ಥೀಮ್ ಸಾಂಗ್ ಬಳಿಕ ಬರ್ತಿದೆ 'ಪೈಲ್ವಾನ್' ರೋಮ್ಯಾಂಟಿಕ್ ಸಾಂಗ್
'ಬಂದ ನೋಡು ಪೈಲ್ವಾನ್...' ಥೀಮ್ ಹಾಡು ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಈ ಹಾಡಿನ ಬಳಿಕ ಸಿನಿಮಾದ ಎರಡನೇ ಹಾಡನ್ನು ಚಿತ್ರತಂಡ ರಿಲೀಸ್ ಮಾಡುತ್ತಿದೆ.
'ಪೈಲ್ವಾನ್' ಚಿತ್ರದ ಎರಡನೇ ಹಾಡು ನಾಳೆ (ಮಂಗಳವಾರ) ಮಧ್ಯಾಹ್ನ 03 : 06 ನಿಮಿಷಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ರೋಮ್ಯಾಟಿಂಕ್ ಸಾಂಗ್ ಇದಾಗಿದೆ. 'ಕಣ್ಮಣಿಯೇ...' ಎಂಬ ಈ ಹಾಡನ್ನು ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.
ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. 'ಮಾಣಿಕ್ಯ', 'ಹೆಬ್ಬುಲಿ'ಯ ಸೂಪರ್ ಸಕ್ಸಸ್ ಬಳಿಕ ಮತ್ತೆ ಸುದೀಪ್ ಸಿನಿಮಾಗೆ ಜನ್ಯ ಮ್ಯೂಸಿಕ್ ನೀಡುತ್ತಿದ್ದಾರೆ. ಮೊದಲು ಬಿಡುಗಡೆಯಾದ ಥೀಮ್ ಸಾಂಗ್ ದೊಡ್ಡ ಪ್ರತಿಕ್ರಿಯೆ ಪಡೆದಿದ್ದು, ಅದೇ ಖುಷಿಯಲ್ಲಿ ಈ ಹಾಡು ಹೊರಬರುತ್ತಿದೆ.

ಅಂದಹಾಗೆ, ಕೃಷ್ಣ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಸುದೀಪ್ ಹಾಗೂ ಆಕಾಂಕ್ಷ ಸಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. ಸುನೀಲ್ ಶೆಟ್ಟಿ ಚಿತ್ರದ ಇಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಆಗಸ್ಟ್ ಕೊನೆ ಅಥವಾ ಸಪ್ಟೆಂಬರ್ ಮೊದಲ ವಾರದಲ್ಲಿ 'ಪೈಲ್ವಾನ್' ಚಿತ್ರ ರಿಲೀಸ್ ಆಗಲಿದೆ.


Click it and Unblock the Notifications











