ಪೈಲ್ವಾನ್ ಗಳಿಕೆಗೆ ಬ್ರೇಕ್ ಹಾಕಿದ ಕಿರಾತಕರು: ಲೆಕ್ಕಾಚಾರ ಎಲ್ಲವೂ ಉಲ್ಟಾಪಲ್ಟಾ

Recommended Video

Pailwaan : ಪೈಲ್ವಾನ್ ಗಳಿಕೆಗೆ ಬ್ರೇಕ್ ಹಾಕಿದ ಕಿರಾತಕರು | FILMIBEAT KANNADA

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಸೆಪ್ಟೆಂಬರ್ 12 ರಂದು ಅದ್ಧೂರಿಯಾಗಿ ತೆರೆಕಂಡಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ. ಮೊದಲ ದಿನ ಮೊದಲ ಶೋ ಪೈಲ್ವಾನ್ ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದನ್ನ ಗಮನಿಸಿದ ಬಾಕ್ಸ್ ಆಫೀಸ್ ಪಂಡಿತರು ಗಲ್ಲಾಪೆಟ್ಟಿಗೆ ಯಲ್ಲಿ ಪೈಲ್ವಾನ್ ಅಬ್ಬರಿಸಲಿದೆ ಎಂಬ ಲೆಕ್ಕಾಚಾರ ಹಾಕುತ್ತಿದ್ದರು.

ಅಷ್ಟರಲ್ಲೇ ಕಿರಾತಕರು ಲೆಕ್ಕಾಚಾರವನ್ನ ಉಲ್ಟಾಪಲ್ಟಾ ಮಾಡಿದ್ದಾರೆ. ಪೈಲ್ವಾನ್ ಚಿತ್ರವನ್ನ ಮೂರು ಭಾಷೆಯಲ್ಲಿ ಲೀಕ್ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಇದು ಸಹಜವಾಗಿ ಪೈಲ್ವಾನ್ ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಾಗಿದ್ರೆ, ಪೈಲ್ವಾನ್ ಸಿನಿಮಾ ಮೊದಲ ದಿನದ ಅಂತ್ಯಕ್ಕೆ ಎಷ್ಟು ಗಳಿಸಿದೆ. ವಾರಾಂತ್ಯದಲ್ಲಿ ಎಷ್ಟು ಗಳಿಸಬಹುದು, ಪೈರಸಿಯಾದ ಪರಿಣಾಮ ಯಾವ ಭಾಷೆಯಲ್ಲಿ ಹಿನ್ನಡೆಯಾಗಬಹುದು? ಮುಂದೆ ಓದಿ....

ಪೈರಸಿಯಿಂದ ಕಲೆಕ್ಷನ್ ಕಮ್ಮಿಯಾಗಬಹುದು

ಪೈರಸಿಯಿಂದ ಕಲೆಕ್ಷನ್ ಕಮ್ಮಿಯಾಗಬಹುದು

ಸಹಜವಾಗಿ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆದಾಗ ಕೆಲವು ವರ್ಗದ ಜನರು ಚಿತ್ರಮಂದಿರಕ್ಕೆ ಹೋಗುವ ಮನಸ್ಸು ಮಾಡುವುದಿಲ್ಲ. ಮೊಬೈಲ್ ನಲ್ಲಿ ಡೌನ್ ಲೌಡ್ ಮಾಡಿ ನೋಡಿದ್ರೆ ಆಯ್ತು ಬಿಡು ಎಂಬ ಮನೋಭಾವಕ್ಕೆ ಬರ್ತಾರೆ. ಇದು ಸಹಜವಾಗಿ ಚಿತ್ರತಂಡಕ್ಕೆ ಹಿನ್ನಡೆ ಉಂಟು ಮಾಡುತ್ತೆ. ಇದರಿಂದ ಚಿತ್ರಮಂದಿರಕ್ಕೆ ಬರುವ ಜನಸಂಖ್ಯೆಯೂ ಕಮ್ಮಿಯಾಗುತ್ತೆ, ಕಲೆಕ್ಷನ್ ಕೂಡ ಕುಸಿಯುತ್ತೆ.

ಮೊದಲ ಮೂರು ದಿನ ಬಹಳ ಮುಖ್ಯ

ಮೊದಲ ಮೂರು ದಿನ ಬಹಳ ಮುಖ್ಯ

ಸಾಮಾನ್ಯವಾಗಿ ಎಷ್ಟೇ ದೊಡ್ಡ ಸಿನಿಮಾ ರಿಲೀಸ್ ಆದರೂ ಮೊದಲ ಮೂರು ದಿನಗಳು ಬಹಳ ಮುಖ್ಯವಾಗಿರುತ್ತೆ. ಕೆಲವೊಮ್ಮೆ ಗುರುವಾರ ರಿಲೀಸ್ ಮಾಡಿದ್ರೆ ನಾಲ್ಕು ದಿನ ಕೈಯಲ್ಲಿರುತ್ತೆ. ಈ ದಿನಗಳಲ್ಲಿ ಚಿತ್ರಕ್ಕೆ ಅತಿ ಹೆಚ್ಚು ಕಲೆಕ್ಷನ್ ತಂದು ಕೊಡುತ್ತೆ. ಆದರೆ, ಮೊದಲ ದಿನವೇ ಸಿನಿಮಾ ಲೀಕ್ ಆದರೆ ಉಳಿದ ಎರಡು ಅಥವಾ ಮೂರು ದಿನದ ಮೇಲೆ ಪರಿಣಾಮ ಬೀರುತ್ತೆ.

ಕನ್ನಡ ಪೈರಸಿ ಆಗಿದ್ದು ಭಾರಿ ಹಿನ್ನಡೆ

ಕನ್ನಡ ಪೈರಸಿ ಆಗಿದ್ದು ಭಾರಿ ಹಿನ್ನಡೆ

ತಮಿಳು ರಾಕರ್ಸ್ ವೆಬ್ ಸೈಟ್ ಅವರು ಹಿಂದಿ, ತೆಲುಗು ಮತ್ತು ತಮಿಳು ವರ್ಷನ್ ಚಿತ್ರಗಳನ್ನ ಬಹಳ ಬೇಗ ಲೀಕ್ ಮಾಡ್ತಾರೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಪೈಲ್ವಾನ್ ಲೀಕ್ ಆಗಿದ್ರೆ ಕರ್ನಾಟಕದಲ್ಲಿ ಅಷ್ಟಾಗಿ ಪರಿಣಾಮ ಆಗುತ್ತಿರಲ್ಲಿ. ಕನ್ನಡಿಗರು ಥಿಯೇಟರ್ ನಲ್ಲೇ ಸಿನಿಮಾ ನೋಡುತ್ತಿದ್ದರು. ಆದರೆ ಕನ್ನಡ ಭಾಷೆಯಲ್ಲೂ ಪೈಲ್ವಾನ್ ಲೀಕ್ ಆಗಿದ್ದರಿಂದ ಕರ್ನಾಟಕದಲ್ಲೂ ಭಾರಿ ಎಫೆಕ್ಟ್ ಆಗುವ ಸಾಧ್ಯತೆ ಇದೆ.

100 ಕೋಟಿ ಗಳಿಸುವುದು ಸಾಧ್ಯನಾ?

100 ಕೋಟಿ ಗಳಿಸುವುದು ಸಾಧ್ಯನಾ?

ಪೈಲ್ವಾನ್ ಚಿತ್ರ ಬಿಡುಗಡೆಗೂ ಮೊದಲೇ ನೂರು ಕೋಟಿ ಗಳಿಸುತ್ತೆ ಎಂದು ಅಂದಾಜಿಸಲಾಗಿತ್ತು. ಸಿನಿಮಾಗೆ ರೆಸ್ಪಾನ್ಸ್ ನೋಡಿದ ಇದು ಪಕ್ಕಾ ಆಗುತ್ತೆ ಎನ್ನಲಾಯಿತು. ಈಗ ಸಿನಿಮಾ ಲೀಕ್ ಆದ ಪರಿಣಾಮ ಕಲೆಕ್ಷನ್ ನಲ್ಲಿ ಭಾರಿ ವ್ಯತ್ಯಾಸವಾಗಬಹುದು ಎಂದು ಹೇಳಲಾಗುತ್ತಿದೆ.

ಮೊದಲ ದಿನ ಪೈಲ್ವಾನ್ ಗಳಿಕೆ ಎಷ್ಟು?

ಮೊದಲ ದಿನ ಪೈಲ್ವಾನ್ ಗಳಿಕೆ ಎಷ್ಟು?

ಸುದೀಪ್ ಪೈಲ್ವಾನ್ ಮೊದಲ ದಿನ ಭಾರಿ ದೊಡ್ಡ ಮೊತ್ತವನ್ನ ಗಳಿಸುವ ನಿರೀಕ್ಷೆ ಇತ್ತು. ಅದರಂತೆ ಮೊದಲ ದಿನ ಸುಮಾರು 10 ಕೋಟಿವರೆಗೂ ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇದು ಮತ್ತೆರಡು ದಿನದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಸಿನಿಮಾ ಲೀಕ್ ಆದರ ಪರಿಣಾಮ ಕಮ್ಮಿಯಾದರೂ ಅಚ್ಚರಿ ಇಲ್ಲ.

ಅಂದು ದರ್ಶನ್, ಪುನೀತ್ ಗೂ ಇದೇ ಆಗಿತ್ತು

ಅಂದು ದರ್ಶನ್, ಪುನೀತ್ ಗೂ ಇದೇ ಆಗಿತ್ತು

ಕನ್ನಡ ಸಿನಿಮಾಗಳನ್ನ ತಮಿಳ್ ರಾಕರ್ಸ್ ಲೀಕ್ ಮಾಡುತ್ತಿರುವುದು ಇದೇ ಮೊದಲಲ್ಲ. ಇದಕ್ಕು ಮುಂಚೆ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ನಟಸಾರ್ವಭೌಮ, ದರ್ಶನ್ ಅಭಿನಯಿಸಿದ್ದ ಯಜಮಾನ, ಕುರುಕ್ಷೇತ್ರ ಅಂತಹ ದೊಡ್ಡ ಚಿತ್ರಗಳನ್ನ ಲೀಕ್ ಮಾಡಿತ್ತು. ಚಿತ್ರ ಚೆನ್ನಾಗಿದ್ದ ಪರಿಣಾಮ ಒಳ್ಳೆಯ ಪ್ರದರ್ಶನ ಕಂಡಿತ್ತು.

More from Filmibeat

English summary
Kiccha Sudeep starrer Pailwaan movie leaked in tamil, telugu and kannada version. this is going to impact on box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X