Pailwaan Box Office Collection : ಮೊದಲ ದಿನಕ್ಕಿಂತ 'ಪೈಲ್ವಾನ್' ಎರಡನೇ ದಿನದ ಕಲೆಕ್ಷನ್ ಕಡಿಮೆ!
Recommended Video
'ಪೈಲ್ವಾನ್' ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನಕ್ಕಿಂತ ಎರಡನೇ ಕಡಿಮೆ ಆಗಿದೆ. ಪಾಸಿಟಿವ್ ರೆಸ್ಪಾನ್ಸ್ ಇದ್ದರೂ, ದೊಡ್ಡ ಓಪನಿಂಗ್ ಪಡೆದುಕೊಂಡರೂ ಸಿನಿಮಾದ ಗಳಿಕೆಯಲ್ಲಿ ಇಳಿಮುಖವಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ 'ಪೈಲ್ವಾನ್' ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮೊದಲ ದಿನ ಕನ್ನಡದಲ್ಲಿ 10 ಕೋಟಿ ಗಳಿಕೆ ಮಾಡಿದ್ದ ಸಿನಿಮಾ, ಎಲ್ಲ ಭಾಷೆಗಳು ಸೇರಿದರೆ ಒಟ್ಟು 18 ಕೋಟಿ ಮಾಡಿತ್ತು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಎರಡನೇ ದಿನದ ಕಲೆಕ್ಷನ್ ನೋಡಿದರೆ, ಸ್ವಲ್ಪ ಕಡಿಮೆ ಆಗಿದೆ.
ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ, ಎರಡನೇ ದಿನದ ಕೆಲೆಕ್ಷನ್ ಇಳಿಕೆ ಕಂಡಿದೆ. ಆದರೆ, ಹಾಗೆಂದ ಮಾತ್ರಕ್ಕೆ ಸಿನಿಮಾ ಚೆನ್ನಾಗಿಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಆದರೆ, ಕೆಲವು ಪ್ರಮುಖ ಕಾರಣಗಳಿಂದ 'ಪೈಲ್ವಾನ್' ಚಿತ್ರದ ಕಲೆಕ್ಷನ್ ಇಳಿದಿರಬಹುದು.

ಎರಡನೇ ದಿನ ಕನ್ನಡ ವರ್ಷನ್ 9 ಕೋಟಿ
ಗುರುವಾರ ಬಿಡುಗಡೆಯಾದ 'ಪೈಲ್ವಾನ್' ಕನ್ನಡ ವರ್ಷನ್ 10 ಕೋಟಿ ಮಾಡಿತ್ತು. ಆದರೆ, ಶುಕ್ರವಾರ ನಿರ್ಮಾಪಕರ ಖಾತೆಗೆ 9 ಕೋಟಿ ಬಂದಿದೆ. ಬಿಡುಗಡೆಯಾದ ಎರಡನೇ ದಿನ ಚಿತ್ರದ ಕಲೆಕ್ಷನ್ ನಲ್ಲಿ 1 ಕೋಟಿ ಕಡಿಮೆ ಆಗಿದೆ. ವೀಕ್ ಡೇ, ಪೈರಸಿ, ಉದ್ದೇಶ ಪೂರ್ವಕವಾಗಿ ನೆಗೆಟಿವ್ ಪ್ರಚಾರ ಹಬ್ಬಿಸುತ್ತಿರುವುದು ಇದೆಲ್ಲ ಕಲೆಕ್ಷನ್ ಮೇಲೆ ಪರಿಣಾಮ ಬೀರಿರಬಹುದು.

ಉಳಿದ ಭಾಷೆಗಳಲ್ಲಿಯೂ ಕಡಿಮೆ ಆಗಿದೆ
'ಪೈಲ್ವಾನ್' ತೆಲುಗಿನಲ್ಲಿ ಶುಕ್ರವಾರ 1 ಕೋಟಿ ಕಲೆಕ್ಷನ್ ಮಾಡಿದೆ. ಆದರೆ, ಗುರುವಾರಕ್ಕಿಂತ ಅದು ಅರ್ಥದಷ್ಟು ಕಡಿಮೆ ಆಗಿದೆ. ಹಿಂದಿಯಲ್ಲಿ ಕೂಡ 4 ಕೋಟಿಯಿಂದ 3 ಕೋಟಿಗೆ ಇಳಿದಿದೆ. ತಮಿಳು ಹಾಗೂ ಮಲೆಯಾಳಂನಲ್ಲಿ ಸಿನಿಮಾದ ಕ್ರೇಜ್ ಕಡಿಮೆ ಇದೆ. ಹೀಗಾಗಿ, ಎರಡು ಭಾಷೆ ಸೇರಿಸಿ, ಒಟ್ಟಾರೆ ಎರಡು ದಿನದಲ್ಲಿ 1.5 ಕೋಟಿ ಗಳಿಸಲು ಮಾತ್ರ ಸಾಧ್ಯವಾಗಿದೆ.

ಕಲೆಕ್ಷನ್ ಕಡಿಮೆಗೆ ಕಾರಣಗಳು ಏನು?
ನಿನ್ನೆ (ಶುಕ್ರವಾರ) 'ಪೈಲ್ವಾನ್' ಸಿನಿಮಾದ ಕಲೆಕ್ಷನ್ ಎಲ್ಲ ಭಾಷೆಗಳಲ್ಲಿಯೂ ಕಡಿಮೆ ಆಗಿದೆ. ತೆಲುಗಿನಲ್ಲಿ 'ಗ್ಯಾಂಗ್ ಲೀಡರ್' ಸಿನಿಮಾ 'ಪೈಲ್ವಾನ್'ಗೆ ಪೈಪೋಟಿ ನೀಡಿದೆ. ಹಿಂದಿಯಲ್ಲಿ 'ಡ್ರೀಮ್ ಗರ್ಲ್' ಹಾಗೂ 'ಸೆಕ್ಷನ್ 375' ಸಿನಿಮಾಗಳಿಂದ ಪ್ರೇಕ್ಷಕ ವರ್ಗ ವಿಭಜನೆ ಆಗಿದೆ. ಕನ್ನಡದಲ್ಲಿ ಪೈರಸಿ, ನೆಗೆಟಿವ್ ಮಾತುಗಳನ್ನು ಸುಮ್ಮನೆ ಎಂದು ಹಬ್ಬಿಸಲಾಗುತ್ತಿದೆ.

ಒಟ್ಟು 33 ಕೋಟಿ ಕಲೆಕ್ಷನ್ ಆಗಿದೆ
'ಪೈಲ್ವಾನ್' ಸಿನಿಮಾ ಈವರೆಗೆ 33 ಕೋಟಿ ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ. ಮೊದಲ ದಿನ ಒಟ್ಟು 18 ಕೋಟಿ ಗಳಿಸಿದ್ದ ಈ ಸಿನಿಮಾ ಈಗ 15 ಕೋಟಿಗೆ ಇಳಿಕೆ ಆಗಿದೆ. ಎರಡು ದಿನದಲ್ಲಿ ಒಟ್ಟು 33 ಕೋಟಿ ಕಲೆಕ್ಷನ್ ಮಾಡಿದೆ. ಅದೆನೇ ಇದ್ದರೂ, ಒಂದೇ ದಿನದಲ್ಲಿ ಸಿನಿಮಾವನ್ನು ನಿರ್ಧಾರ ಮಾಡಲು ಆಗುವುದಿಲ್ಲ. ಅಲ್ಲದೆ, ವೀಕ್ ಎಂಡ್ ನಲ್ಲಿ ಸಿನಿಮಾದ ಕೆಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ.


Click it and Unblock the Notifications











