'ಪೈಲ್ವಾನ್' ಚಿತ್ರದ ಬಿಗ್ ನ್ಯೂಸ್ ಹೇಳಿದ ಸುನೀಲ್ ಶೆಟ್ಟಿ
ಒಂದು ಸಂತೋಷದ ವಿಷಯವನ್ನು ಇಂದು (ಬುದವಾರ) 11 ಗಂಟೆಗೆ ಹಂಚಿಕೊಳ್ಳುತ್ತೇನೆ ಎಂದು ನಟ ಸುದೀಪ್ ತಿಳಿಸಿದ್ದರು. ಆ ವಿಷಯ ನಟ ಸುದೀಪ್ ಹಾಗೂ ಸುನೀಲ್ ಶೆಟ್ಟಿ ಮೂಲಕ ಹೊರಬಂದಿದೆ.
'ಪೈಲ್ವಾನ್' ಸಿನಿಮಾದ ಬಿಗ್ ನ್ಯೂಸ್ ಇದಾಗಿದೆ. ಉತ್ತರ ಭಾರತದಲ್ಲಿ ಚಿತ್ರದ ವಿತರಣೆ ಹಕ್ಕನ್ನು ಜೀ ಸ್ಟೂಡಿಯೋಸ್ ಖರೀದಿ ಮಾಡುತ್ತಿದೆ. ಒಂದು ಪ್ರತಿಷ್ಟಿತ ವಿತರಣೆ ಸಂಸ್ಥೆಯ ಮೂಲಕ ಉತ್ತರ ಭಾರತದ ಪ್ರೇಕ್ಷಕರಿಗೆ ಸಿನಿಮಾ ತಲುಪುತ್ತಿದೆ.

ಸಿನಿಮಾದ ಹೊಸ ಪೋಸ್ಟರ್ ಮೂಲಕ ಈ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟ ಸುನೀಲ್ ಶೆಟ್ಟಿ ಹಂಚಿಕೊಂಡಿದ್ದಾರೆ. ಜೀ ಸ್ಟೂಡಿಯೋಸ್ ಜೊತೆಗೆ ಸಹಭಾಗಿತ್ವ ವಹಿಸಲು ಖುಷಿ ಆಗುತ್ತಿದೆ ಎಂದಿದ್ದಾರೆ.
ಕನ್ನಡದಲ್ಲಿ ಕಾರ್ತಿಕ್ ಗೌಡ ತಮ್ಮ ಕೆ ಆರ್ ಜಿ ಸ್ಟೂಡಿಯೋ ಮೂಲಕ ಚಿತ್ರದ ವಿತರಣೆ ಮಾಡುತ್ತಿದ್ದಾರೆ. ತೆಲುಗಿನಲ್ಲಿ ವಾರಾಹಿ ಚಲನಚಿತ್ರಂ ಸಂಸ್ಥೆ ಡಿಸ್ಟ್ರಿಬ್ಯೂಟೆಡ್ ರೈಟ್ಸ್ ತೆಗೆದುಕೊಂಡಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂ ನಲ್ಲಿ ಸಿನಿಮಾ ನಿರ್ಮಾಣ ಆಗಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ.

ಕೃಷ್ಣ ಈ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರ ಆಗಸ್ಟ್ 29 ರಂದು ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ಅರ್ಜುನ್ ಜನ್ಯ ಸಂಗೀತ ಸಿನಿಮಾಗೆ ಇದ್ದು, ನಾಳೆ (ಗುರುವಾರ) ಮೊದಲ ಥೀಮ್ ಸಾಂಗ್ ರಿಲೀಸ್ ಆಗುತ್ತಿದೆ.


Click it and Unblock the Notifications











