ಆಗಸ್ಟ್ 9 ದರ್ಶನ್ ಮತ್ತು ಸುದೀಪ್ ಇಬ್ಬರೂ ಖುಷಿಪಡುವ ದಿನ
Recommended Video
ಆಗಸ್ಟ್ 9 ದರ್ಶನ್ ಅಭಿಮಾನಿಗಳು 'ಕುರುಕ್ಷೇತ್ರ' ಸಿನಿಮಾ ಬಿಡುಗಡೆ ಎಂದು ಕ್ಯಾಲೆಂಡರ್ ನಲ್ಲಿ ಗುರುತು ಹಾಕಿಕೊಂಡಿದ್ದಾರೆ. ಅದರ ಜೊತೆಗೆ ಇತ್ತ ಸುದೀಪ್ ಅಭಿಮಾನಿಗಳಿಗೂ ಆ ದಿನ ವಿಶೇಷ ಆಗಲಿದೆ.
ಕಾರಣ, 'ಕುರುಕ್ಷೇತ್ರ' ರಿಲೀಸ್ ದಿನವೇ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾದ ಆಡಿಯೋ ಬಿಡುಗಡೆ ಆಗಲಿದೆ. ಈ ಹಿಂದೆ ಪೋಸ್ಟ್ ಪೋನ್ ಆಗಿದ್ದ, 'ಪೈಲ್ವಾನ್' ಆಡಿಯೋ ರಿಲೀಸ್ ಡೇಟ್ ಈಗ ಫಿಕ್ಸ್ ಆಗಿದೆ. ಆಗಸ್ಟ್ 9 ರಂದು 'ಪೈಲ್ವಾನ್' ಹಾಡುಗಳ ಹಬ್ಬ ನಡೆಯಲಿದೆ.
ಚಿತ್ರದುರ್ಗದಲ್ಲಿ 'ಪೈಲ್ವಾನ್' ಸಿನಿಮಾದ ಹಾಡುಗಳು ಬಿಡುಗಡೆ ಆಗಲಿದೆ. ಚಿತ್ರದುರ್ಗ ಕರ್ನಾಟಕದ ಮಧ್ಯಭಾಗದಲ್ಲಿ ಇದ್ದು, ಅಲ್ಲಿ ಕಾರ್ಯಕ್ರಮ ಮಾಡಿದರೆ, ಎಲ್ಲರಿಗೂ ತಲುಪುತ್ತದೆ ಎನ್ನುವುದು ಚಿತ್ರತಂಡದ ಅಭಿಪ್ರಾಯವಾಗಿದೆ.

ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕೃಷ್ಣ ನಿರ್ದೇಶಕ ಹಾಗೂ ಸ್ವಪ್ನ ಕೃಷ್ಣ ನಿರ್ಮಾಣ ಮಾಡಿದ್ದಾರೆ. ಸುದೀಪ್ ಜೊತೆಗೆ ಆಕಾಂಕ್ಷ ಸಿಂಗ್ ನಾಯಕಿಯಾಗಿದ್ದಾರೆ.

ಒಂದು ಕಡೆ 'ಕುರುಕ್ಷೇತ್ರ' ,ಮತ್ತೊಂದು ಕಡೆ 'ಪೈಲ್ವಾನ್' ಎರಡು ಸಿನಿಮಾಗಳ ವಿಶೇಷ ಕಾರ್ಯಕ್ರಮಗಳು ಅಭಿಮಾನಿಗಳಿಗೆ ಖುಷಿ ನೀಡುವುದು ಪಕ್ಕಾ.


Click it and Unblock the Notifications











