»   » ಸಲ್ಮಾನ್ ಖಾನ್ ಜೈಲು ಶಿಕ್ಷೆ ಬಗ್ಗೆ ಪಾಕಿಸ್ತಾನದ ಪ್ರತಿಕ್ರಿಯೆ

ಸಲ್ಮಾನ್ ಖಾನ್ ಜೈಲು ಶಿಕ್ಷೆ ಬಗ್ಗೆ ಪಾಕಿಸ್ತಾನದ ಪ್ರತಿಕ್ರಿಯೆ

Posted By:
Subscribe to Filmibeat Kannada

ನಟ ಸಲ್ಮಾನ್ ಖಾನ್ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆ ಪ್ರಕಟವಾಗಿದೆ. ಈ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದ್ದು ಬಾಲಿವುಡ್ ಸಿನಿಮಾರಂಗದಲ್ಲಿ ಸಲ್ಲು ಜೈಲು ಸೇರಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. ಸಾಮಾನ್ಯ ಜನರಲ್ಲಿ ಸಲ್ಲು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು ಪಾಕಿಸ್ತಾನದ ಸಿನಿಮಾ ಕಲಾವಿದರು ಕೂಡ ಸಲ್ಮಾನ್ ಶಿಕ್ಷೆಯ ಬಗ್ಗೆ ಮಾತನಾಡಿದ್ದಾರೆ.

ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜ ಆಸಿಫ್ "ಸಲ್ಮಾನ್ ಅಲ್ಪಸಂಖ್ಯಾತ ( ಮುಸ್ಲಿಂ) ಎನ್ನುವ ಕಾರಣದಿಂದ ಶಿಕ್ಷೆಗೆ ಒಳಗಾಗಿದ್ದಾರೆ. ಮಿಕ್ಕ ನಾಲ್ಕು ಜನರನ್ನ ಮಾತ್ರ ಕೋರ್ಟ್ ನಿರಾಪರಾಧಿಗಳೆಂದು ಘೋಷಣೆ ಮಾಡಿದೆ" ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Pakistani Celebrities reaction after Salman Khan being jailed

ಸಲ್ಮಾನ್ ಕೃಷ್ಣಮೃಗ ಬೇಟೆಯಾಡಲು ಪ್ರಚೋದನೆ ನೀಡಿದ್ದೇ ಈ ನಟಿಯಂತೆ.!

ಪಾಕಿಸ್ತಾನದ ಕ್ರಿಕೆಟಿಗ 'ಶೋಯೆಬ್ ಅಖ್ತರ್' ಈ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. "ನನ್ನ ಸ್ನೇಹಿತ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆ ಪ್ರಕಟವಾಗಿರುವುದು ಬೇಸರ ತಂದಿದೆ. ಕಾನೂನು ತನ್ನ ಕೆಲಸ ಮಾಡಿದೆ ಆದರೆ ಅವರ ಅಭಿಮಾನಿಗಳು ಮತ್ತು ಕುಟುಂಬದವರಿಗೆ ಇದು ಬೇಸರ ತರಿಸುವ ವಿಚಾರ" ಎಂದಿದ್ದಾರೆ.

ಪಾಕಿಸ್ತಾನಿ ಸಿನಿಮಾ ನಟಿ 'ಮಾವ್ರಾ ಹೊಕೆನ್' "ಸಲ್ಮಾನ್ ಖಾನ್ ಒಳ್ಳೆ ವ್ಯಕ್ತಿ. ಕಾನೂನು ತಪ್ಪು ನಿರ್ಧಾರ ತೆಗೆದುಕೊಂಡಿದೆ. ಒಳ್ಳೆ ಮನಸ್ಸಿರುವ ವ್ಯಕ್ತಿಗೆ ಶಿಕ್ಷೆ ಆಗುತ್ತಿದೆ" ಎಂದು ಟ್ವಿಟ್ ಮಾಡಿದ್ದಾರೆ.

Pakistani Celebrities reaction after Salman Khan being jailed

ಖ್ಯಾತ ಗಾಯಕ 'ಶಹಜದ್ ರಾಯ್' ಕೂಡ ಸಲ್ಮಾನ್ ಖಾನ್ ತೀರ್ಪಿನ ಬಗ್ಗೆ ಟ್ವಿಟ್ ಮಾಡಿದ್ದು "ಕೋರ್ಟ್ ತೀರ್ಪನ್ನು ಕೇಳಿ ತುಂಬಾ ಬೇಸರವಾಗುತ್ತಿದೆ. ಸಲ್ಮಾನ್ ಖಾನ್ ಪ್ರಾಣಿ ಪ್ರಿಯ. ಆದಷ್ಟು ಬೇಗ ಸಲ್ಮಾನ್ ಖಾನ್ ಗೆ ಜಾಮೀನು ಸಿಕ್ಕಿ ಬೇಗ ಅವರ ಕುಟುಂಬ ಸೇರಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.

ಸಲ್ಮಾನ್ ಗೆ ಮಾತ್ರ ದೋಷಿ ಪಟ್ಟ ಯಾಕೆ, ಉಳಿದವರು ಖುಲಾಸೆಯಾಗಿದ್ದು ಹೇಗೆ?

English summary
Jodhpur court has convicted Bollywood Actor Salman Khan in 1998 Blackbuck poaching case. This has sent shockwaves not just across India but also to the neighbouring country, Pakistan. Soon, reactions began pouring in from Pakistan. Read this article to know Pakistani Celebrities reaction after Salman Khan being jailed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X