»   » ಸುದೀಪ್ ಬಗ್ಗೆ ಬಾಂಗ್ಲಾ, ಪಾಕಿಸ್ತಾನಿಗಳು ಮಾಡಿರುವ ಕಾಮೆಂಟ್ ನೋಡಿ.!

ಸುದೀಪ್ ಬಗ್ಗೆ ಬಾಂಗ್ಲಾ, ಪಾಕಿಸ್ತಾನಿಗಳು ಮಾಡಿರುವ ಕಾಮೆಂಟ್ ನೋಡಿ.!

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡದಾಚೆಯೂ ಮಿಂಚುತ್ತಿರುವ ಕಲಾವಿದ. ಕರ್ನಾಟಕದಾಚೆ ಮಾತ್ರವಲ್ಲ, ಈಗ ಭಾರತದ ಹೊರೆಗೂ ಅಬ್ಬರಿಸಲು ಸಿದ್ದವಾಗಿದ್ದಾರೆ.

ಹೀಗಾಗಿ, ಸುದೀಪ್ ಅವರ ಫಾಲೋವರ್ಸ್, ಅಭಿಮಾನಿಗಳು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ನಂತರ ಈಗ ಕಿಚ್ಚನ ಬಗ್ಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನಿಗಳು ಮಾತನಾಡುವಂತಾಗಿದೆ.

ಹೌದು, ಸುದೀಪ್ ಮತ್ತು ನಿತ್ಯಾ ಮೆನನ್ ಅಭಿನಯಿಸಿದ್ದ 'ಕೋಟಿಗೊಬ್ಬ-2' ಚಿತ್ರ ಹಿಂದಿಯಲ್ಲಿ 'ಗೋಲಿಮಾರ್' ಎಂಬ ಹೆಸರಿನಲ್ಲಿ ಡಬ್ ಆಗಿತ್ತು. ಇತ್ತೀಚೆಗಷ್ಟೇ ಹಿಂದಿ ವರ್ಷನ್ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿತ್ತು. ಈ ಚಿತ್ರವನ್ನ ನೋಡಿ ಬಾಂಗ್ಲಾ ಹಾಗೂ ಪಾಕಿಸ್ತಾನಿಗಳು ಸುದೀಪ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಮುಂದಿದೆ ನೋಡಿ.....

ಸುದೀಪ್ ವರ್ಸಟೈಲ್ ಆಕ್ಟರ್

'ಕೋಟಿಗೊಬ್ಬ-2' ಚಿತ್ರದ ಹಿಂದಿ ವರ್ಷನ್ ನೋಡಿದ ಬಾಂಗ್ಲಾದೇಶದ ಪ್ರಜೆಯೊಬ್ಬರು ''ಈ ರೀತಿಯ ಸಿನಿಮಾಗಳು ಮುಂದೆ ಬಾಂಗ್ಲಾದೇಶದಲ್ಲಿ ಬರುತ್ತೆ. ನಾನು ದಕ್ಷಿಣ ಭಾರತದ ಸಿನಿಮಾಗಳ ಅಭಿಮಾನಿ. ಸುದೀಪ್ ವರ್ಸಟೈಲ್ ನಟ. ಈ ಸಿನಿಮಾ ಸೂಪರ್ ಆಗಿದೆ'' ಎಂದು ಕಾಮೆಂಟ್ ಮಾಡಿದ್ದಾರೆ.

ಸುದೀಪ್-ಅಂಬರೀಶ್ ಜೋಡಿಗೆ 26ರ ಯುವಕ ಆಕ್ಷನ್ ಕಟ್.!

ಲವ್ ಯೂ ಸುದೀಪ್

'ಕೋಟಿಗೊಬ್ಬ-2' ಚಿತ್ರವನ್ನ 'ಗೋಲಿಮಾರ್' ಅವತಾರದಲ್ಲಿ ನೋಡಿದ ಮತ್ತೊಬ್ಬ ಬಾಂಗ್ಲಾದೇಶ ಅಭಿಮಾನಿ ಸುದೀಪ್ ಬಗ್ಗೆ ಫುಲ್ ಫಿದಾ ಆಗಿದ್ದಾರೆ.

ಹೊಸ ದಾಖಲೆ ಸೃಷ್ಟಿಸಿದ ಕಿಚ್ಚನ ಮಡದಿ ಪ್ರಿಯಾ

ಬಾಂಗ್ಲಾ ಪ್ರಜೆಯ ಮನಗೆದ್ದ ಕಿಚ್ಚ

''ಇದು ಉತ್ತಮ ಸಿನಿಮಾ. ನಿಜವಾಗಲೂ ನನಗೆ ಇಷ್ಟವಾಯಿತು'' ಎಂದು ಇನ್ನೊಬ್ಬ ಬಾಂಗ್ಲಾದೇಶ ಅಭಿಮಾನಿ ಈ ಸಿನಿಮಾಗೆ ಕಾಮೆಂಟ್ ಮಾಡಿದ್ದಾರೆ.

ಸುದೀಪ್ ಇಲ್ಲದ 'ಟೈಗರ್ ಜಿಂದಾ ಹೈ' ಟ್ರೈಲರ್ ರಿಲೀಸ್.!

ನಿತ್ಯಾ ಮೆನನ್ ಮತ್ತು ಸುದೀಪ್ ಸೂಪರ್

ಈ ಚಿತ್ರವನ್ನ ನೋಡಿದ ಬಾಂಗ್ಲಾದೇಶದ ಪ್ರಜೆಯೊಬ್ಬರು ''ಉತ್ತಮ ಸಿನಿಮಾ. ನಿತ್ಯಾ ಮೆನನ್ ಸೂಪರ್. ಸುದೀಪ್ ಮತ್ತು ಪ್ರಕಾಶ್ ರೈ ಗ್ರೇಟ್ ನಟರು'' ಎಂದು ಕಾಮೆಂಟ್ ಮಾಡಿದ್ದಾರೆ.

ಸಿ.ಸಿ.ಎಲ್ ಪಂದ್ಯದ ಲಿಸ್ಟ್ ಔಟ್: ಬೆಂಗಳೂರಿಗೆ ಬರಲ್ಲ ಸೆಲೆಬ್ರಿಟಿಗಳು.!

ನಾಯಕನ ಹೆಸರು ಚಿಂದಿ

ಇನ್ನು ಪಾಕಿಸ್ತಾನದ ಯುವತಿಯೊಬ್ಬಳು 'ಗೋಲಿಮಾರ್' ಚಿತ್ರಕ್ಕೆ ಕಾಮೆಂಟ್ ಮಾಡಿದ್ದು. ''ಈ ಚಿತ್ರದ ನಾಯಕನ ಹೆಸರು ಸೂಪರ್'' ಎಂದು ಲವ್ ಚಿಹ್ನೆಯ ಎಮೋಜಿ ಪೋಸ್ಟ್ ಮಾಡಿದ್ದಾರೆ.

ಹಿಂದಿ ಡಬ್ಬಿಂಗ್ ಸಿನಿಮಾ

'ಕೋಟಿಗೊಬ್ಬ-2' ಚಿತ್ರದ ಹಿಂದಿ ಡಬ್ಬಿಂಗ್ ಸಿನಿಮಾ ನೋಡಿ ಫಿದಾ ಆಗಿರುವ ಹೊರದೇಶದ ಅಭಿಮಾನಿ ಚಿತ್ರ ಅತ್ಯದ್ಭುತವಾಗಿದೆ ಎಂದಿದ್ದಾರೆ.

ಕಿಚ್ಚನಿಗೆ ಪಾಕ್ ಅಭಿಮಾನಿ

''ನಾನು ಪಾಕಿಸ್ತಾನದವರು. ನಾನು ನಿಮ್ಮ ದೊಡ್ಡ ಅಭಿಮಾನಿ'' ಎಂದು ಇಲ್ಲೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ.

'ಬಿಗ್ ಬಾಸ್' ಮನೆಗೆ ಹೋಗಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ ಮಯೂರಿ.!

ಕಿಚ್ಚನ ಹವಾ

ಹೀಗೆ, ಸುದೀಪ್ ಅವರ ಅಭಿಮಾನ, ಹಾಗೂ ಅವರ ಹವಾ ಹೊರದೇಶದಲ್ಲೂ ಹೆಚ್ಚಿದೆ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ಇದಕ್ಕೆ ಈ ಕಾಮೆಂಟ್ ಗಳು ಸಾಕ್ಷಿಯಾಗುತ್ತಿದೆ.

ಫಸ್ಟ್ ಲುಕ್ ಜೊತೆಗೆ ಕಿಚ್ಚನ ಹಾಲಿವುಡ್ ಚಿತ್ರದ ಸೌಂಡ್ ಟ್ಯ್ರಾಕ್ ರಿಲೀಸ್

English summary
Pakistan and Bangladesh Fans are complimenting Sudeep's Kotigobba-2 Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X