ಆ 'ಸುಲ್ತಾನ್', 'ದಂಗಲ್' ಬೇರೆ, ಈ ಪೈಲ್ವಾನೇ ಬೇರೆ
Recommended Video
ಸುದೀಪ್ ಮತ್ತು ತಂಡ 'ಪೈಲ್ವಾನ್' ಸಿನಿಮಾ ಘೋಷಣೆ ಮಾಡಿದ ದಿನದಿಂದ ಹಿಡಿದು, ನಿನ್ನೆಯವರೆಗೂ ಅನೇಕರು ಈ ಚಿತ್ರವನ್ನು ಇನ್ನೊಂದು ಸಿನಿಮಾಗೆ ಹೋಲಿಕೆ ಮಾಡುತ್ತಿದ್ದರು. ಆದರೆ, ಇಂದಿನಿಂದ ಅದು ಬದಲಾಗಿದೆ.
ಒಂದು ಸಿನಿಮಾದ ಟ್ರೇಲರ್ ನೋಡಿ, ಪೋಸ್ಟರ್ ನೋಡಿ ಇನ್ನೊಂದು ಸಿನಿಮಾಗೆ ಹೋಲಿಕೆ ಮಾಡುವುದು, ಈ ಸಿನಿಮಾ ಅದೇ ರೀತಿ ಇದೆ ಎಂದು ದೂರುವುದು ಹೊಸತೇನಲ್ಲ. ಹಾಗೆಯೇ 'ಪೈಲ್ವಾನ್' ಸಿನಿಮಾವನ್ನು ಕೂಡ ಬಾಲಿವುಡ್ ನ ಎರಡು ಸೂಪರ್ ಹಿಟ್ ಚಿತ್ರಗಳಿಗೆ ಹೋಲಿಕೆ ಮಾಡಲಾಗುತ್ತಿತ್ತು.
'ಪೈಲ್ವಾನ್' ಸಿನಿಮಾ, ಸಲ್ಮಾನ್ ಖಾನ್ ನಟನೆಯ 'ಸುಲ್ತಾನ್' ಸಿನಿಮಾದ ರೀತಿ ಇದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಅಮಿರ್ ಖಾನ್ ರ 'ದಂಗಲ್' ಜೊತೆಗೆ ಹೋಲಿಕೆ ಮಾಡುತ್ತಿದ್ದರು. ಆದರೆ, ವಾಸ್ತವವಾಗಿ ಈ ಸಿನಿಮಾ ಈ ಎರಡು ಚಿತ್ರಗಳ ರೀತಿ ಇಲ್ಲ. ಆ ಸಿನಿಮಾಗಳೇ ಬೇರೆ ಇದೇ ಬೇರೆ.

ಆ ಕಥೆಯೇ ಬೇರೆ, ಈ ಕಥೆಯೇ ಬೇರೆ
'ಸುಲ್ತಾನ್' ಹಾಗೂ 'ದಂಗಲ್' ಸಿನಿಮಾಗಳ ಕಥೆಗೂ 'ಪೈಲ್ವಾನ್' ಸಿನಿಮಾದ ಕಥೆಗೂ ಯಾವುದೇ ಸಂಬಂಧ ಇಲ್ಲ. ನಾಯಕ ಕುಸ್ತಿಪಟು ಎನ್ನುವುದನ್ನು ಬಿಟ್ಟರೆ ಅದಕ್ಕೂ ಇದಕ್ಕೂ ಹೋಲಿಕೆ ಇಲ್ಲ. ಕೃಷ್ಣ ಎಂಬ ಒಬ್ಬ ಕುಸ್ತಿಪಟುವಿನ ಪಯಣ ಚಿತ್ರದ ಕಥೆ. ಆತನ ಹಿನ್ನಲೆ, ಪ್ರೇಮ, ಸಾಧನೆ ಹೀಗೆ ಸಿನಿಮಾ ಸಾಗುತ್ತದೆ.

ಅಲ್ಲಿ ಇಲ್ಲದ ಸಂದೇಶ ಇಲ್ಲಿದೆ
'ಸುಲ್ತಾನ್' ಹಾಗೂ 'ದಂಗಲ್' ಸಿನಿಮಾಗಳನ್ನು ತೆಗೆದುಕೊಂಡರೆ, ಅಲ್ಲಿನ ನಾಯಕ ಕುಸ್ತಿ ಮಾಡುವುದು ತನಗಾಗಿ, ಅಥವಾ ತನ್ನ ಕುಟುಂಬಕ್ಕಾಗಿ. ಆದರೆ, ಈ 'ಪೈಲ್ವಾನ್' ಕುಸ್ತಿ ಮಾಡುವುದು ಒಂದು ಬಲವಾದ ಕಾರಣಕ್ಕಾಗಿ. ಅದು ಏನು ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು.

ಮೇಕಿಂಗ್ ನಲ್ಲಿ ಯಾವುದೇ ಕೊರತೆ ಮಾಡಿಲ್ಲ
ಬಾಲಿವುಡ್ ಸಿನಿಮಾಗಳ ಮೇಕಿಂಗ್ ಗೆ ಹೋಲಿಕೆ ಮಾಡಿದರೆ 'ಪೈಲ್ವಾನ್'ನಲ್ಲಿ ಯಾವುದೇ ರೀತಿಯ ಕೊರತೆ ಕಾಣುವುದಿಲ್ಲ. ಇಡೀ ಸಿನಿಮಾ ಅದ್ದೂರಿಯಾಗಿದೆ. ಪ್ರತಿ ದೃಶ್ಯಗಳು, ಹಾಡುಗಳು ಶ್ರೀಮಂತಿಕೆಯಿಂದ ಕೂಡಿದೆ. ಮೇಕಿಂಗ್ ನಲ್ಲಿ 'ದಂಗಲ್' ಹಾಗೂ 'ಸುಲ್ತಾನ್' ಸಿನಿಮಾಗಳಿಗೆ 'ಪೈಲ್ವಾನ್' ಪೈಪೋಟಿ ನೀಡುತ್ತದೆ.

ಸಿನಿಮಾ ಹಿಂದಿಯಲ್ಲಿಯೂ ಬಿಡುಗಡೆಯಾಗಿದೆ
'ಪೈಲ್ವಾನ್' ಪ್ಯಾನ್ ಇಂಡಿಯಾ ಸಿನಿಮಾ. ಇಂದು ಹಿಂದಿ ಭಾಷೆಯಲ್ಲಿಯೂ ಸಿನಿಮಾ ಬಿಡುಗಡೆಯಾಗಿದೆ. ಈಗಾಗಲೇ ತಮ್ಮ 'ಸುಲ್ತಾನ್', 'ದಂಗಲ್' ನೋಡಿರುವ ಅಲ್ಲಿನ ಪ್ರೇಕ್ಷಕರು 'ಪೈಲ್ವಾನ್' ಚಿತ್ರಕ್ಕೆ ಏನು ಹೇಳುತ್ತಾರೆ ಎನ್ನುವ ನಿರೀಕ್ಷೆ ಇದೆ.

ಸಿನಿಮಾ ಹೇಗಿದೆ?
'ಪೈಲ್ವಾನ್' ಕ್ರೀಡಾ ಹಿನ್ನಲೆಯಲ್ಲಿ ಬಂದ ಪಕ್ಕಾ ಕಮರ್ಷಿಯಲ್ ಸಿನಿಮಾ. ಮನರಂಜನೆ ಮನಸ್ಸಿನಲ್ಲಿ ಇಟ್ಟುಕೊಂಡು ಹೋಗುವವರಿಗೆ ಸಿನಿಮಾ ಇಷ್ಟ ಆಗುತ್ತದೆ. ಸುದೀಪ್ ಶ್ರಮ, ನಿರ್ದೇಶಕರ ಪರಿಶ್ರಮ ಮೆಚ್ಚುವಂತದ್ದು. ಕೃಷ್ಣ ಎಂಬ ಕುಸ್ತಿ ಪೈಲ್ವಾನನ ಸಾಧನೆಯ ಕಥೆಯೇ ಈ ಚಿತ್ರ. ಇಲ್ಲಿ ಸಾಹಸವೂ ಇದೆ. ಸಂಬಂಧದ ಮಹತ್ವವೂ ಇದೆ. ಭಾವನಾತ್ಮಕ ದೃಶ್ಯಗಳಿಂದ ಸಿನಿಮಾಗೆ ತೂಕ ಬಂದಿದೆ.


Click it and Unblock the Notifications











