'ಪೈಲ್ವಾನ್' ಗರಡಿಯಲ್ಲಿ ಸಿದ್ಧವಾಗಿದೆ 'ಕೆಜಿಎಫ್' ಮೀರಿಸುವ ತಂತ್ರ.!

Recommended Video

ಕೆಜಿಎಫ್ ಕನ್ನಡ ಸಿನಿಮಾಗೆ ಟಫ್ ಫೈಟ್ ಕೊಡಲು ಬರ್ತಿದೆ ಸುದೀಪ್ ಪೈಲ್ವಾನ್ | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಸದ್ಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಪ್ರಮುಖ ಕಾರಣ, ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು. ಅದಕ್ಕೆ ತಕ್ಕಂತೆ ಟ್ರೈಲರ್ ಕಟ್ ಮಾಡಿರುವುದು ಭಾರತೀಯ ಸಿನಿಇಂಡಸ್ಟ್ರಿಯ ಕಣ್ಣುಕುಕ್ಕುವಂತೆ ಮಾಡಿದೆ.

ಸತತವಾಗಿ ಮೂರು ದಿನಗಳ ಕಾಲ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿತ್ತು ಕೆಜಿಎಫ್ ಟ್ರೈಲರ್. ವೀಕ್ಷಣೆಯಲ್ಲಿ 20 ಮಿಲಿಯನ್ ದಾಟಿರುವುದು ಮತ್ತೊಂದು ದಾಖಲೆ. ಇನ್ನು ಪರಭಾಷೆ ತಾರೆಯರಂತೂ ಕೆಜಿಎಫ್ ಚಿತ್ರದ ಬಗ್ಗೆ ಪ್ರಶಂಸೆಗಳ ಸುರಿಮಳೆ ಗೈದಿದ್ದಾರೆ.

ಇನ್ನು ಪ್ರೀ ರಿಲೀಸ್-ಕಲೆಕ್ಷನ್ ನಲ್ಲಿ ಕೆಜಿಎಫ್ ದೊಡ್ಡ ಬಿಸಿನೆಸ್ ಮಾಡಿದೆ ಎಂಬ ಲೆಕ್ಕಾಚಾರ ಹಾಕಲಾಗ್ತಿದೆ. ಸಿನಿಮಾ ಬಿಡುಗಡೆಯ ನಂತರವಂತೂ ನೂರು ಕೋಟಿ ಕ್ಲಬ್ ಸೇರೋದು ಪಕ್ಕಾ ಎನ್ನಲಾಗ್ತಿದೆ. ಹೀಗೆ, ಕೆಜಿಎಫ್ ಎಂಬ ಕನ್ನಡ ಸಿನಿಮಾ ರಾಷ್ಟ್ರಮಟ್ಟದಲ್ಲಿ ಇಷ್ಟೇಲ್ಲಾ ಸಂಚಲನ ಸೃಷ್ಟಿ ಮಾಡಿದೆ. ಇದೀಗ, ಕೆಜಿಎಫ್ ಚಿತ್ರವನ್ನ ಮೀರಿಸಲು ಮತ್ತೊಂದು ಮೆಗಾ ಸಿನಿಮಾ ಸಿದ್ಧವಾಗ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ 'ಪೈಲ್ವಾನ್' ಈಗ ರಣತಂತ್ರವನ್ನ ರೂಪಿಸಿದ್ದಾರೆ. ಅಷ್ಟಕ್ಕೂ, ಕೆಜಿಎಫ್ ಮೀರಿಸಲು ಪೈಲ್ವಾನ್ ಮಾಡಲಿರುವುದೇನು.? ಮುಂದೆ ಓದಿ....

9 ಭಾಷೆಯಲ್ಲಿ ಪೈಲ್ವಾನ್.!

9 ಭಾಷೆಯಲ್ಲಿ ಪೈಲ್ವಾನ್.!

ಐದು ಭಾಷೆಯಲ್ಲಿ 'ಕೆಜಿಎಫ್' ಸಿನಿಮಾ ಬಿಡುಗಡೆಯಾಗಲಿದ್ದು, ಇಷ್ಟೊಂದು ಸದ್ದು ಮಾಡುತ್ತಿದೆ. ಇದೀಗ, ಸುದೀಪ್ ಪೈಲ್ವಾನ್ ಸಿನಿಮಾ ಒಂಭತ್ತು ಭಾಷೆಯಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಉದ್ಭವವಾಗಿದೆ. ಇಷ್ಟು ದಿನ ಯಶ್ ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡಿದ್ದರು. ಇದೇ ಮೊದಲ ಭಾರಿಗೆ ಪರಭಾಷೆಗೆ ಎಂಟ್ರಿ ಕೊಡ್ತಿದ್ದಾರೆ. ಅವರ ಚಿತ್ರಕ್ಕೆ ಇಷ್ಟು ಹವಾ ಸೃಷ್ಟಿಯಾಗಿರಬೇಕಾದರೇ, ಬಹುಭಾಷೆಯಲ್ಲೂ ಸ್ಟಾರ್ ಎನಿಸಿಕೊಂಡಿರುವ ಸುದೀಪ್ ಸಿನಿಮಾ ಒಂಭತ್ತು ಭಾಷೆಯಲ್ಲಿ ಬಂದ್ರೆ ಮತ್ತೆಷ್ಟು ಘರ್ಜಿಸಬಹುದು ಎಂಬ ಮಾತು ಈಗ ಆರಂಭವಾಗಿದೆ.

ಬೇಡಿಕೆ ಹೆಚ್ಚಿದೆ ಎಂಬ ಕಾರಣ

ಬೇಡಿಕೆ ಹೆಚ್ಚಿದೆ ಎಂಬ ಕಾರಣ

ಸುದೀಪ್ ಚಿತ್ರಗಳಿಗೆ ಉತ್ತರ ಭಾರತದಲ್ಲಿ ಒಳ್ಳೆಯ ಮಾರ್ಕೆಟ್ ಇದೆ. ಹಾಗೂ ಪೈಲ್ವಾನ್ ಚಿತ್ರವನ್ನ ಬಿಡುಗಡೆ ಮಾಡುವಂತೆ ಬೇಡಿಕೆ ಕೂಡ ಬಂದಿದೆ. ಹೀಗಾಗಿಯೇ ಅಲ್ಲಿನ ಸ್ಥಳೀಯ ಭಾಷೆಗಳಲ್ಲಿ ಪೈಲ್ವಾನ್ ಸಿನಿಮಾ ರಿಲೀಸ್ ಮಾಡಲು ನಿರ್ದೇಶಕ ಕೃಷ್ಣ ಮುಂದಾಗಿದ್ದಾರಂತೆ. ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಮರಾಠಿ, ಪಂಜಾಬಿ, ಬೋಜ್ ‍ಪುರಿ (ಬಿಹಾರದ ಭಾಷೆ), ಬೆಂಗಾಲಿಯಲ್ಲಿ ಪೈಲ್ವಾನ್ ತೆರೆ ಕಾಣಲಿದೆ.

ರಿತೇಶ್ ದೇಶಮುಖ್ ಸಾಥ್.!

ರಿತೇಶ್ ದೇಶಮುಖ್ ಸಾಥ್.!

ಮರಾಠಿ ಭಾಷೆಯಲ್ಲಿ ಪೈಲ್ವಾನ್ ಚಿತ್ರವನ್ನ ಬಿಡುಗಡೆ ಮಾಡಲು ಬಾಲಿವುಡ್ ನಟ ರಿತೇಶ್ ದೇಶಮುಖ್ ಆಸಕ್ತಿ ತೋರಿದ್ದಾರಂತೆ. ರಿತೇಶ್ ಮೊದಲೇ ಸುದೀಪ್ ಅವರ ಆಪ್ತ ಸ್ನೇಹಿತ. ಹೀಗಾಗಿ, ಸ್ನೇಹಿತನ ಚಿತ್ರವನ್ನ ಮರಾಠಿಯಲ್ಲಿ ತೋರಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ದಾಖಲೆ ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್

ದಾಖಲೆ ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್

ಇನ್ನು ಹಿಂದಿ ಡಬ್ಬಿಂಗ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗೋದು ಖಚಿತವೆನ್ನಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಮಾತುಕತೆ ಕೂಡ ಆಗಿದ್ದು, ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ. ಉಳಿದಂತೆ ಎಲ್ಲ ಭಾಷೆಯ ವಿತರಕರ ಜೊತೆಯೂ ರಿಲೀಸ್ ಬಗ್ಗೆ ಒಂದು ಹಂತದ ಚರ್ಚೆ ಮಾಡಲಾಗಿದೆಯಂತೆ.

20 ಸೆಟ್ ಹಾಕಲಾಗಿದೆ

20 ಸೆಟ್ ಹಾಕಲಾಗಿದೆ

ಇನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪೈಲ್ವಾನ್ ಚಿತ್ರಕ್ಕಾಗಿ ಬಗೆಬಗೆಯ 20 ಸೆಟ್ ನಿರ್ಮಾಣ ಮಾಡಲಾಗಿದೆ. ಕುಸ್ತಿ ಮತ್ತು ಬಾಕ್ಸಿಂಗ್ ದೃಶ್ಯಗಳಿಗೆ ಸಂಬಂಧಿಸದಂತೆ ಈ ಸೆಟ್ ಹಾಕಲಾಗಿದ್ದು, ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ, ಟೀಸರ್ ರಿಲೀಸ್ ಮಾಡಿರುವ ಪೈಲ್ವಾನ್ ಡಿಸೆಂಬರ್ ನಲ್ಲಿ ಇನ್ನೊಂದು ಟೀಸರ್ ಬಿಡುಗಡೆ ಮಾಡೋ ತಯಾರಿಯಲ್ಲಿದ್ದಾರೆ. ಮುಂದಿನ ವರ್ಷ ಆರಂಭದಲ್ಲಿ ತೆರೆಗೆ ಬರುವ ಯೋಚನೆಯಲ್ಲಿದೆ.

More from Filmibeat

English summary
kannada actor kiccha sudeep starrer Pailwaan will speak Bengali and Bhojpuri too. Film will release in eight languages apart from Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X