಹೊಸದೊಂದು ಇತಿಹಾಸ ಸೃಷ್ಟಿಸಿದೆ. ಈ ಹಿಂದೆ ಯಾವ ಕನ್ನಡ ಸಿನಿಮಾವೂ ಮಾಡದ ಅಪರೂಪದ ದಾಖಲೆ ಮಾಡಿದೆ. ಏನಿದು ಪೈಲ್ವಾನ್ ದಾಖಲೆ? ಮುಂದೆ ಓದಿ.....

  ಅತಿ ಹೆಚ್ಚು ವೀವ್ಸ್ ಪಡೆದ ಪೈಲ್ವಾನ್

  ಅತಿ ಹೆಚ್ಚು ವೀವ್ಸ್ ಪಡೆದ ಪೈಲ್ವಾನ್

  ಇತ್ತೀಚಿನ ವರ್ಷಗಳಲ್ಲಿ ತೆರೆಕಂಡಿದ್ದ ಕನ್ನಡ ಸಿನಿಮಾ ಟೀಸರ್ ಗಳ ಪೈಕಿ ಪೈಲ್ವಾನ್ ಟೀಸರ್ ಅತಿ ಹೆಚ್ಚು ವೀಕ್ಷಣೆ ಕಂಡಿದೆ. ಜನವರಿ 15 ರಂದು ರಿಲೀಸ್ ಆಗಿದ್ದ ಪೈಲ್ವಾನ್ ಟೀಸರ್, ಫೆಬ್ರವರಿ 7 ಕ್ಕೆ 43 ಲಕ್ಷ (43,00,056) ವೀವ್ಸ್ ಪಡೆದುಕೊಂಡಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆ.

  'ಪೈಲ್ವಾನ್' ಟೀಸರ್ ನೋಡಿ ಬೆರಗಾದ ಕುಮಾರ್ ಬಂಗಾರಪ್ಪ'ಪೈಲ್ವಾನ್' ಟೀಸರ್ ನೋಡಿ ಬೆರಗಾದ ಕುಮಾರ್ ಬಂಗಾರಪ್ಪ

  ಅತಿ ಹೆಚ್ಚು ಲೈಕ್ಸ್

  ಅತಿ ಹೆಚ್ಚು ಲೈಕ್ಸ್

  ಇದೇ ಪೈಲ್ವಾನ್ ಟೀಸರ್ ಅತಿ ಹೆಚ್ಚು ವೀವ್ಸ್ ಪಡೆಯುವುದರ ಜೊತೆಗೆ ಅತಿ ಹೆಚ್ಚು ಲೈಕ್ಸ್ ಕೂಡ ಪಡೆದುಕೊಂಡಿದೆ. 150k ಲೈಕ್ಸ್ 10k ಡಿಸಲೈಕ್ಸ್ ಪಡೆದುಕೊಂಡಿದೆ. ಅಲ್ಲಿಗೆ 150k ಲೈಕ್ ಪಡೆದ ಮೊದಲ ಕನ್ನಡ ಟೀಸರ್ ಎನ್ನಲಾಗಿದೆ.

  ಕೆಜಿಎಫ್, ದಿ ವಿಲನ್, ಯಜಮಾನ ಎಷ್ಟಿದೆ?

  ಕೆಜಿಎಫ್, ದಿ ವಿಲನ್, ಯಜಮಾನ ಎಷ್ಟಿದೆ?

  ಪೈಲ್ವಾನ್ ಸಿನಿಮಾ ಟೀಸರ್ ವೀಕ್ಷಣೆ ಮತ್ತು ಲೈಕ್ಸ್ ಸಂಖ್ಯೆ ನೋಡಿದ ನಂತರ ಈ ಹಿಂದಿನ ಸಿನಿಮಾಗಳು ಎಷ್ಟು ಪಡೆದಿರಬಹುದು ಎಂಬ ಕುತೂಹಲ ಹುಟ್ಟಿಕೊಂಡಿತು. ಹಾಗ್ನೋಡಿದ್ರೆ, ಕೆಜಿಎಫ್ ಮೇಕಿಂಗ್ ಟೀಸರ್ ಬಿಟ್ಟರೇ ಬೇರೆ ಟೀಸರ್ ಬಿಟ್ಟಿರಲಿಲ್ಲ. ಆದ್ರೂ, ಆ ಟೀಸರ್ ಈ ದಾಖಲೆ ಮಾಡಿಲ್ಲ. ದಿ ವಿಲನ್ ಚಿತ್ರದ ನಾಲ್ಕೈದು ಟೀಸರ್ ಗಳು ಬಂದಿದೆ. ಆದ್ರೂ ಅವು ಕೂಡ ಇಷ್ಟು ಸಂಖ್ಯೆ ಹೊಂದಿಲ್ಲ. ಯಜಮಾನ ಟೈಟಲ್ ಹಾಗೂ ಮೋಷನ್ ಟೀಸರ್ ಬಂದಿದೆ. ಈ ಟೀಸರ್ ಗಳು ಇಷ್ಟು ವೀವ್ಸ್ ಕಂಡಿಲ್ಲ.

  'ಪೈಲ್ವಾನ್' ಟೀಸರ್ ನೋಡಿ ಪ್ರಿಯಾ ಸುದೀಪ್ ಏನಂದ್ರು?'ಪೈಲ್ವಾನ್' ಟೀಸರ್ ನೋಡಿ ಪ್ರಿಯಾ ಸುದೀಪ್ ಏನಂದ್ರು?

  ಸಮ್ಮರ್ ಗೆ ಪೈಲ್ವಾನ್?

  ಸಮ್ಮರ್ ಗೆ ಪೈಲ್ವಾನ್?

  ಬಹುತೇಕ ಕೊನೆಯ ಹಂತ ಶೂಟಿಂಗ್ ನಲ್ಲಿರುವ ಪೈಲ್ವಾನ್ ಸಿನಿಮಾ ಸಮ್ಮರ್ ಹಾಲಿಡೇಗೆ ತೆರೆ ಮೇಲೆ ಬರುತ್ತೆ ಎನ್ನಲಾಗಿದೆ. ಹೆಬ್ಬುಲಿ ಖ್ಯಾತಿಯ ಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಆಕಾಂಕ್ಷ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ.

  ಅಬ್ಬಾ.. ಸುದೀಪ್ 'ಪೈಲ್ವಾನ್' ಬಗ್ಗೆ 'ಸುಲ್ತಾನ್' ಸಲ್ಮಾನ್ ಟ್ವೀಟ್ಅಬ್ಬಾ.. ಸುದೀಪ್ 'ಪೈಲ್ವಾನ್' ಬಗ್ಗೆ 'ಸುಲ್ತಾನ್' ಸಲ್ಮಾನ್ ಟ್ವೀಟ್

  English summary
  Kiccha sudeep starrer Pailwaan teaser completed 4.2m views with 150k likes. first kannada movie teaser to attain this step.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X