ದರ್ಶನ್ ಫ್ಯಾನ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪೈಲ್ವಾನ್ ನಿರ್ಮಾಪಕಿ ಸ್ವಪ್ನಕೃಷ್ಣ

Recommended Video

ದರ್ಶನ್ ಫ್ಯಾನ್ಸ್ ಬಗ್ಗೆ ಪೈಲ್ವಾನ್ ನಿರ್ಮಾಪಕಿ ಹೇಳಿದ್ದೇನು ಗೊತ್ತಾ..? | Pailwaan | FILMIBEAT KANNADA

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಾಕ್ಸ್ ಆಫೀಸ್ ಧೂಳಿಪಟ ಮಾಡಿ ಮುನ್ನುಗ್ಗತ್ತಿದೆ. ಚಿತ್ರ ಹೇಗಿದೆ ಎಂಬ ವಿಷಯಕ್ಕಿಂತ ಸಿನಿಮಾ ಪೈರಸಿ ಆಗಿದೆ ಎಂಬುದೇ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.

ಪೈಲ್ವಾನ್ ಚಿತ್ರವನ್ನ ಉದ್ದೇಶಪೂರ್ವಕವಾಗಿ ಪೈರಸಿ ಮಾಡಲಾಗಿದೆ. ಚಿತ್ರದ ಬಗ್ಗೆ ನೆಗಿಟಿವ್ ಪ್ರಚಾರ ಮಾಡಲಾಗುತ್ತಿದೆ ಸುದೀಪ್ ಅಭಿಮಾನಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು ಪೈರಸಿ ಮಾಡಿದ್ದು ಯಾರು ಎಂಬುದರ ಬಗ್ಗೆ ನಮ್ಮ ಬಳಿ ಮಾಹಿತಿ ಇದೆ ಎಂದಿದ್ದಾರೆ. ಇನ್ನು ದರ್ಶನ್ ಫ್ಯಾನ್ಸ್ ಪೈಲ್ವಾನ್ ಚಿತ್ರದ ಪೈರಸಿ ಮಾಡಿದ್ದಾರೆ ಎಂಬ ಸುದ್ದಿ ಬಗ್ಗೆ ಕೂಡ ಸ್ವಪ್ನ ಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ....

ಕನ್ನಡದಲ್ಲಿ ಅತಿ ದೊಡ್ಡ ಪೈರಸಿ

ಕನ್ನಡದಲ್ಲಿ ಅತಿ ದೊಡ್ಡ ಪೈರಸಿ

ಇಲ್ಲಿಯವರೆಗೂ ಸುಮಾರು 3500 ಲಿಂಕ್ ಗಳನ್ನ ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಲಾಗಿದೆ. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಮಟ್ಟದ ಪೈರಸಿಯಾಗಿದೆ. ಪೈರಸಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ'' ಎಂದು ತಿಳಿಸಿದ್ದಾರೆ.

ದರ್ಶನ್ ಫ್ಯಾನ್ಸ್ ಪೈರಸಿ ಮಾಡಿದ್ರಾ?

ದರ್ಶನ್ ಫ್ಯಾನ್ಸ್ ಪೈರಸಿ ಮಾಡಿದ್ರಾ?

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಉದ್ದೇಶಪೂರ್ವಕವಾಗಿ ಪೈಲ್ವಾನ್ ಪೈರಸಿ ಮಾಡುತ್ತಿದ್ದಾರೆ ಎಂಬ ಸುದ್ದಿ ಬಗ್ಗೆ ಕೇಳಿದ್ದಕ್ಕೆ ''ಅವರೇ ಮಾಡಿದ್ದಾರೆ ಇವರೇ ಮಾಡಿದ್ದಾರೆ ಎಂದು ನಾನು ಖಂಡಿತ ಹೇಳಲ್ಲ. ಕೆಲವು ಕಿಡಿಗೇಡಿಗಳು ಈ ರೀತಿ ಸುದ್ದಿ ಹಬ್ಬಿಸುತ್ತಿರಬಹುದು. ಆ ಬಗ್ಗೆ ನಾನು ಹೇಳಲ್ಲ. ನಮಗೆ ಸಿಕ್ಕಿರುವ ಲಿಂಕ್ ಗಳ ಆಧಾರದ ಮೇಲೆ ದೂರು ನೀಡಿದ್ದೇನೆ'' ಎಂದು ಸ್ಪಷ್ಟಪಡಿಸಿದರು.

ಪೈಲ್ವಾನ್ ಸಿನಿಮಾ ಎಷ್ಟು ಗಳಿಸಿದೆ

ಪೈಲ್ವಾನ್ ಸಿನಿಮಾ ಎಷ್ಟು ಗಳಿಸಿದೆ

ಮೊದಲ ದಿನ 10 ಕೋಟಿ, ಎರಡನೇ ದಿನ 8 ಕೋಟಿ ಹಾಗೂ ಮೂರನೇ ದಿನ 12 ಕೋಟಿವರೆಗೂ ಗಳಿಕೆ ಕಂಡಿದೆ ಎನ್ನಲಾಗಿದೆ. ನಾಲ್ಕನೇ ದಿನವೂ ಭರ್ಜರಿ ಮೊತ್ತ ಗಳಿಸಿದೆ ಎಂಬ ಮಾತಿದೆ. ಆದರೆ, ನಿರ್ದಿಷ್ಟವಾದ ಲೆಕ್ಕಾಚಾರ ಅಧಿಕೃತವಾಗಿ ಸಿಕ್ಕಿಲ್ಲ.

ದರ್ಶನ್ ಅಭಿಮಾನಿಗಳ ಬಹಿರಂಗ ಪತ್ರ

ದರ್ಶನ್ ಅಭಿಮಾನಿಗಳ ಬಹಿರಂಗ ಪತ್ರ

ಈ ನಡುವೆ ದರ್ಶನ್ ಅಭಿಮಾನಿಗಳ ಮೇಲೆ ಬಂದಿರುವ ಆರೋಪದ ಬಗ್ಗೆ ದಾಸನ ಫ್ಯಾನ್ಸ್ ಬಹಿರಂಗ ಪತ್ರದ ಮೂಲಕ ಉತ್ತರ ನೀಡಿದ್ದಾರೆ. ಸುದೀಪ್ ಮತ್ತು ಸುದೀಪ್ ಅಭಿಮಾನಿಗಳನ್ನ ಕೆಲವು ವಿಚಾರಗಳನ್ನ ಮುಂದಿಟ್ಟು ಪ್ರಶ್ನಿಸಿದ್ದಾರೆ.

More from Filmibeat

English summary
Pailwaan Producer Swapna Krishna has React about piracy and Darshan fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X