ಮೊದಲ ದಿನವೇ ಪೈರಸಿಯಾಯ್ತು 'ಪೈಲ್ವಾನ್' ಸಿನಿಮಾ
Recommended Video
Pailwaan : ಮೊದಲ ದಿನವೇ ಪೈರಸಿಯಾಯ್ತು 'ಪೈಲ್ವಾನ್' | FILMIBEAT KANNADA
ಒಂದು ಸಿನಿಮಾಗೆ ದೊಡ್ಡ ಶತ್ರು ಪೈರಸಿ. ಈಗ ಈ ಪೈರಸಿ 'ಪೈಲ್ವಾನ್' ಸಿನಿಮಾಗೂ ಕಾಟ ನೀಡಿದೆ. ಬಿಡುಗಡೆಯಾದ ಮೊದಲ ದಿನವೇ 'ಪೈಲ್ವಾನ್' ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆಗಿದೆ.
tamilrockers ಹಾಗೂ 3movierulz ವೆಬ್ ಸೈಟ್ ಗಳಲ್ಲಿ 'ಪೈಲ್ವಾನ್' ಇಡೀ ಸಿನಿಮಾ ಲೀಕ್ ಆಗಿದೆ. ತಮಿಳು ಹಾಗೂ ತೆಲುಗು ಭಾಷೆಯ ಚಿತ್ರಗಳನ್ನು ಪೈರಸಿ ಮಾಡಲಾಗಿದೆ. ಪುಣ್ಯಕ್ಕೆ ಕನ್ನಡ ವರ್ಷನ್ ಸಿನಿಮಾ ಪೈರಸಿ ಆಗಿಲ್ಲ.
ಚಿತ್ರದ ನಿರ್ದೇಶಕ ಕೃಷ್ಣ ಇಂದು ಪೈರಸಿ ಬಗ್ಗೆ ಟ್ವೀಟ್ ಮಾಡಿದ್ದರು. ಪೈರಸಿ ಆಗಿರುವುದು ನಿಮಗೆ ಕಂಡು ಬಂದರೆ, [email protected] ಮೇಲ್ ಐಡಿಗೆ ಕಳುಹಿಸಿ ಎಂದು ತಿಳಿಸಿದ್ದರು. ಹೀಗಿದ್ದರೂ, ಸಿನಿಮಾದ ಪೈರಸಿ ತಡೆಯಲು ಚಿತ್ರತಂಡ ವಿಫಲವಾಗಿದೆ.

ಪದೇ ಪದೇ ಈ ರೀತಿಯ ಘಟನೆಗಳು ಚಿತ್ರರಂಗದಲ್ಲಿ ನಡೆಯುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳಂತೂ ಸುಲಭವಾಗಿ ಪೈರಸಿ ಆಗಿ ಬಿಡುತ್ತಿವೆ. ಈ ರೀತಿಯ ಘಟನೆಗಳಿಂದ ಸಿನಿಮಾದ ಮೇಲೆ ಹೊಡೆತ ಬೀಳುತ್ತಿರುವುದಂತು ನಿಜ.
More from Filmibeat
English summary
Sudeep's 'Pailwan full movie leaked in tamilrockers website.


Click it and Unblock the Notifications











