ಮೊನ್ನೆ ದರ್ಶನ್ ರಾಬರ್ಟ್ ಈಗ ಸುದೀಪ್ ಪೈಲ್ವಾನ್
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಹವಾ ಜೋರಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಪರಭಾಷೆಯಲ್ಲೂ ರಾಬರ್ಟ್ ಸದ್ದು ಮಾಡ್ತಿದೆ. ಮೊನ್ನೆಯಷ್ಟೇ ತಮಿಳು ಸುದ್ದಿ ಪತ್ರಿಕೆಯಲ್ಲಿ ರಾಬರ್ಟ್ ಥೀಮ್ ಪೋಸ್ಟರ್ ಬಗ್ಗೆ ಸುದ್ದಿ ವರದಿ ಮಾಡಿದ್ದರು. ಈ ಪೇಪರ್ ಕಟ್ಟಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಕನ್ನಡದಲ್ಲಿ ಮಾತ್ರ ತೆರೆಕಾಣುತ್ತಿದ್ದರೂ, ತಮಿಳು ಭಾಷೆಯವರ ಗಮನ ಸೆಳೆಯುವಲ್ಲಿ ದರ್ಶನ್ ಸಿನಿಮಾ ವಿಶೇಷವೆನಿಸಿಕೊಂಡಿತ್ತು. ಇದೀಗ, ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಸರದಿ.
ಈಗಾಗಲೇ ಸಂಪೂರ್ಣ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಪೈಲ್ವಾನ್ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತೆರೆಕಾಣುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಯಲ್ಲಿ ಪೈಲ್ವಾನ್ ಬರಲಿದೆ.

ಈ ಮಧ್ಯೆ ಪೈಲ್ವಾನ್ ಚಿತ್ರದ ಬಗ್ಗೆ ತಮಿಳಿನ ದಿನಕರನ್ ಮತ್ತು ದಿನತಂತಿ ಪತ್ರಿಕೆಗಳಲ್ಲಿ ಸುದ್ದಿ ಕವರ್ ಮಾಡಲಾಗಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ. ಕನ್ನಡ ವಾಹಿನಿಗಳಲ್ಲಿ ಪರಭಾಷೆ ಚಿತ್ರಗಳಿಗೆ ಸಿಗುತ್ತಿರುವ ಪ್ರಚಾರ ನೋಡಿ ಬೇಸರವಾಗುವ ಅಭಿಮಾನಿಗಳು ಈಗ ಪರಭಾಷೆ ಮಾಧ್ಯಮಗಳಲ್ಲಿ ಕನ್ನಡ ಸಿನಿಮಾದ ಪ್ರಚಾರ ನೋಡಿ ಖುಷಿಪಡುವಂತಾಗಿದೆ.
ಹೆಬ್ಬುಲಿ ಚಿತ್ರದ ನಂತರ ಸುದೀಪ್ ಈ ಸಿನಿಮಾ ಮಾಡ್ತಿದ್ದು, ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಪೇಪರ್ ಕಟ್ಟಿಂಗ್ ಕೂಡ ನಿರ್ದೇಶಕರೇ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.


Click it and Unblock the Notifications











