ಸರ್ಕಾರ್ ಲುಕ್ ನಲ್ಲಿ ಸೆಡ್ಡು ಹೊಡೆದ ಸುನೀಲ್ ಶೆಟ್ಟಿ
ಕಿಚ್ಚ ಸುದೀಪ್ ಅಭಿನಯದ 'ಪೈಲಾನ್' ಸಿನಿಮಾದ ಬಹು ಮುಖ್ಯ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಟ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
'ಪೈಲಾನ್' ಗ್ಯಾಂಗ್ ನಲ್ಲಿರೋ ಸರ್ಕಾರ್ ಪೋಸ್ಟರ್ ಇದಾಗಿದೆ. ಈ ಪಾತ್ರವನ್ನು ಸುನೀಲ್ ಶೆಟ್ಟಿ ನಿರ್ವಹಿಸಿದ್ದಾರೆ. ಬಳಿ ಪಂಚೆ ಹಾಗೂ ಬಿಳಿ ಅಂಗಿ ತೊಟ್ಟು ಖದರ್ ಲುಕ್ ನಲ್ಲಿ ಸುನೀಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಮತ್ತೊಂದು ವಿಶೇಷ ಅಂದರೆ, ಇದು ಸುನೀಲ್ ಶೆಟ್ಟಿ ನಟನೆಯ ಮೊದಲ ಕನ್ನಡ ಸಿನಿಮಾವಾಗಿದೆ. ಮೂಲತಃ ಕರ್ನಾಟಕದವರಾಗಿರುವ ಸುನೀಲ್ ಶೆಟ್ಟಿ ಬಾಲಿವುಡ್ ನಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಸುದೀಪ್ ಈ ಸಿನಿಮಾಗಾಗಿ ಅವರನ್ನು ಕನ್ನಡಕ್ಕೆ ಕರೆ ತಂದಿದ್ದಾರೆ.
ಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹೆಬ್ಬುಲಿ ನಂತರ ಮತ್ತೆ ಸುದೀಪ್ ಜೊತೆಗೆ ಕೃಷ್ಣ ಸಿನಿಮಾ ಮಾಡುತ್ತಿದ್ದಾರೆ. ನಿರ್ದೇಶನದ ಜೊತೆಗೆ ಕೃಷ್ಣ ನಿರ್ಮಾಣ ಸಹ ಮಾಡಿದ್ದಾರೆ.
ಅಕಾಂಕ್ಷ ಸಿಂಗ್ ಸಿನಿಮಾದ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











