ಅಭಿಮಾನಿಗಳ ಒತ್ತಾಯಕ್ಕೆ ಮಣಿದ 'ಪೈಲ್ವಾನ್' ಗುಡ್ ನ್ಯೂಸ್ ಕೊಟ್ರು.!

Recommended Video

Pailwaan Kannada Movie : ಕಿಚ್ಚ ಸುದೀಪ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ..!

ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದಲ್ಲಿ ಸುದೀಪ್ ಕುಸ್ತಿಪಟು ಆಗಿರೋದೇ ಚಿತ್ರದ ಬಹುದೊಡ್ಡ ಉಡುಗೊರೆ. ಇಂತಹದ್ರಲ್ಲಿ ಅದ್ಧೂರಿ ಮೇಕಿಂಗ್, ಪಾತ್ರಕ್ಕಾಗಿ ಸುದೀಪ್ ಮೇಕ್ ಓವರ್, ಇದೆಲ್ಲ ನೋಡಿದ್ರೆ, ಅದ್ಯಾವ ಈ ಚಿತ್ರ ಬರುತ್ತೋ ಎಂದು ಕಾಯ್ತಿದ್ದಾರೆ.

ಸದ್ಯ, ಪೈಲ್ವಾನ್ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಈಗ ಕುಸ್ತಿ ಪೋಸ್ಟರ್ ರಿಲೀಸ್ ಮಾಡಲಿದೆ. ಈ ಸುದ್ದಿಯನ್ನ ಸ್ವತಃ ನಿರ್ದೇಶಕರೇ ಹಂಚಿಕೊಂಡಿದ್ದಾರೆ.

Pailwaan Kusthi poster will release november 17th

''ಅಭಿಮಾನಿಗಳ ಒತ್ತಾಯದಿಂದ ಪೈಲ್ವಾನ್ ಚಿತ್ರದ ಕುಸ್ತಿ ಪೋಸ್ಟರ್ ನವೆಂಬರ್ 17 ರಂದು ಸಂಜೆ 6.30ಕ್ಕೆ ರಿಲೀಸ್ ಮಾಡುತ್ತಿದ್ದೇವೆ. ಸುದೀಪ್ ಅಭಿಮಾನಿಗಳಿಗೆ ಬಹಳ ಧನ್ಯವಾದಗಳು. ನಮಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ, ನಮ್ಮ ತಂಡದಿಂದ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಇದಾಗಲಿದೆ'' ಎಂದು ಟ್ವೀಟ್ ಮಾಡಿದ್ದಾರೆ.

ಸದ್ಯ, ಹೈದರಬಾದ್ ನ ರಾಮೋಜಿ ಸಿಟಿಯಲ್ಲಿ ಪೈಲ್ವಾನ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಅದಕ್ಕಾಗಿ ತುಂಬಾ ಗ್ರ್ಯಾಂಡ್ ಆಗಿ 20 ಬಗೆಯ ಸೆಟ್ ನಿರ್ಮಾಣ ಮಾಡಲಾಗಿದೆ. ಕುಸ್ತಿ, ಬಾಕ್ಸರ್ ಅಖಾಡಗಳನ್ನ ಸಿದ್ಧಮಾಡಿ ಸುದೀಪ್ ಅವರ ಚಿತ್ರೀಕರಣ ಮಾಡಲಾಗ್ತಿದೆ.

ಇನ್ನುಳಿದಂತೆ ಹೆಬ್ಬುಲಿ ನಿರ್ದೇಶಕ ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಅವರೇ ನಿರ್ಮಾಣ ಕೂಡ ಮಾಡ್ತಿದ್ದಾರೆ. ಸುದೀಪ್ ಜೊತೆ ಕಬೀರ್ ದುಹಾನ್ ಸಿಂಗ್ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
Kannada movie Pailwaan Kusthi poster out tomorrow (november 17th) by 6.30 pm, this is exclusively done on demand of fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X