ಪೈಲ್ವಾನ್ ಚಿತ್ರದ ಟಿಕೆಟ್ ಬೆಲೆಯಲ್ಲಿ ಆಫರ್ ನೀಡಿದ ನಿರ್ಮಾಪಕ

ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದೆ. ಸೆಪ್ಟೆಂಬರ್ 12 ರಂದು ತೆರೆಕಂಡಿದ್ದ ಪೈಲ್ವಾನ್ ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸಿ ವರ್ಷದ ಮತ್ತೊಂದು ಹಿಟ್ ಚಿತ್ರ ಆಗಿ ಹೊರಹೊಮ್ಮಿದೆ.

ಪೈಲ್ವಾನ್ ಸಿನಿಮಾ ಹಾಫ್ ಸೆಂಚುರಿ ಬಾರಿಸಿದ ವಿಶೇಷವಾಗಿ ನಿರ್ಮಾಪಕ ಕೃಷ್ಣ ಅವರು ಪ್ರೇಕ್ಷಕರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಈ ವಾರ ಚಿತ್ರಮಂದಿರದಲ್ಲಿ ಪೈಲ್ವಾನ್ ನೋಡುವವರಿಗೆ ಟಿಕೆಟ್ ಬೆಲೆಯಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಲಾಗಿದೆ.

ಆದರೆ, ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಈ ಆಫರ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೃಷ್ಣ ''ಈ ಗೆಲುವು ನಿಮ್ಮಿಂದ !!! ನೀವೆಲ್ಲ ನಮ್ಮ ಸಂತೋಷಕ್ಕೆ ಮೆರುಗು ತಂದಿದ್ದೀರಿ.. ಈ ಸಂತೋಷವನ್ನು ನಿಮ್ಮಜೊತೆ ಹಂಚಿಕೊಳ್ಳುವ ಅಸೆ ನಮಗೆ !!! ತೆರೆ ಮೇಲೆ ಪೈಲ್ವಾನ್ ಹೋರಾಡಿದ್ದು ಅವಕಾಶವಂಚಿತರಿಗಾಗಿ ಈಗ ಅಂಥವರಿಗೂ ಸಿನೆಮಾ ನೋಡುವ ಅವಕಾಶ ರಾಜ್ಯದಂತ್ಯ ವಾರ ಪೂರ್ತಿ ಟಿಕೆಟ್ ಬೆಲೆ 50% ಮಾತ್ರ !!!. (Except Multiplexes)'' ಎಂದಿದ್ದಾರೆ.

Pailwaan Ticket Price Reduced

ನಿರ್ಮಾಪಕರ ಈ ನಡೆಯ ಬಗ್ಗೆ ಕಿಚ್ಚ ಸುದೀಪ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನುಳಿದಂತೆ ಸುದೀಪ್ ನಾಯಕನಾಗಿದ್ದ ಈ ಚಿತ್ರದಲ್ಲಿ ಆಕಾಂಕ್ಷಾ ಸಿಂಗ್ ನಾಯಕಿಯಾಗಿದ್ದರು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ, ಅವಿನಾಶ್, ಕಾಮಿಡಿ ಕಿಲಾಡಿಗಳು ಅಪ್ಪಣ್ಣ ಸೇರಿದಂತೆ ಹಲವರು ಪೈಲ್ವಾನ್ ಗೆ ಸಾಥ್ ನೀಡಿದ್ದಾರೆ.

ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಘೋಷಿಸಿಲ್ಲ. ಆದರೂ, ಸುದೀಪ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪೈಲ್ವಾನ್ ಕಾರಣವಾಗಿದೆ.

More from Filmibeat

English summary
Kiccha Sudeep Starrer Pailwaan movie completes 50 days. so, producer announced 50% discount in ticket price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X