ಅಚ್ಚರಿ: ಸುದೀಪ್ 'ಪೈಲ್ವಾನ್' ಮುಂದಿನ ತಿಂಗಳು ತೆರೆಗೆ.!

By Pavithra

Recommended Video

ಸುದೀಪ್ ಪೈಲ್ವಾನ್ ಸಿನಿಮಾ ಡಿಸೆಂಬರ್ ನಲ್ಲಿ ರಿಲೀಸ್ | Filmibeat Kannada

'ಪೈಲ್ವಾನ್'... ಕಿಚ್ಚ ಸುದೀಪ್ ಅಭಿನಯದ, 'ಗಜಕೇಸರಿ' ಕೃಷ್ಣ ನಿರ್ದೇಶನದ ಸಿನಿಮಾ. ಫಸ್ಟ್ ಲುಕ್ ರಿಲೀಸ್ ಮಾಡಿ ಸಿನಿಮಾ ಪ್ರೇಕ್ಷಕರ ಕುತೂಹಲ ಕೆರಳಿಸಿರುವ 'ಪೈಲ್ವಾನ್' ಸಿನಿಮಾ ಮುಂದಿನ ತಿಂಗಳು ತೆರೆಗೆ ಬರುತ್ತಿದೆ.!

ಏನು... 'ಪೈಲ್ವಾನ್' ಸಿನಿಮಾ ಮುಂದಿನ ತಿಂಗಳು ತೆರೆಗೆ ಬರ್ತಿದ್ಯಾ.? ಆಶ್ಚರ್ಯ ಪಡಬೇಡಿ ಹಾಗಂತ ಹೇಳ್ತಿರೋದು ನಾವಲ್ಲ.! ಬದಲಾಗಿ ಬುಕ್ ಮೈ ಶೋ ವೆಬ್ ತಾಣ.

 Pailwan to release in December as per Book My show website

ಹೌದು ಬುಕ್ ಮೈ ಶೋ ಮತ್ತೊಂದು ಎಡವಟ್ಟು ಮಾಡಿದೆ. 'ಪೈಲ್ವಾನ್' ಸಿನಿಮಾ ಡಿಸೆಂಬರ್ 2017ಕ್ಕೆ ರಿಲೀಸ್ ಆಗಲಿದೆ ಎಂದು ತಮ್ಮ ವೆಬ್ ಸೈಟ್ ನಲ್ಲಿ ಹಾಕಿಕೊಂಡಿದ್ದಾರೆ.

ಈಗಾಗಲೇ ಸಾಕಷ್ಟು ಬಾರಿ ಇದೇ ರೀತಿ ತಪ್ಪುಗಳನ್ನ ಮಾಡಿರೋ ಬುಕ್ ಮೈ ಶೋ ತಂಡ ಈಗ 'ಪೈಲ್ವಾನ್' ಸಿನಿಮಾವನ್ನ ಮುಂದಿನ ತಿಂಗಳು ರಿಲೀಸ್ ಮಾಡುವುದಾಗಿ ತಮ್ಮ ವೆಬ್ ಸೈಟ್ ನಲ್ಲಿ ಹಾಕಿಕೊಂಡಿದೆ. ಫೋಟೋ ಶೂಟ್ ನಷ್ಟೇ ಮುಗಿಸಿರುವ ಈ ಚಿತ್ರ 'ಪೈಲ್ವಾನ್' ಅದು ಹೇಗೆ ಇಷ್ಟು ಬೇಗ ರಿಲೀಸ್ ಆಗುತ್ತೆ ಅನ್ನೋದು ಅಭಿಮಾನಿಗಳಿಗೆ ಕಾಡುತ್ತಿರೋ ಯಕ್ಷ ಪ್ರಶ್ನೆಯಾಗಿದೆ.

 Pailwan to release in December as per Book My show website

ಚಿತ್ರತಂಡ ಇದನ್ನ ನೋಡಿದ್ರೆ ಒಮ್ಮೆ ಶಾಕ್ ಆಗುವುದಂತೂ ನಿಜ. ಯಾಕಂದ್ರೆ ಇನ್ನೂ ಪ್ರೀ-ಪ್ರೊಡಕ್ಷನ್ ಹಂತದಲ್ಲಿರೋ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಮಾಡಿ ಬಿಟ್ಟಿದ್ದಾರೆ ಬುಕ್ ಮೈ ಶೋ ಟೀಂ. ಇನ್ನು ದೊಡ್ಡ ಬ್ಲಂಡರ್ ಅಂದ್ರೆ ಪೈಲ್ವಾನ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಕೂಡ ಅಭಿನಯಿಸ್ತಿದ್ದಾರಂತೆ. ಇದೂ ಕೂಡ ಬುಕ್ ಮೈ ಶೋ ನಲ್ಲಿ ಅಪ್ಡೇಟ್ ಆಗಿದೆ. ಸದ್ಯ ಈ ಎಡವಟ್ಟು ಸೋಷಿಯಲ್ ನೆಟ್ವರ್ಕ್ ನಲ್ಲಿ ವೈರಲ್ ಆಗಿದೆ.

More from Filmibeat

English summary
Sudeep starrer 'Pailwan' to release in December as per Book My show website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X