'ಬೆದರಿಕೆಗೆ ಜಗ್ಗೊನಲ್ಲ ಪೈಲ್ವಾನ' ನಿರ್ಮಾಪಕಿ ಸ್ವಪ್ನಾ ಕೃಷ್ಣ ಟಾಂಗ್
Recommended Video
ಪೈಲ್ವಾನ್ ಚಿತ್ರದ ಪೈರಸಿಗೆ ಸಂಬಂಧಪಟ್ಟಂತೆ ಸುದೀಪ್ ಅಭಿಮಾನಿಗಳು ಮತ್ತು ದರ್ಶನ್ ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾದ-ಪ್ರತಿವಾದಗಳು ನಡೆಯುತ್ತಿದೆ. ಇದನ್ನೆಲ್ಲ ಗಮನಿಸಿದ ಡಿ ಬಾಸ್ ಟ್ವೀಟ್ ಮಾಡುವ ಮೂಲಕ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
''ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು - ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ'' ಎಂದು ಡಿ ಬಾಸ್ ಟ್ವೀಟ್ ಮಾಡಿದ್ದರು.
ಚಾಲೆಂಜಿಂಗ್ ಸ್ಟಾರ್ ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳ ಬಳಿಕ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನಾ ಕೃಷ್ಣ ಕೂಡ ಒಂದು ಟ್ವೀಟ್ ಮಾಡಿದರು. ಈ ಟ್ವೀಟ್ ಬಹಳ ಚರ್ಚೆಯಾಗ್ತಿದೆ. ಏನದು? ಮುಂದೆ ಓದಿ....

ಬೆದರಿಕೆಗೆ ಜಗ್ಗೊನಲ್ಲ ಪೈಲ್ವಾನ
''ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ'' ಎಂದು ದರ್ಶನ್ ಅವರು ಟ್ವೀಟ್ ಮಾಡಿದ ಬಳಿಕ ಪೈಲ್ವಾನ್ ನಿರ್ಮಾಪಕಿ ಸ್ವಪ್ನಾಕೃಷ್ಣ ಅವರು ''ಎಲ್ಲ ಅಭಿಮಾನಿಗಳಿಗೆ ಸಿಹಿ ಸುದ್ದಿ....ಬೆದರಿಕೆಗೆ ಜಗ್ಗೊನಲ್ಲ ನಮ್ಮ ಪೈಲ್ವಾನ #ಪೈಲ್ವಾನ್ ನ ಕಾಲ್ ಎಳಿಯೋಕೆ ಬಂದವರ ಸ್ಥಾನ ಕಾಲ್ ಕೆಳಗೆನೇ'' ಎಂದು ಟ್ವೀಟ್ ಮಾಡಿದರು.

ಈ ಟ್ವೀಟ್ ನಿಂದ ಹೆಚ್ಚಾಯ್ತು ಚರ್ಚೆ
ಸ್ವಪ್ನಾ ಅವರು ಯಾವ ಕಾರಣಕ್ಕಾಗಿ ಈ ಟ್ವೀಟ್ ಮಾಡಿದರೋ ಗೊತ್ತಿಲ್ಲ. ಆದರೆ ಈ ಟ್ವೀಟ್ ಬಳಿಕ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಚರ್ಚೆ ಮತ್ತೆ ಹೆಚ್ಚಾಯ್ತು. ಪೈಲ್ವಾನ್ ನಿರ್ಮಾಪಕಿ ಪರೋಕ್ಷವಾಗಿ ದರ್ಶನ್ ಟ್ವೀಟ್ ಗೆ ಟಾಂಗ್ ಕೊಟ್ಟಿದ್ದಾರೆ ಎಂದು ಬಿಂಬಿತವಾಗುತ್ತಿದೆ.

ದರ್ಶನ್ ಫ್ಯಾನ್ಸ್ ಬಗ್ಗೆ ಸ್ವಪ್ನಾ ಏನು ಹೇಳಿದ್ದರು
ಪೈಲ್ವಾನ್ ಸಿನಿಮಾ ಪೈರಸಿ ಆಗಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ ಸ್ವಪ್ನಾ ಕೃಷ್ಣ ದರ್ಶನ್ ಫ್ಯಾನ್ಸ್ ಪೈರಸಿ ಮಾಡುತ್ತಿದ್ದಾರಾ ಎಂದು ಕೇಳಿದ್ದಕ್ಕೆ ''ನಾನು ಯಾರ ಬಗ್ಗೆಯೂ ಮಾತನಾಡಲ್ಲ. ನಮಗೆ ಸಿಕ್ಕಿರುವ ಲಿಂಕ್ ಗಳ ಆಧಾರದ ಮೇಲೆ ದೂರು ನೀಡಿದ್ದೇನೆ. ಯಾರೊ ಕಿಡಿಗೇಡಿಗಳು ಹೀಗೆ ಹಬ್ಬಿಸುತ್ತಿರಬಹುದು'' ಎಂದಿದ್ದರು.

ಆ ಕಡೆ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ
ದರ್ಶನ್ ಮತ್ತು ಸ್ವಪ್ನಾ ಟ್ವೀಟ್ ಬಳಿಕ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ. ಸದ್ಯ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರುವ ಸುದೀಪ್ ''ನಾನು ಏನು ಎಂಬುದನ್ನ ಯಾರಿಗೂ ಸಾಬೀತು ಮಾಡುವ ಅಗತ್ಯ ನನಗಿಲ್ಲ'' ಎಂದು ಹೇಳಿದ್ದಾರೆ.


Click it and Unblock the Notifications











