'ಪೈಲ್ವಾನ್' ಪೋಸ್ಟರ್ ರಿಲೀಸ್ ಮಾಡಿದ ಸೂಪರ್ ಸ್ಟಾರ್ ಏನಂದ್ರು?

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯ ಪೋಸ್ಟರ್ ಅನಾವರಣಗೊಂಡಿದೆ. ಸುದೀಪ್ ಅವರ ಈ ಸ್ಟೈಲಿಶ್ ಪೋಸ್ಟರ್ ಕಂಡು ಸಿನಿ ಜಗತ್ತು ದಂಗಾಗಿದೆ.

ಸುದೀಪ್ ಈ ಚಿತ್ರಕ್ಕಾಗಿ ಇಷ್ಟೊಂದು ವರ್ಕೌಟ್ ಮಾಡಿದ್ದಾರಾ ಎಂದು ಬಾಯ್ಮೇಲೆ ಬೆರಳಿಟ್ಟು ಅಚ್ಚರಿಯಾಗಿ ನೋಡುವಂತಾಗಿದೆ. ಅಷ್ಟರ ಮಟ್ಟಿಗೆ ಸುದೀಪ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಸುದೀಪ್ ಅವರ ಫಿಟ್ನೆಸ್ ಎಲ್ಲರ ಕಣ್ಣು ಕುಕ್ಕುತ್ತಿದೆ.

ಇನ್ನು ಈ ಪೋಸ್ಟರ್ ಗಳನ್ನ ಅಯಾ ಭಾಷೆಯಲ್ಲಿ ಆಯಾ ಸೂಪರ್ ಸ್ಟಾರ್ ನಟರು ರಿಲೀಸ್ ಮಾಡಿದ್ದು, ಅವರೂ ಕೂಡ ಫುಲ್ ಖುಷ್ ಆಗಿದ್ದಾರೆ. ಚಿರಂಜೀವಿ, ಮೋಹನ್ ಲಾಲ್, ವಿಜಯ್ ಸೇತುಪತಿ, ಸುನೀಲ್ ಶೆಟ್ಟಿ ಪೈಲ್ವಾನ್ ಪೋಸ್ಟರ್ ನೋಡಿ ಏನಂದ್ರು? ಮುಂದೆ ಓದಿ....

ಚಿರಂಜೀವಿ ಏನಂದ್ರು?

ಸುದೀಪ್ ಅಂತಹ ವರ್ಸಟೈಲ್ ನಟ ಈಗ ಪೈಲ್ವಾನ್ ಆಗಿ ಬರ್ತಿದ್ದಾರೆ. ಈ ಚಿತ್ರದಲ್ಲಿ ಅವರ ಲುಕ್ ಕಿಲ್ಲಿಂಗ್ ಆಗಿದ್ದು, ನಿಜವಾದ ಪೈಲ್ವಾನ್ ರೀತಿ ಕಾಣ್ತಿದ್ದಾರೆ. ಈ ಪೈಲ್ವಾನ್ ನನ್ನ ತೆಲುಗು ಮಂದಿ ನಿಜವಾಗಲೂ ಮೆಚ್ಚಿಕೊಳ್ಳುತ್ತಾರೆ. ಆಲ್ ದಿ ಬೆಸ್ಟ್ ಸುದೀಪ್'' ಎಂದು ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದಾರೆ.

ವಿಜಯ್ ಸೇತುಪತಿ ಏನಂದ್ರು?

ಪೈಲ್ವಾನ್ ಚಿತ್ರದ ಪೋಸ್ಟರ್ ಶೇರ್ ಮಾಡಲು ಸಂತೋಷವಾಗುತ್ತಿದೆ. ಶುಭಾಶಯಗಳು ಸುದೀಪ್ ಬ್ರದರ್ ' ಎಂದು ತಮಿಳು ಸ್ಟಾರ್ ನಟ ವಿಜಯ್ ಸೇತುಪತಿ ಟ್ವೀಟ್ ಮಾಡಿದ್ದಾರೆ. ತಮಿಳು ಭಾಷೆಯ ಪೈಲ್ವಾನ್ ಪೋಸ್ಟರ್ ನ್ನ ವಿಜಯ್ ಸೇತುಪತಿ ರಿಲೀಸ್ ಮಾಡಿದ್ದರು.

ಮೋಹನ್ ಲಾಲ್

ಮಲಯಾಳಂ ಭಾಷೆಯ ಪೈಲ್ವಾನ್ ಪೋಸ್ಟರ್ ಬಿಡುಗಡೆ ಮಾಡಿದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಸುದೀಪ್ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಅದ್ಭುತ ಅನುಭವ ಎಂದ ಸುನೀಲ್ ಶೆಟ್ಟಿ

ಪೈಲ್ವಾನ್ ಚಿತ್ರದ ಹಿಂದಿ ಪೋಸ್ಟರ್ ರಿಲೀಸ್ ಮಾಡಿದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪೈಲ್ವಾನ್ ಮತ್ತು ಸುದೀಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸಿದ್ದು ಅದ್ಭುತ ಅನುಭವ ಎಂದು ಬಣ್ಣಿಸಿದ್ದಾರೆ. ವಿಶೇಷ ಅಂದ್ರೆ, ಸುನೀಲ್ ಶೆಟ್ಟಿ ಸರ್ಕಾರ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ.

More from Filmibeat

English summary
Kiccha sudeep starrer Pailwan new poster released in five language. chiranjeevi in telugu, vijay sethupathi in tamil, mohan lal in malayalam, sunil shetty released in bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X