For Quick Alerts
  ALLOW NOTIFICATIONS  
  For Daily Alerts

  ಸುಷ್ಮಾ ಸ್ವರಾಜ್ 'ನರಕಕ್ಕೆ ಹೋಗಲಿ' ಎಂದ ಪಾಕಿಸ್ತಾನ ನಟಿ

  |

  ಭಾರತ ಕಂಡ ಧೀಮಂತ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ದೇಶವೆ ಕಂಬನಿ ಮಿಡಿಯುತ್ತಿದೆ. ಆದ್ರೆ ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್ ಮಾತ್ರ ಸುಷ್ಮಾ ಸ್ವರಾಜ್ ಸಾವನ್ನು ಸಂಭ್ರಮಿಸಿ, ಅಣಕಿಸಿ ಟ್ವೀಟ್ ಮಾಡಿದ್ದಾರೆ.

  ಪಾಕಿಸ್ತಾನದ ನಟಿ, ಟಿವಿ ನಿರೂಪಕಿಯಾಗಿರುವ ವೀಣಾ ಮಲ್ಲಿಕ್ ಸುಷ್ಮಾ ಸ್ವರಾಜ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಹೆಸರನ್ನು ಉಲ್ಲೇಖಿಸದೆ "ರೆಸ್ಟ್ ಇನ್ ಹೆಲ್" ಎಂದು ಟ್ವೀಟ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಸಾವನ್ನು ಸಂಭ್ರಮಿಸಿರುವ ವೀಣಾಗೆ ನೆಟ್ಟಿಗರು ಸರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

  ಸಾನಿಯಾ ಮಿರ್ಜಾ ಮತ್ತು ವೀಣಾ ಮಲ್ಲಿಕ್ ನಡುವೆ ಟ್ವಿಟರ್ ವಾರ್ ಸಾನಿಯಾ ಮಿರ್ಜಾ ಮತ್ತು ವೀಣಾ ಮಲ್ಲಿಕ್ ನಡುವೆ ಟ್ವಿಟರ್ ವಾರ್

  ಭಾರತದ ವಿಚಾರದಲ್ಲಿ ಆಗಾಗ ಮೂಗುತುರಿಸುತ್ತಲೆ ಇರುವ ವೀಣಾ ಮಲ್ಲಿಕ್ ಇತ್ತೀಚಿಗೆ ಆರ್ಟಿಕಲ್ 370 ರದ್ದತಿ ವಿಚಾರದಲ್ಲೂ ಭಾರತದ ವಿರುದ್ಧ ರೊಚ್ಚಿಗೆದ್ದು ಟ್ವೀಟ್ ಮಾಡಿದ್ದರು. "ಇದು ಜಿನಿವಾ ಒಪ್ಪಂದದ ಉಲ್ಲಂಘನೆಯಾಗಿದೆ, ಕಾಶ್ಮೀರವನ್ನು ಬಲಾತ್ಕಾರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ" ಹೇಳಿದ್ದರು.

  ವೀಣಾ ಮಲ್ಲಿಕ್ ಬಾಲಿವುಡ್ ನ ಕೆಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಷ್ಟೆಯಲ್ಲ ಕನ್ನಡದ ಸಿಲ್ಕ್ ಸಿನಿಮಾದಲ್ಲೂ ವೀಣಾ ಮಲ್ಲಿಕ್ ಕಾಣಿಸಿಕೊಂಡಿದ್ದಾರೆ.

  ವೀಣಾ ಮಲ್ಲಿಕ್ ಟ್ವೀಟ್ ನೋಡಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. "ಕೆಲಸ ಬೇಡಿಕೊಂಡು ಮತ್ತೆ ಬಾಲಿವುಡ್ ಗೆ ಬರಬೇಡ", "ಸುಷ್ಮಾ ಸ್ವಾರಾಜ್ ಸ್ವರ್ಗಕ್ಕೆ ಹೋಗುತ್ತಾರೆ, ನರಕಕ್ಕೆ ಹೋಗುವುದು ನೀನು", "ಅನೇಕ ಜನ ಪಾಕಿಸ್ತಾನಿಯರಿಗೆ ಸುಷ್ಮಾ ಸ್ವರಾಜ್ ಮೇಡಿಕಲ್ ವೀಸಾ ಕೊಡಿಸಿದ್ದಾರೆ" ಎಂದು ನೆಟ್ಟಿಗರು ವೀಣಾ ಮಲ್ಲಿಕ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

  Read more about: veena malik death ನಿಧನ
  English summary
  Pakistani actress Veena Malik controversial tweet about death of Sushma Swaraj.
  Wednesday, August 7, 2019, 18:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X