'ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ' : ಹರೆಯದ ಬಗ್ಗೆ ಭಟ್ಟರ ಪಾಠ
Recommended Video

ಯೋಗರಾಜ್ ಭಟ್ ತಮ್ಮ ಸಿಂಪಲ್ ಪದಗಳ ಮೂಲಕ ದೊಡ್ಡ ದೊಡ್ಡ ವಿಷಯಗಳನ್ನು ಹೇಳುವುದರಲ್ಲಿ ಫೇಮಸ್. ಜೀವನದ ಬಗ್ಗೆ, ಪ್ರೀತಿ ಬಗ್ಗೆ ಹೀಗೆ ಬೇರೆ ಬೇರೆ ವಿಷಯಗಳ ಬಗ್ಗೆ ಹೇಳುತ್ತಿದ್ದ ಭಟ್ಟರು ಈ ಬಾರಿ ಶೃಂಗಾರ ಕಥೆ ಹೇಳುತ್ತಿದ್ದಾರೆ.
''ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ.. ನಾಚಿಕೆಯೂ ನನ್ನ ಜೊತೆ ಟೂ ಬಿಟ್ಟಿದೆ...'' ವಾವ್.. ಎಷ್ಟೊಂದು ಒಳ್ಳೆಯ ಸಾಲು ಅಲ್ವಾ ಇದು. ಇದು 'ಪಂಚತಂತ್ರ' ಸಿನಿಮಾದ ಒಂದು ಹಾಡಿನ ಸಾಲು. ಈ ಸಾಲು ಈಗ ಎಲ್ಲರ ಮೆಚ್ಚಿಗೆ ಪಡೆದಿದೆ.

ಸಿನಿಮಾದ ಈ ಹಾಡಿನ ಕೆಲವು ಮೇಕಿಂಗ್ ಫೋಟೋಗಳು ಹೊರ ಬಂದಿವೆ. ರವಿಚಂದ್ರನ್ ಅವರ ಲೆವೆಲ್ ನಲ್ಲಿ ಈ ಹಾಡನ್ನು ಭಟ್ಟರು ಶೂಟಿಂಗ್ ಮಾಡಿದ ಹಾಗಿದೆ. ಸಾಹಿತ್ಯದ ರೀತಿ ಹಾಡಿನಲ್ಲಿಯೂ ಶೃಂಗಾರವನ್ನು ಭಟ್ಟರು ತೋರಿಸಿದ್ದಾರೆ.

ಮೇಕಿಂಗ್ ಫೋಟೋಗಳು ಸಖತ್ ಹಾಟ್ ಆಗಿದೆ. ಹಾಡು ಹದಿ ಹರೆಯ ಹೃದಯಕ್ಕೆ ಹತ್ತಿರ ಆಗಲಿದೆ. 'ಪಂಚತಂತ್ರ' ಸಿನಿಮಾ ಯೂತ್ ಮತ್ತು ಫ್ಯಾಮಿಲಿಗೆ ಸಿನಿಮಾ ತುಂಬ ಇಷ್ಟ ಆಗಲಿದೆಯಂತೆ. 1/4 ಕೆ.ಜಿ ಪ್ರೀತಿ' ಸಿನಿಮಾದಲ್ಲಿ ನಟಿಸಿದ್ದ ವಿಹಾನ್ ಗೌಡ ಈ ಚಿತ್ರದ ನಾಯಕನಾಗಿದ್ದಾರೆ. ಅಕ್ಷರ ಗೌಡ ಮತ್ತು ಸೋನಾಲ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











