ಆಗಸ್ಟ್ 29ರಂದು ಚಿತ್ರಮಂದಿರಕ್ಕೆ ಸುದೀಪ್ ಪೈಲ್ವಾನ್ ಎಂಟ್ರಿ.!
Recommended Video
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಪೈಲ್ವಾನ್ ಯಾವಾಗ ರಿಲೀಸ್ ಆಗುತ್ತೆ ಎಂಬ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿದೆ. ಈ ಹಿಂದೆ ಸುದ್ದಿಯಾದಂತೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 8 ರಂದು ತೆರೆಗೆ ಬರಲು ಸಜ್ಜಾಗಿದ್ದರು.
ಆದರೆ, ಅದೇ ದಿನ ಕುರುಕ್ಷೇತ್ರ ಚಿತ್ರವೂ ಬರುವುದಾಗಿ ನಿರ್ಮಾಪಕ ಮುನಿರತ್ನ ಘೋಷಿಸಿದರು. ಹೀಗಾಗಿ, ಈ ಎರಡು ಬಿಗ್ ಬಜೆಟ್ ಮತ್ತು ಬಿಗ್ ಸ್ಟಾರ್ ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್ ಫೈಟ್ ಆಗಬಹುದು ಎಂಬ ಲೆಕ್ಕಾಚಾರ ಶುರುವಾಗಿತ್ತು.
ಅಷ್ಟರಲ್ಲೇ ಮುನಿರತ್ನ ಕುರುಕ್ಷೇತ್ರ ಒಂದು ವಾರ ಹಿಂದಕ್ಕೆ ಬಂತು. ಅಂದ್ರೆ ಆಗಸ್ಟ್ 2ಕ್ಕೆ ಬಿಡುಗಡೆ ದಿನಾಂಕ ಪ್ರಕಟಿಸಿತು. ನಂತರ ಪೈಲ್ವಾನ್ ರಿಲೀಸ್ ಬಗ್ಗೆ ಮತ್ತೆ ಗೊಂದಲ ಆಯಿತು. ಆದ್ರೀಗ, ಪೈಲ್ವಾನ್ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ಸ್ವತಃ ಚಿತ್ರತಂಡವೇ ರಿಲೀಸ್ ದಿನಾಂಕ ಬಹಿರಂಗಪಡಿಸಿದೆ.

ಪೈಲ್ವಾನ್ ಚಿತ್ರದ ಸುದ್ದಿಗೋಷ್ಠಿ ಇಂದು ನಡೆಯಿತು. ಈ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ನಿರ್ದೇಶಕ ಕೃಷ್ಣ, ಆಗಸ್ಟ್ 29ಕ್ಕೆ ಚಿತ್ರಮಂದಿರಕ್ಕೆ ಬರಲಿದ್ದೇವೆ ಎಂದು ಪ್ರಕಟಿಸಿದರು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ಬರ್ತಿರುವ ಪೈಲ್ವಾನ ಸಿನಿಮಾ ಏಕಕಾಲದಲ್ಲಿ ಒಂದೇ ದಿನ ಬಿಡುಗಡೆ ಮಾಡುವ ತಯಾರಿ ನಡೆದಿದೆ.
ಸದ್ಯದ ಮಟ್ಟಿಗೆ ಆಗಸ್ಟ್ 29 ಪಕ್ಕಾ ಆಗಿದೆ. ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಪಡೆಯುತ್ತಿದ್ದಂತೆ ಮತ್ತೊಮ್ಮೆ ಅಧಿಕೃತವಾಗಿ ದಿನಾಂಕ ಹೇಳಲಿದ್ದಾರೆ. ಇನ್ನುಳಿದಂತೆ ಸುದೀಪ್, ಕಬೀರ್ ಸಿಂಗ್ ದುಹಾನ್, ಆಕಾಂಕ್ಷ ಸಿಂಗ್, ಸುನೀಲ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತವಿರುವ ಈ ಚಿತ್ರದ ಮೊದಲ ಹಾಡು ಜುಲೈ 16ಕ್ಕೆ ಬರಲಿದೆ.


Click it and Unblock the Notifications











