ಕಿಚ್ಚನ ಕ್ರೇಜ್ : ಮಾರುಕಟ್ಟೆಗೆ ಬಂತು 'ಪೈಲ್ವಾನ್' ಗಣೇಶ
Recommended Video
'ಪೈಲ್ವಾನ್' ಸಿನಿಮಾ ಅಬ್ಬರ ಈಗಾಗಲೇ ಜೋರಾಗಿ ಸಾಗಿದೆ. ಸುದೀಪ್ ನಟನೆಯ ಈ ಸಿನಿಮಾದ ಕ್ರೇಜ್ ಗೆ ಈಗ ಗಣೇಶ ಸಾಕ್ಷಿ ಆಗಿದ್ದಾನೆ.
ಗಣೇಶ ಹಬ್ಬಕ್ಕೆ ಇನ್ನೆನೂ ಕೆಲವೇ ದಿನಗಳ ಬಾಕಿ ಇದೆ. ಈಗಾಗಲೇ ಮಾರುಕಟ್ಟೆಯಲ್ಲಿ ತರಹೇವಾರಿ ಗಣೇಶ ಮೂರ್ತಿಗಳು ಬಂದಿದೆ. ಅದರೊಂದಿಗೆ, ಈ ಬಾರಿ 'ಪೈಲ್ವಾನ್' ಗಣೇಶ ಕೂಡ ಬಂದಿದ್ದಾನೆ.
'ಪೈಲ್ವಾನ್' ಸಿನಿಮಾದ ಕ್ರೇಜ್ ಕಂಡು, ಅದೇ ರೀತಿಯಾದ ಗಣೇಶ ಮೂರ್ತಿಯನ್ನು ತಯಾರು ಮಾಡಲಾಗಿದೆ. ಸುದೀಪ್ ಸ್ಟೈಲ್ ನಲ್ಲಿ ಗಣೇಶ ಇಲ್ಲಿ ತೊಡೆ ತಟ್ಟಿ ನಿಂತಿದ್ದಾನೆ. ಅಂದಹಾಗೆ, 'ಪೈಲ್ವಾನ್' ಗಣೇಶನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ 'ಪೈಲ್ವಾನ್' ಗಣೇಶನ ಮೂರ್ತಿಯ ವಿಡಿಯೋ ಕಣ್ಣಿಗೆ ಬಿದಿದೆ. ಆದರೆ, ಈ ಮೂರ್ತಿ ಯಾವ ಊರಿನಲ್ಲಿ, ಯಾರು ತಯಾರು ಮಾಡಿದ್ದಾರೆ ಎನ್ನುವುದು ಸದ್ಯಕ್ಕೆ ತಿಳಿದಿಲ್ಲ.

ಅಂದಹಾಗೆ, ಈ ವರ್ಷ ಸಪ್ಟೆಂಬರ್ 2 ರಂದು ಗಣೇಶ ಹಬ್ಬ ಬಂದಿದ್ದು, ಅದೇ ದಿನ ಸುದೀಪ್ ಹುಟ್ಟುಹಬ್ಬ ಕೂಡ ಇದೆ. ಅದರ ನಂತರ ಸಪ್ಟೆಂಬರ್ ಎರಡನೇ ವಾರದಲ್ಲಿ ಪೈಲ್ವಾನ್ ಸಿನಿಮಾ ಬಿಡುಗಡೆ ಆಗುತ್ತಿದೆ. ಇಂದು (ಆಗಸ್ಟ್ 22) ಮಧ್ಯಾಹ್ನ 1 ಗಂಟೆಗೆ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ.


Click it and Unblock the Notifications











