ಟಾಲಿವುಡ್ ಸ್ಟಾರ್ ಸಿನಿಮಾದಲ್ಲಿ 'ಪಂಚತಂತ್ರ' ನಟಿ ಅಕ್ಷರಾ
ಕನ್ನಡದ ನಟಿಯರು ಟಾಲಿವುಡ್ ಪ್ರವೇಶ ಮಾಡುವುದು ಜಾಸ್ತಿಯಾಗುತ್ತಿದೆ. ಈಗಾಗಲೇ ರಶ್ಮಿಕಾ ಮಂದಣ್ಣ ಹಾಗೂ ಶ್ರದ್ಧಾ ಶ್ರೀನಾಥ್ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇದರ ಬಳಿಕ ಅದೇ ಆಸೆ ಹೊತ್ತು ನಟಿ ಅಕ್ಷರಾ ಗೌಡ ಕೂಡ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
'ಪಂಚತಂತ್ರ' ಸಿನಿಮಾದಲ್ಲಿ ಇಬ್ಬರು ನಟಿಯರು ಇದ್ದರು. ಅದರಲ್ಲಿ ಸಖತ್ ಬೋಲ್ಡ್, ಟಾಮ್ ಬಾಯ್ ಆಗಿ ಕಾಣಿಸಿಕೊಂಡಿದ್ದ ನಟಿ ಅಕ್ಷರಾ. ಆ ಸಿನಿಮಾದಲ್ಲಿ ತನ್ನ ಸ್ಟೈಲ್ ಮೂಲಕ ಗಮನ ಸೆಳೆದ ಅಕ್ಷರಾ ಈಗ ತೆಲುಗು ಸಿನಿಮಾ ಮಾಡುತ್ತಿದ್ದಾರೆ.
ನಟ ನಾಗಾರ್ಜುನ ಅಭಿನಯದ 'ಮನ್ಮಥುಡು 2' ಸಿನಿಮಾದಲ್ಲಿ ಅಕ್ಷರಾ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಒಬ್ಬ ಇಂಡಿಪೆಂಡೆಂಟ್ ಹುಡುಗಿ ಪಾತ್ರ ಮಾಡಿದ್ದು, ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರಂತೆ. ಇಪ್ಪತ್ತು ಜನ ಹೀರೋಯಿನ್ ಗಳು ರಿಜೆಕ್ಟ್ ಆಗಿದ್ದ ಪಾತ್ರಕ್ಕೆ ಅಕ್ಷರಾ ಆಯ್ಕೆ ಆಗಿದ್ದಾರಂತೆ.

ರಾಹುಲ್ ರವಿಚಂದ್ರನ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಟೀಸರ್ ಈಗಾಗಲೇ ಸೂಪರ್ ಹಿಟ್ ಆಗಿದೆ. ನಟಿ ಲಕ್ಷ್ಮಿ ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಕುಲ್ ಪ್ರೀತ್ ಸಿಂಗ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಸಿನಿಮಾದ ಜೊತೆಗೆ ಒಂದು ಬಾಲಿವುಡ್ ಸಿನಿಮಾ ಕೂಡ ಮಾತುಕತೆ ಹಂತದಲ್ಲಿ ಇದ್ದು, ಸದ್ಯದಲ್ಲಿಯೇ ಆ ಸುದ್ದಿ ಕೂಡ ಹೊರಬರಲಿದೆಯಂತೆ.


Click it and Unblock the Notifications











