ಸೋಮವಾರ ಕುರುಕ್ಷೇತ್ರ, ಮಂಗಳವಾರ ಪೈಲ್ವಾನ್.!
Recommended Video
ಕನ್ನಡ ಚಿತ್ರರಂಗದಲ್ಲಿ ಸದ್ಯ ಕುರುಕ್ಷೇತ್ರ ಮತ್ತು ಪೈಲ್ವಾನ್ ಚಿತ್ರಗಳ ಅಬ್ಬರ ಜೋರಾಗಿದೆ. ಎರಡೂ ಚಿತ್ರಗಳು ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದು, ಪ್ರಚಾರ ಕಾರ್ಯ ಆರಂಭಿಸಿದೆ.
ಸದ್ಯ ಟ್ರೈಲರ್, ಟೀಸರ್ ಮೂಲಕ ಭಾರಿ ಕುತೂಹಲ ಮೂಡಿಸಿರುವ ಕುರುಕ್ಷೇತ್ರ ಈಗ ಒಂದೊಂದೆ ಹಾಡು ಬಿಟ್ಟು ಅಭಿಮಾನಿಗಳಿಗೆ ಖುಷಿ ಕೊಡ್ತಿದೆ. ಕುರುಕ್ಷೇತ್ರದ ಗ್ಯಾಪ್ನನಲ್ಲೇ ಪೈಲ್ವಾನ್ ಕೂಡ ಆಡಿಯೋ ಸಂಭ್ರಮಕ್ಕೆ ಮುಂದಾಗಿದೆ.
ಕುರುಕ್ಷೇತ್ರದ ನಾಲ್ಕು ಹಾಡು ಬಿಡುಗಡೆಯಾಗಿದ್ರೆ, ಪೈಲ್ವಾನ್ ಚಿತ್ರದ ಒಂದು ಹಾಡು ಬಂದಿದೆ. ಈಗ ಪೈಲ್ವಾನ್ ಎರಡನೇ ಹಾಡು ಮಂಗಳವಾರ ಬಿಡುಗಡೆಯಾಗಲಿದೆ.

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಾರೋ ಪೈಲ್ವಾನ್ ಎಂಬ ಲಿರಿಕಲ್ ವಿಡಿಯೋ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ ಸೇರಿ ಎಲ್ಲ ಭಾಷೆಯಲ್ಲಿ ಈ ಹಾಡು ಬರಲಿದೆ ಎಂದು ನಿರ್ದೇಶಕ ಕೃಷ್ಣ ಮತ್ತು ಸುದೀಪ್ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಎರಡನೇ ಹಾಡಿನ ಲಿರಿಕಲ್ ವಿಡಿಯೋದ ಪೋಸ್ಟರ್ ಬಿಡುಗಡೆಯಾಗಿದ್ದು, ಸುದೀಪ್ ಮತ್ತು ಸುನೀಲ್ ಶೆಟ್ಟಿ ಒಟ್ಟಿಗೆ ಹೆಜ್ಜೆ ಹಾಕುತ್ತಿರುವ ಫೋಸ್ ಗಮನ ಸೆಳೆಯುತ್ತಿದೆ.
ಸಂಚಿತ್ ಹೆಗ್ಡೆ ಹಾಡಿರುವ ಕಣ್ಣಾಮಣಿಯೇ.....ಹಾಡು ಹಿಟ್ ಆಗಿದೆ. ಅದಕ್ಕೂ ಮುಂಚೆ ಪೈಲ್ವಾನ್ ಥೀಮ್ ಮ್ಯೂಸಿಕ್ ಬಂದಿತ್ತು. ಈಗ ಎರಡನೇ ಹಾಡು ಬರ್ತಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಎರಡನೇ ಹಾಡಿನ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಹೆಬ್ಬುಲಿ ನಂತರ ಕೃಷ್ಣ ಮತ್ತು ಸುದೀಪ್ ಜೋಡಿಯಲ್ಲಿ ಮೂಡಿಬಂದಿರುವ ಪೈಲ್ವಾನ್, ಸೆಪ್ಟೆಂಬರ್ 12 ರಂದು ಬಹುಭಾಷೆಯಲ್ಲಿ ತೆರೆಕಾಣಲಿದೆ.


Click it and Unblock the Notifications











