ಮೈ ಕೊಡವಿ ನಿಂತ ಕಿಚ್ಚ : 'ಪೈಲ್ವಾನ್' 3ನೇ ದಿನ ಗಳಿಸಿದ್ದೆಷ್ಟು?
Recommended Video
'ಪೈಲ್ವಾನ್' ಸಿನಿಮಾ ಮೂರು ದಿನಗಳ ಯಶಸ್ವಿ ಪ್ರದರ್ಶನಗಳನ್ನು ಕಳೆದು, ಈಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ದೊಡ್ಡ ಕ್ರೇಜ್ ಹುಟ್ಟುಹಾಕಿದೆ.
ಮೊದಲ ದಿನ ಕನ್ನಡದಲ್ಲಿ 10 ಕೋಟಿ ಗಳಿಸಿದ್ದ ಸಿನಿಮಾ, ಎರಡನೇ ದಿನ 9 ಕೋಟಿ ಹಣ ಮಾಡಿತ್ತು. ಆದರೆ, ಮೂರನೇ ದಿನ ಮತ್ತೆ 'ಪೈಲ್ವಾನ್' ಮೇಲೆ ಎದಿದ್ದಾನೆ. ಮೂರನೇ ದಿನ ಅಂದರೆ, ಶನಿವಾರ ಚಿತ್ರದ ಗಳಿಕೆ ಏರಿಕೆ ಕಂಡಿದೆ.
ಕನ್ನಡದಲ್ಲಿ 'ಪೈಲ್ವಾನ್' ಒಳ್ಳೆಯ ಕಲೆಕ್ಷನ್ ಮುಂದುವರೆಸಿದೆ. ಆದರೆ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಲೆಕ್ಕಾಚಾರ ಉಲ್ಟಾ ಆಗಿದೆ. ಅಲ್ಲಿನ ಸಿನಿಮಾಗಳ ಪೈಪೋಟಿಯಿಂದ 'ಪೈಲ್ವಾನ್'ಗೆ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ. ಈ ಎರಡು ಭಾಷೆಗಳಲ್ಲಿ ಸಿನಿಮಾದ ಪ್ರಭಾವ ಕಡಿಮೆ ಆಗಿದೆ.

ಕನ್ನಡದಲ್ಲಿ ಮೂರನೇ ದಿನ ಗಳಿಸಿದ್ದು 10 ಕೋಟಿ
ಕನ್ನಡ ವರ್ಷನ್ 'ಪೈಲ್ವಾನ್' ಸಿನಿಮಾ ಮೂರನೇ ದಿನ ಅಂದರೆ, ಶನಿವಾರ 10 ಕೋಟಿ ಗಳಿಕೆ ಮಾಡಿದೆ. ಮೊದಲ ದಿನ 10 ಕೋಟಿ ಗಳಿಸಿದ್ದ ಸಿನಿಮಾ ಎರಡನೇ ದಿನ 9 ಕೋಟಿ ಗಳಿಸಿತ್ತು. ಆದರೆ, ಶನಿವಾರ ಮತ್ತೆ 'ಪೈಲ್ವಾನ್' ಮೈ ಕೊಡವಿ ನಿಂತಿದ್ದಾನೆ. ಎರಡನೇ ದಿನಕ್ಕಿಂತ ಮೂರನೇ ದಿನದ ಗಳಿಕೆಯಲ್ಲಿ ಏರಿಕೆ ಕಾಣುತ್ತಿದೆ.

ತೆಲುಗು ಮತ್ತು ಹಿಂದಿಯಲ್ಲಿ ಇಳಿ ಮುಖ
ತೆಲುಗು ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿಯೂ 'ಪೈಲ್ವಾನ್' ಗಳಿಕೆ ದಿನದಿಂದ ದಿನಕ್ಕೆ ಇಳಿಮುಖವಾಗಿದೆ. ಹಿಂದಿಯಲ್ಲಿ ಮೂರನೇ ಸಿನಿಮಾ 2 ಕೋಟಿ ಗಳಿಸಿದೆ. ತೆಲುಗಿನಲ್ಲಿ 0.7 ಕೋಟಿ ಗಳಿಸಲು ಮಾತ್ರ ಸಾಧ್ಯವಾಗಿದೆ. ತೆಲುಗಿನಲ್ಲಿ 'ಗ್ಯಾಂಗ್ ಲೀಡರ್' ಸಿನಿಮಾ ಹಾಗೂ ಹಿಂದಿಯಲ್ಲಿ 'ಡ್ರೀಮ್ ಗರ್ಲ್', 'ಸೆಕ್ಷನ್ 375' ಸಿನಿಮಾಗಳು 'ಪೈಲ್ವಾನ್'ಗೆ ಸ್ಪರ್ಧೆ ನೀಡಿವೆ.

ಒಟ್ಟಾರೆ ಕಲೆಕ್ಷನ್ ಮೇಲೆ ಪರಿಣಾಮ
ಕನ್ನಡದಲ್ಲಿ 'ಪೈಲ್ವಾನ್' ಕಲೆಕ್ಷನ್ ಕಡಿಮೆ ಆಗಿಲ್ಲ. ಸುದೀಪ್ ಸ್ಟಾರ್ ಮಟ್ಟಕ್ಕೆ ತಕ್ಕ ಹಾಗೆ ದಿನಕ್ಕೆ 10 ಕೋಟಿಯನ್ನು ಸಿನಿಮಾ ಬಾಚಿಕೊಂಡಿದೆ. ಆದರೆ, ಇತರ ಭಾಷೆಯ ಕಲೆಕ್ಷನ್ ಒಟ್ಟಾರೆ ಗಳಿಕೆ ಮೇಲೆ ಪರಿಣಾಮ ಬೀರಿದೆ. ಮೊದಲ ದಿನ 18 ಕೋಟಿ, ಎರಡನೇ ದಿನ 15 ಕೋಟಿ ಮಾಡಿದ್ದ ಸಿನಿಮಾ, ಮೂರನೇ ದಿನ 14 ಕೋಟಿ ಮಾತ್ರ ಪಡೆದಿದೆ.

ಭಾನುವಾರದ ಗಳಿಕೆ ಮೇಲೆ ನಿರೀಕ್ಷೆ
ತೆಲುಗು ಮತ್ತು ಹಿಂದಿಯಲ್ಲಿ ಇತರ ಸಿನಿಮಾಗಳ ಪೈಪೋಟಿ ಚಿತ್ರಕ್ಕೆ ಹಿನ್ನಡೆ ಆಗುವಂತೆ ಮಾಡಿದೆ. ಕನ್ನಡದಲ್ಲಿ ಪೈರಸಿ ಮತ್ತು ನೆಗೆಟಿವ್ ಕಾಮೆಂಟ್ಸ್ ಗಳನ್ನು ಹಬ್ಬಿಸಲಾಗುತ್ತಿದೆ. ಇವುಗಳನ್ನು ಸಿನಿಮಾ ಎದುರಿಸಬೇಕಾಗಿದೆ. ಕನ್ನಡ ವರ್ಷನ್ ಚಿತ್ರದ ಶನಿವಾರದ ಗಳಿಕೆಯಲ್ಲಿ ಏರಿಕೆ ಕಂಡಿದ್ದು, ಭಾನುವಾರ ಕೂಡ ಹೆಚ್ಚಾಗುತ್ತದೆ ಎನ್ನುವ ನಿರೀಕ್ಷೆ ಇದೆ.


Click it and Unblock the Notifications











