twitter
    For Quick Alerts
    ALLOW NOTIFICATIONS  
    For Daily Alerts

    'ವಾರಸುದಾರಿಕೆಗಾಗಿ ಸ್ವಪ್ರತಿಷ್ಠೆ ನಟರ ಕೆಟ್ಟಚಿಂತೆ': ಆಘಾತಕಾರಿ ವಿಷಯದ ಬಗ್ಗೆ ಜಗ್ಗೇಶ್ ಮಾತು

    |

    ಪ್ಯಾನ್ ಇಂಡಿಯಾ ಸಿನಿಮಾ ಮತ್ತು ಡಬ್ಬಿಂಗ್ ವಿಚಾರಗಳಿಗೆ ಸಂಬಂಧಿಸಿದಂತೆ ನಟ ಜಗ್ಗೇಶ್ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ನವರಸ ನಾಯಕನ ವಿರುದ್ಧ ಭಾರಿ ಟೀಕೆ, ಟ್ರೋಲ್ ಹಾಗೂ ಅವಹೇಳನಕಾರಿ ನಿಂದನೆಗಳು ಬಂದವು.

    ''ಪ್ಯಾನ್ ಇಂಡಿಯಾ ನಮ್ಮನ್ನು ಉದ್ದಾರ ಮಾಡಲ್ಲ, ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಮಾಡ್ತಾರೆ'' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸ್ಟಾರ್ ನಟನೊಬ್ಬನ ಅಭಿಮಾನಿಗಳು ಜಗ್ಗೇಶ್ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದರು. ಕಳೆದ ಎರಡು ದಿನದಿಂದ ಈ ವಿವಾದ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಜಗ್ಗೇಶ್ ಈ ಕುರಿತು ಬೇಸರಗೊಂಡಿದ್ದು, ಸತತ ಟ್ವೀಟ್‌ಗಳ ಮೂಲಕ ವಾಸ್ತವ ಹೇಳಲು ಪ್ರಯತ್ನಿಸಿದರು.

    'ಡಬ್ಬಿಂಗ್ ತಂದವರು, ನೀವು ಅಪ್ಪನಿಗೆ ಹುಟ್ಟಿದವರಾ? ಕನ್ನಡ ದ್ರೋಹಿಗಳು': ಜಗ್ಗೇಶ್ ಹೇಳಿಕೆಗೆ ಭಾರಿ ಖಂಡನೆ'ಡಬ್ಬಿಂಗ್ ತಂದವರು, ನೀವು ಅಪ್ಪನಿಗೆ ಹುಟ್ಟಿದವರಾ? ಕನ್ನಡ ದ್ರೋಹಿಗಳು': ಜಗ್ಗೇಶ್ ಹೇಳಿಕೆಗೆ ಭಾರಿ ಖಂಡನೆ

    ಆದ್ರೀಗ, ಈ ಬೆಳವಣಿಗೆಯನ್ನು ಇಲ್ಲಿಗೆ ಮುಗಿಸುವ ತೀರ್ಮಾನಕ್ಕೆ ಬಂದಿರುವ ಜಗ್ಗೇಶ್ ಆಘಾತಕಾರಿ ವಿಷಯವೊಂದನ್ನು ಹೊರಹಾಕಿದ್ದಾರೆ. ಇಂದಿನ ಕೆಲವು ನಟರಲ್ಲಿ ಕೆಟ್ಟ ಚಿಂತೆ ಇದೆ ಎಂದು ಟ್ವೀಟ್ ಮಾಡಿ ಪ್ರಶ್ನೆ ಹುಟ್ಟುಹಾಕಿದ್ದಾರೆ. ಮುಂದೆ ಓದಿ...

    ವಾರಸುದಾರಿಕೆಗಾಗಿ ಚಿಂತೆ

    ವಾರಸುದಾರಿಕೆಗಾಗಿ ಚಿಂತೆ

    ಜಗ್ಗೇಶ್ ಅವರ ವಿಚಾರಗಳಿಗೆ ಸಂಬಂಧಿಸಿದಂತೆ ನಡೆದ ಬೆಳವಣಿಗೆಯಿಂದ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಮಟ್ಟದ ಲೆಕ್ಕಾಚಾರಗಳು ಇದೆ ಎಂದು ಬಹಿರಂಗವಾಗಿದೆ. ಚಿತ್ರರಂಗದಲ್ಲಿ ಮುಂದಿನ ವಾರಸುದಾರಿಕೆಗಾಗಿ ಕೆಲವು ನಟರು ಚಿಂತಿಸುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಜಗ್ಗೇಶ್ ಬಿಚ್ಚಿಟ್ಟಿದ್ದಾರೆ.

    ನಾವು ಹೋದರೆ ವಾರಸುದಾರರು

    ನಾವು ಹೋದರೆ ವಾರಸುದಾರರು

    ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್ ''ತುಂಬ ಚರ್ಚೆಬೇಡ ಒಂದು ಸತ್ಯಹೇಳಿ ಮುಗಿಸುವೆ. ಸ್ನೇಹಿತರೆ ಇಂದಿನ ಕೆಲ ಸ್ವಪ್ರತಿಷ್ಟೆ ನಟರಿಗೆ ನಮ್ಮಂಥ ಸೀನಿಯಾರಿಟಿ ನಟರು ತೊಡಕಾಗಿದ್ದೇವೆ. ನಾವು ಹೋದರೆ ಅಥವ ಸತ್ತರೆ ಇವರೆ ವಾರಸುದಾರರು ಎಂಬ ಕೆಟ್ಟಚಿಂತೆ ಇದೆ'' ಎಂಬ ಅಪಾಯಕಾರಿ ವಿಷಯದ ಬಗ್ಗೆ ತಿಳಿಸಿದ್ದಾರೆ.

    ಬಕೆಟ್ ಹಿಡಿಯೋನು ಎಂದವರಿಗೆ ನಟ ಜಗ್ಗೇಶ್ ಕೊಟ್ಟ ಖಡಕ್ ಉತ್ತರವಿದುಬಕೆಟ್ ಹಿಡಿಯೋನು ಎಂದವರಿಗೆ ನಟ ಜಗ್ಗೇಶ್ ಕೊಟ್ಟ ಖಡಕ್ ಉತ್ತರವಿದು

    ನಟರ ಸಂಭಾಷಣೆ ಆಡಿಯೋ

    ನಟರ ಸಂಭಾಷಣೆ ಆಡಿಯೋ

    ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲನಟರ ಆಡಿಯೋ ಸಂಭಾಷೆಯನ್ನು ಸಹ ಜಗ್ಗೇಶ್ ಅವರು ಕೇಳಿದ್ದಾರಂತೆ. ''ಕೆಲ ನಟರ ಆಡಿಯೋ ಸಂಭಾಷೆಯನ್ನು ಕೇಳಿಸಿದ್ದಾರೆ. ಹೀಗರಬೇಕಾದರೆ ಇಂದಿನ ಚಿಂತನೆ. ರಾಯರಿಗೆ ಒಪ್ಪಿಸಿ ಶಕ್ತಿ ಇರುವಷ್ಟು ದುಡಿಯುತ್ತೇವೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    Recommended Video

    ಅಮೋಘ ವಾಗಿರುವ ಸ್ಕ್ರಿಪ್ಟ್ ಸಿಕ್ಕಿದೆ.| Vasishta Simha | Filmibeat Kannada
    ನಾಯಕತ್ವಕ್ಕಾಗಿ ಇಂಡಸ್ಟ್ರಿಯಲ್ಲಿ ಲೆಕ್ಕಾಚಾರ?

    ನಾಯಕತ್ವಕ್ಕಾಗಿ ಇಂಡಸ್ಟ್ರಿಯಲ್ಲಿ ಲೆಕ್ಕಾಚಾರ?

    ರಾಜ್, ವಿಷ್ಣು, ಅಂಬಿ ನಂತರ ಸ್ಯಾಂಡಲ್ ವುಡ್‌ನಲ್ಲಿ ನಾಯಕತ್ವದ ಕೊರೆತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಹಿರಿಯ ನಟರಾದ ಶಿವರಾಜ್ ಕುಮಾರ್ಮ ಜಗ್ಗೇಶ್, ರವಿಚಂದ್ರನ್ ಅಂತಹ ನಟರ ಮಾರ್ಗದರ್ಶನದಲ್ಲಿ ಚಿತ್ರರಂಗ ನಡೆಯಬೇಕಿದೆ. ಆದರೆ, ಜಗ್ಗೇಶ್ ಅವರ ಹೇಳುವ ವರಸೆ ನೋಡಿದ್ರೆ ಇಂದಿನ ಯುವ ನಟರಿಗೆ ನಾಯಕತ್ವದ ಮೇಲೆ ಕಣ್ಣು ಬಿದ್ದಂತಿದೆ.

    ಪ್ಯಾನ್ ಇಂಡಿಯಾ ವಿವಾದ: 'ಎಷ್ಟೆ ಬೆಳೆದರು ತಂದೆ ಮುಂದೆ ಮಕ್ಕಳೇ ವಿನಃ ತಂದೆಯಾಗಲ್ಲಾ'ಪ್ಯಾನ್ ಇಂಡಿಯಾ ವಿವಾದ: 'ಎಷ್ಟೆ ಬೆಳೆದರು ತಂದೆ ಮುಂದೆ ಮಕ್ಕಳೇ ವಿನಃ ತಂದೆಯಾಗಲ್ಲಾ'

    English summary
    Pan India Controversy: Kannada actor Jaggesh comes to final conclude. he tweeted last clarification about current issue.
    Friday, November 27, 2020, 15:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X