ಮಾಲ್ಡೀವ್ಸ್ ಪ್ರವಾಸದಲ್ಲಿ 'ಪೈಲ್ವಾನ್' ರಾಣಿ ಆಕಾಂಕ್ಷ ಸಿಂಗ್
'ಪೈಲ್ವಾನ್' ಸಿನಿಮಾದ ಯಶಸ್ಸಿನಲ್ಲಿರುವ ಆಕಾಂಕ್ಷ ಸಿಂಗ್ ಈಗ ವಿದೇಶಿ ಪ್ರವಾಸದಲ್ಲಿ ಇದ್ದಾರೆ. ಪತಿ ಕುನಾಲ್ ಸೈನ್ ಜೊತೆಗೆ ಮಾಲ್ಡೀವ್ಸ್ ಗೆ ತೆರಳಿದ್ದಾರೆ.
ಕೆಲ ದಿನಗಳಿಂದ ಮಾಲ್ಡೀವ್ಸ್ ನಲ್ಲಿ ಇರುವ ಆಕಾಂಕ್ಷ ಸಿಂಗ್ ಅಲ್ಲಿನ ಸುಂದರ ತಾಣಗಳ ವೀಕ್ಷಣಿಯಲ್ಲಿ ನಿರತವಾಗಿದ್ದಾರೆ. ಸಮುದ್ರ ತೀರದಲ್ಲಿ ಕ್ಲಿಕ್ ಮಾಡಿದ ಒಂದು ಫೋಟೋ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಖತ್ ಗ್ಲಾಮರಸ್ ಆಗಿರುವ ಈ ಫೋಟೋ ಆಕಾಂಕ್ಷ ಸಿಂಗ್ ಅಭಿಮಾನಿಗಳಿಗೆ ಇಷ್ಟವಾಗಿದೆ.

ಆಕಾಂಕ್ಷ ಸಿಂಗ್ ಫೋಟೋ 25 ಸಾವಿರಕ್ಕೂ ಅಧಿಕ ಲೈಕ್ ಪಡೆದುಕೊಂಡಿದೆ. ಗುಲಾಬಿ ಬಣ್ಣದ ಡ್ರೆಸ್ ನಲ್ಲಿ ಕಣ್ಮಣಿ ಕಂಗೊಳಿಸುತ್ತಿದ್ದಾರೆ. ಕೂಲ್ ಕೂಲ್ ಮಾಲ್ಡೀವ್ಸ್ ನಲ್ಲಿ ಆಕಾಂಕ್ಷ ಹಾಟ್ ಆಗಿದ್ದಾರೆ.
'ಪೈಲ್ವಾನ್' ಸಿನಿಮಾದ ಮೂಲಕ ಆಕಾಂಕ್ಷ ಸಿಂಗ್ ಕನ್ನಡಕ್ಕೆ ಬಂದಿದ್ದಾರೆ. ರುಕ್ಮಿಣಿ ಪಾತ್ರವನ್ನು ಸುಂದರವಾಗಿ ನಿಭಾಯಿಸಿದ್ದಾರೆ. ಅಂದ ಮತ್ತು ಪ್ರತಿಭೆ ಎರಡೂ ಆಕಾಂಕ್ಷಗೆ ಪ್ಲೆಸ್ ಆಗಿದೆ.

ಈ ಸಿನಿಮಾದ ನಂತರ ಇತ್ತೀಚಿಗೆ ತಮಿಳಿನ ಜಾಹಿರಾತಿನಲ್ಲಿ ಆಕಾಂಕ್ಷ ಸಿಂಗ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











