ಸಂಕ್ರಾಂತಿಗೆ 'ಪೈಲ್ವಾನ್' ಸುದೀಪ್ ಶುಭಾಶಯ
ಇಂದು ಸಂಕ್ರಾಂತಿ ಹಬ್ಬವನ್ನು ನಾಡಿನಾದ್ಯಂತ ಆಚರಿಸುತ್ತಿದ್ದಾರೆ. ನಟ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಅಭಿಮಾನಿಗಳಿಗೆ ಹಬ್ಬದ ದಿನ ಶುಭಾಶಯವನ್ನು ತಿಳಿಸಿದ್ದಾರೆ.

''ನಾಡಿನೆಲ್ಲಾ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬದವರಿಗೂ ಈ ನಿಮ್ಮ ಪ್ರೀತಿಯ ಕಿಚ್ಚನಿಂದ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ಸಂಕ್ರಾಂತಿ ಹಬ್ಬದಂದು ನಿಮ್ಮ ಆಸೆಗಳೆಲ್ಲ ಉಕ್ಕಿ ಹರಿಯಲಿ.'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಇನ್ನು ಈ ವರ್ಷದ ಹಬ್ಬದ ವಿಶೇಷವಾಗಿ 'ಪೈಲ್ವಾನ್' ಸಿನಿಮಾ ಮೊದಲ ಟೀಸರ್ ಬಿಡುಗಡೆಯಾಗುತ್ತಿದೆ. ಈ ಬಗ್ಗೆಯೂ ಸುದೀಪ್ ಟ್ವೀಟ್ ಮಾಡಿದ್ದಾರೆ.
''ಫೈನಲ್ ಮಿಕ್ಸಿಂಗ್ ಬಳಿಕ 'ಪೈಲ್ವಾನ್' ಟೀಸರ್ ಅನ್ನು ನೋಡಿದೆ. ಈ ಟೀಸರ್ ನಿಮಗೂ ಸಹ ಅದೇ ಅನುಭವ ನೀಡುತ್ತದೆ. ಸಿನಿಮಾದ ಟೀಸರ್ ಈ ರೂಪ ಪಡೆದುಕೊಳ್ಳಲು ಕಾರಣರಾದ ಎಲ್ಲರಿಗೆ ಧನ್ಯವಾದ'' ಎಂದಿದ್ದಾರೆ.
'ಪೈಲ್ವಾನ್' ಸಿನಿಮಾದ ಟೀಸರ್ ಇಂದು ಸಂಜೆ 4.45ಕ್ಕೆ ಬಿಡುಗಡೆಯಾಗಲಿವೆ. ಕೃಷ್ಣ ಈ ಸಿನಿಮಾದ ನಿರ್ದೇಶನ ಮಾಡಿದ್ದು, ಅವರೇ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಸುದೀಪ್ ಬಾಕ್ಸರ್ ಆಗಿದ್ದಾರೆ.


Click it and Unblock the Notifications











