For Quick Alerts
  ALLOW NOTIFICATIONS  
  For Daily Alerts

  ಸಾನಿಯಾ ಮಿರ್ಜಾ ಮತ್ತು ವೀಣಾ ಮಲ್ಲಿಕ್ ನಡುವೆ ಟ್ವಿಟರ್ ವಾರ್

  |

  ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್ ನಡುವಿನ ಜಟಾಪಟಿ ಟ್ಟಿಟರ್ ನಲ್ಲಿ ತಾರಕಕ್ಕೇರಿದೆ. ಇಬ್ಬರ ಜಗಳಕ್ಕೆ ಕಾರಣವಾಗಿದ್ದು ಇಂಡೊ-ಪಾಕ್ ಕ್ರಿಕೆಟ್ ಮ್ಯಾಚ್ ನಂತರ ನಡೆದ ಶೀಶಾ ಪಾರ್ಟಿ. ಹೈ ವೋಲ್ಟೇಜ್ ಪಂದ್ಯವಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ಅಭೂತ ಪೂರ್ವ ಗೆಲುವು ದಾಖಲಿಸಿದೆ.

  ಸೋತ ನಂತರ ಪಾಕಿಸ್ತಾನಿ ಕೆಲವು ಕ್ರಿಕೆಟ್ ಆಟಗಾರರು ಜೊತೆ ಸಾನಿಯಾ ಮಿರ್ಜಾ ಮತ್ತು ಪತಿ ಶೋಯೆಬ್ ಮಲ್ಲಿಕ್ ಶೀಶಾ ಕೆಫೆಯಲ್ಲಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಪಾಕಿಸ್ತಾನಿ ಕ್ರಿಕೆಟ್ ಪ್ರಿಯರನ್ನು ರೊಚ್ಚಿಗೇಳಿಸಿದೆ.

  ಇದರ ಜೊತೆಗೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇದರ ನಡುವೆ ಪಾಕ್ ನಟಿ ವೀಣಾ ಮಲ್ಲಿಕ್ ಟ್ವಿಟ್ಟರ್ ನಲ್ಲಿ ಸಾನಿಯಾ ಮಿರ್ಜಾ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಪಾಕ್ ಕ್ರಿಕೆಟಿಗರು ಶೀಶಾ ಕೆಫೆಗೆ ಹೋಗಲು ಸಾನಿಯಾ ಮಿರ್ಜಾನೆ ಕಾರಣ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

  "ಸಾನಿಯಾ ನಿನ್ನ ಮಗುವಿನ ಬಗ್ಗೆ ತುಂಬ ಚಿಂತೆ ಮಾಡುತ್ತಿದ್ದೇನೆ, ನಿನ್ನ ಮಗನನ್ನು ಶೀಶಾ ಸ್ಥಳಕ್ಕೆ ಕರೆದೊಯ್ದಿದ್ದೀರಿ, ಅಪಾಯಕಾರಿಯಲ್ಲವೆ? ಕ್ರೀಡಾಪಟುಗಳಿಗೆ ಶೀಶ ಕೆಫೆ ಒಳ್ಳೆಯದಲ್ಲ. ನೀನು ಒಬ್ಬಳು ಕ್ರೀಡಾಪಟು, ಮಗುವಿನ ತಾಯಿ ಅನ್ನೋದನ್ನು ಅರಿತುಕೊಳ್ಳಬೇಕು" ಎಂದು ಹೇಳಿ ಸಾನಿಯಾರನ್ನು ಕೆಣಕಿದ್ದಾರೆ.

  ಇದಕ್ಕೆ ಸುಮ್ಮನಿರದ ಸಾನಿಯಾ ವೀಣಾ ಮಲ್ಲಿಕ್ ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ವೀಣಾ ನಾನು ನನ್ನ ಮಗುವನ್ನು ಕರೆದುಕೊಂಡು ಹೋಗಿಲ್ಲ. ಆದರೂ ಇದು ನಿನಗಾಗಲಿ ಬೇರೆಯವರಿಗಾಗಲಿ ಸಂಬಂಧಿಸಿದ ವಿಚಾರವೇ ಅಲ್ಲ. ಇದು ನನ್ನ ವೈಯಕ್ತಿಕ ವಿಚಾರ. ಪಾಕ್ ಕ್ರಿಕೆಟಿಗರ ಬಗ್ಗೆ ಕಾಳಜಿ ವಹಿಸಲು ನಾನೇನು ಅವರ ತಾಯಿಯಲ್ಲ, ಮೆಲ್ವಚಾರಕಿಯಲ್ಲ, ಡಯಟಿಷಿಯನ್ ಅಲ್ಲ" ಎಂದು ಸರಿಯಾಗೆ ತಿರುಗೇಟು ನೀಡಿದ್ದಾರೆ.

  ಶೀಶಾ ಕೆಫೆಯಲ್ಲಿ ಸಾನಿಯಾ ಮಿರ್ಜಾ, ಅವರ ಪತಿ-ಪಾಕ್ ಆಲ್ ರೌಂಡರ್ ಶೋಯೆಬ್ ಮಲಿಕ್, ಪಾಕ್ ಕ್ರಿಕೆಟಿಗರಾದ ವಹಾಬ್ ರಿಯಾಝ್ ಮತ್ತು ಇಮಾಮ್ ಉಲ್ ಹಕ್ ಕೂಡ ಇದಿದ್ದು ವೈರಲ್ ಆದ ಫೋಟೋದಲ್ಲಿ ಕಾಣಿಸಿತ್ತು. ಈ ಬಗ್ಗೆ ಪಾಕ್ ಕ್ರಿಕೆಟ್ ಪ್ರಿಯರು ತಮ್ಮ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದರು.

  English summary
  Pakistani actress veena malik and tennis player sania mirza are Fighting on twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X