ಒಂದು ಹಾಡು ಮುಗಿದ್ರೆ ಪೈಲ್ವಾನ್ ಚಿತ್ರೀಕರಣ ಕಂಪ್ಲೀಟ್
ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಯಾವಾಗ ಬರುತ್ತೆ. ಕಳೆದ ವರ್ಷದಿಂದ ಸಿನಿಮಾ ಶೂಟಿಂಗ್ ಮಾಡ್ತಿದೆ ಎಂಬ ಕುತೂಹಲ ಕಾಡ್ತಿರುವಾಗಲೇ ಕಿಚ್ಚ ಸುದೀಪ್ ಸಿಹಿ ಸುದ್ದಿ ನೀಡಿದ್ದಾರೆ.
ಪೈಲ್ವಾನ್ ಚಿತ್ರದ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದ್ದು, ಒಂದು ಹಾಡು ಮುಗಿದರೇ ಚಿತ್ರೀಕರಣ ಮುಕ್ತಾಯವಾಗುತ್ತದೆ ಎಂದು ಸ್ವತಃ ಸುದೀಪ್ ಟ್ವೀಟ್ ಮಾಡಿದ್ದಾರೆ.
ಇಷ್ಟು ದಿನ ಹೈದ್ರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ಪೈಲ್ವಾನ್ ಶೂಟಿಂಗ್ ಮಾಡುತ್ತಿದ್ದ ಚಿತ್ರತಂಡ ಕೊನೆಯ ಹಾಡಿಗಾಗಿ ಮುಂಬೈನಲ್ಲಿದೆ. ಆಲ್ ಮೋಸ್ಟ್ ಶನಿವಾರ ಈ ಹಾಡಿನ ಚಿತ್ರೀಕರಣವೂ ಮುಗಿಯಲಿದ್ದು, ಕುಂಬಳಕಾಯಿ ಹೊಡೆಯಲಿದ್ದಾರಂತೆ.

ಸುದೀಪ್ ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸುತ್ತಿದ್ದು, ಹೆಬ್ಬುಲಿ ನಿರ್ದೇಶನ ಮಾಡಿದ್ದು ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಇನ್ನುಳಿದಂತೆ ಸುನಿಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಸಖತ್ ಸೌಂಡ್ ಮಾಡ್ತಿರುವ ಪೈಲ್ವಾನ್ ಚಿತ್ರ, ಎಲ್ಲ ಅಂದುಕೊಂಡಂತೆ ಆದ್ರೆ ಸಮ್ಮರ್ ಗೆ ನಿಮ್ಮ ಮುಂದೆ ಬರಲಿದೆ.


Click it and Unblock the Notifications











