ಕೆಜಿಎಫ್, ಕುರುಕ್ಷೇತ್ರದ ಮುಂದೆ ಗೆದ್ದು ನಿಲ್ಲಲೇಬೇಕಿದೆ ಪೈಲ್ವಾನ್
ಸುದೀಪ್ ಅಭಿನಯದ ಪೈಲ್ವಾನ್ ಭಾರಿ ನಿರೀಕ್ಷೆಯ ಚಿತ್ರ. ದಿ ವಿಲನ್ ಬಳಿಕ ಸುದೀಪ್ ಕಾಣಿಸಿಕೊಂಡಿರುವ ಚಿತ್ರ. ದಿ ವಿಲನ್ ಚಿತ್ರ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಹಾಗಾಗಿ, ಪೈಲ್ವಾನ್ ಮೇಲೆ ಕಲೆಕ್ಷನ್ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.
Recommended Video
ಒಂದು ದೃಷ್ಟಿಯಲ್ಲಿ ಪೈಲ್ವಾನ್ ಸಿನಿಮಾವನ್ನ ಸಾಮಾನ್ಯವಾಗಿ ನೋಡಿಬಿಡಬಹುದು. ಇನ್ನೊಂದು ದೃಷ್ಟಿಯಲ್ಲಿ ನೋಡುವುದಾರೇ ಪೈಲ್ವಾನ್ ಗೆ ಇದು ಒತ್ತಡದ ಸಂದರ್ಭ. ಹೌದು, ಕೆಜಿಎಫ್ ಮತ್ತು ಕುರುಕ್ಷೇತ್ರ ಚಿತ್ರಗಳು ಪ್ಯಾನ್ ಇಂಡಿಯಾದಲ್ಲಿ ಗೆದ್ದು ಬೀಗಿವೆ.
ಈ ಎರಡು ಚಿತ್ರಗಳ ಬಳಿಕ ಬರುತ್ತಿರುವ ಪೈಲ್ವಾನ್ ಕೂಡ ಪ್ಯಾನ್ ಇಂಡಿಯಾ ಸಿನಿಮಾ. ಅದಕ್ಕೂ ಮೇಲಾಗಿ ಸ್ಯಾಂಡಲ್ ವುಡ್ ನಲ್ಲಿ ಇದು ಪ್ರತಿಷ್ಠೆಯ ಚಿತ್ರವೂ ಆಗಿದೆ. ಅದಕ್ಕೆ ಒಂದಿಷ್ಟು ಅಂಶಗಳನ್ನ ಇಲ್ಲಿ ಚರ್ಚೆ ಮಾಡಲಾಗಿದೆ. ಏನದು? ಮುಂದೆ ಓದಿ....

ಕೆಜಿಎಫ್ ನಂತೆ ಪೈಲ್ವಾನ್ ಅಬ್ಬರ
ಯಶ್ ಅಭಿನಯಿಸಿದ್ದ ಕೆಜಿಎಫ್ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಇದುವರೆಗೂ ಯಶ್ ಸಿನಿಮಾ ಯಾವುದು ಬೇರೆ ಭಾಷೆಗೆ ಹೋಗಿರಲಿಲ್ಲ. ರಾಕಿಂಗ್ ಸ್ಟಾರ್ ಕೂಡ ಬೇರೆ ರಾಜ್ಯಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಲಿಲ್ಲ. ಆದರೆ ಕೆಜಿಎಫ್ ಜೊತೆ ಯಶ್ ಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಸುದೀಪ್ ಈಗಾಗಲೇ ಎಲ್ಲ ಇಂಡಸ್ಟ್ರಿಯಲ್ಲೂ ಪರಿಚಯ ಇರುವ ನಟ. ಕಿಚ್ಚನ ಚಿತ್ರಗಳಿಗೆ ಸಹಜವಾಗಿ ಬೇಡಿಕೆ ಹೆಚ್ಚಿರುತ್ತೆ. ಹಾಗಾಗಿ, ಪೈಲ್ವಾನ್ ಮೇಲೆ ಕೂಡ ನಿರೀಕ್ಷೆ ಹೆಚ್ಚಿದೆ.

ಕುರುಕ್ಷೇತ್ರದ ಜೊತೆ ಪೈಲ್ವಾನ್ ಸವಾರಿ
ಕೆಜಿಎಫ್ ಚಿತ್ರದ ಸಕ್ಸಸ್ ಬಳಿಕ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಕಂಡಿತ್ತು. ದರ್ಶನ್ ಗೂ ಕೂಡ ಇದು ಮೊದಲ ಪ್ಯಾನ್ ಇಂಡಿಯಾ ಚಿತ್ರ. ಕುರುಕ್ಷೇತ್ರಕ್ಕೂ ಎಲ್ಲ ಭಾಷೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನೂರು ಕೋಟಿ ಗಳಿಸಿದೆ ಎಂದು ಚಿತ್ರತಂಡ ಕೂಡ ಸಂಭ್ರಮಿಸಿದೆ. ಹಾಗಾಗಿ, ಸುದೀಪ್ ಪೈಲ್ವಾನ್ ಕೂಡ ನೂರು ಕೋಟಿ ಗಳಿಸುತ್ತೆ ಎನ್ನುವ ನಿರೀಕ್ಷೆ, ಲೆಕ್ಕಾಚಾರ ಗಾಂಧಿನಗರದಲ್ಲಿದೆ.

ಇನ್ನೊಂದು ಹಂತಕ್ಕೆ ಕರೆದುಕೊಂಡ ಹೋಗಬೇಕಿದೆ
ವೈಯಕ್ತಿಕವಾಗಿ ಸುದೀಪ್ ಅವರಿಗೆ ಪೈಲ್ವಾನ್ ಸಿನಿಮಾ ಇನ್ನೊಂದು ಹಂತಕ್ಕೆ ಕರೆದುಕೊಂಡು ಹೋಗಬೇಕಿರುವ ಸಿನಿಮಾ. ಕಿಚ್ಚನಿಗೂ ಈ ಚಿತ್ರದ ಮೇಲೆ ಆ ನಂಬಿಕೆ ಇದೆ. ಈ ಚಿತ್ರವೂ ಸೂಪರ್ ಡೂಪರ್ ಹಿಟ್ ಬಾರಿಸಿದರೆ ಕನ್ನಡ ಚಿತ್ರರಂಗದ ತಾಕತ್ ಇನ್ನೊಂದು ಹಂತಕ್ಕೆ ಹೋದಂತೆ.

100 ಕೋಟಿ ಗಳಿಸಲೇಬೇಕಾದ ಒತ್ತಡವೂ ಇದೆ
ಇದೆಲ್ಲ ಪಕ್ಕಕ್ಕೆ ಇಟ್ಟರೂ ಗಳಿಕೆ ವಿಚಾರದಲ್ಲಿ ಪೈಲ್ವಾನ್ ಚಿತ್ರಕ್ಕೆ ಭಾರಿ ಒತ್ತಡವಿದೆ. ಯಾಕಂದ್ರೆ, ಕೆಜಿಎಫ್ ಮತ್ತು ಕುರುಕ್ಷೇತ್ರ ನೂರು ಕೋಟಿ ಗಳಿಸಿದೆ ಎನ್ನಲಾಗಿದೆ. ಹಾಗಾಗಿ, ಪೈಲ್ವಾನ್ ಚಿತ್ರವೂ ನೂರು ಕೋಟಿ ಕ್ಲಬ್ ಸೇರಬೇಕಾದ ಅನಿವಾರ್ಯತೆ ಇದೆ.


Click it and Unblock the Notifications











