'ಪೈಲ್ವಾನ್' ನಾಯಕಿಯ ಮೊದಲ ಫೋಟೋ ಹಂಚಿಕೊಂಡ ನಿರ್ದೇಶಕರು

ನಟ ಸುದೀಪ್ 'ಪೈಲ್ವಾನ್' ಸಿನಿಮಾ ಚಿತ್ರೀಕರಣದ ನಂತರ 'ಕೋಟಿಗೊಬ್ಬ 3' ಸಿನಿಮಾ ಸೆಟ್ ಗೆ ಹೋಗಿದ್ದಾರೆ. ಇತ್ತ ಕಡೆ 'ಪೈಲ್ವಾನ್' ಚಿತ್ರದ ನಿರ್ದೇಶಕ ಕೃಷ್ಣ ಸಿನಿಮಾದ ನಾಯಕಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸಿನಿಮಾದ ನಾಯಕಿಯಾಗಿ ಆಕಾಂಕ್ಷ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಆಕಾಂಕ್ಷ ಪಾತ್ರದ ಮೊದಲ ಫೋಟೋವನ್ನು ನಿರ್ದೇಶಕ ಕೃಷ್ಣ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಿನಿಮಾದ ನಾಯಕಿಯ ಮೊದಲ ಫೋಟೋ ರಿವೀಲ್ ಮಾಡಲಾಗಿದೆ.

ಆಕಾಂಕ್ಷ ಸಿಂಗ್ ಅವರ ಗ್ಲಾಮರಸ್ ಫೋಟೋ ಇದಾಗಿದ್ದು, ಸಿನಿಮಾದ ಹಾಡಿನ ಫೋಟೋ ಇದಾಗಿರಬಹುದು. ಅಂದಹಾಗೆ, ಆಕಾಂಕ್ಷ ಅವರ ಮೊದಲ ಕನ್ನಡ ಸಿನಿಮಾ ಇದಾಗಿದೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಆಕಾಂಕ್ಷ ಆಗಮನ ಆಗುತ್ತಿದೆ.

pailwan movie heroine aakanksha singh 1st photo

ಆಕಾಂಕ್ಷ ಮೂಲತಃ ಜೈಪುರದ ಹುಡುಗಿಯಾಗಿದ್ದಾರೆ. ಮೊದಲು ಹಿಂದಿ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿದ್ದ ಇವರು ನಂತರ ಸಿನಿಮಾಗಳ ನಟನೆ ಶುರು ಮಾಡಿದ್ದರು. ಈಗಾಗಲೇ, ಎರಡು ತೆಲುಗು ಹಾಗೂ ಒಂದು ಹಿಂದಿ ಸಿನಿಮಾಗಳಲ್ಲಿ ಆಕಾಂಕ್ಷ ಕಾಣಿಸಿಕೊಂಡಿದ್ದಾರೆ.

ಬರೀ ನಟನೆ ಮಾತ್ರವಲ್ಲದೆ ಸಿಂಗರ್ ಹಾಗೂ ರೈಟರ್ ಆಗಿಯೂ ಆಕಾಂಕ್ಷ ಗುರುತಿಸಿಕೊಂಡಿದ್ದಾರೆ.

More from Filmibeat

English summary
Kannada movie 'Pailwan' heroine Aakanksha Singh 1st photo. Aakanksha Singh playing lead role opposite Sudeep. The movie is directed by Krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X