ಮತ್ತೆ ಮುಂದಕ್ಕೆ ಹೋಯ್ತು 'ಪೈಲ್ವಾನ್' ಬಿಡುಗಡೆಯ ದಿನಾಂಕ

Recommended Video

Pailvan Movie: ಸುದೀಪ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ | FILMIBEAT KANNADA

'ಪೈಲ್ವಾನ್' ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಹಿಂದೆಯಿಂದಲೂ ಗೊಂದಲ ಇದೆ. ಈಗ ಮತ್ತೆ ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

ಮೊದಲು ನಿಗದಿ ಆಗಿರುವ ಹಾಗೆ, ಆಗಸ್ಟ್ 8ಕ್ಕೆ ಸಿನಿಮಾ ಬಿಡುಗಡೆ ಆಗಬೇಕಾಗಿತ್ತು. ಬಳಿಕ ಆ ದಿನಾಂಕ ಆಗಸ್ಟ್ 29ಕ್ಕೆ ಮುಂದೆ ಹೋಗಿತ್ತು. ಆದರೆ, ಈಗ ಮತ್ತೆ ಸಿನಿಮಾದ ಬಿಡುಗಡೆ ದಿನಾಂಕ ಪೋಸ್ಟ್ ಪೋನ್ ಆಗಿದೆ. ಈ ಬಗ್ಗೆ ನಿರ್ದೇಶಕ ಕೃಷ್ಣ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ.

pailwaan kannada movie new release date will be announced today

ಪ್ಯಾನ್ ಇಂಡಿಯಾ ರಿಲೀಸ್ ಮಾಡುವ ಕಾರಣ ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿದೆಯಂತೆ. ಅದರಲ್ಲಿಯೂ ಹಿಂದಿ ಮತ್ತು ತೆಲುಗು ಭಾಷೆಯ ಬಿಡುಗಡೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ. ಇದರ ಜೊತೆಗೆ ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಆಡಿಯೋ ಬಿಡುಗಡೆ ಕಾರ್ಯಕ್ರಮದ ಕೂಡ ಮುಂದಕ್ಕೆ ಹೋಗಿದೆಯಂತೆ.

ಸಿನಿಮಾದ ಹೊಸ ಬಿಡುಗಡೆಯ ದಿನಾಂಕ ಹಾಗೂ ಆಡಿಯೋ ರಿಲೀಸ್ ಯಾವಗ ಎಂಬ ವಿಷಯವನ್ನು ಇಂದು ಸಂಜೆ 6.30ಕ್ಕೆ ತಿಳಿಸಲಾಗುವುದಂತೆ.

ಅಂದಹಾಗೆ, ಕನ್ನಡದ 'ಪೈಲ್ವಾನ್' ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಸುದೀಪ್ ಮತ್ತು ಆಕಾಂಕ್ಷ ಸಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

More from Filmibeat

English summary
Sudeep's 'Pailwaan' kannada movie new release date will be announced today (July 22th) The movie is directed by Krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X