ಮಾರ್ಚ್ 29ಕ್ಕೆ ಭಟ್ಟರ 'ಪಂಚತಂತ್ರ' ತೆರೆಗೆ
ಯೋಗರಾಜ್ ಭಟ್ ನಿರ್ದೇಶನದ 'ಪಂಚತಂತ್ರ' ಅಂತಿಮವಾಗಿ ತೆರೆಮೇಲೆ ಬರ್ತಿದೆ. ಮೇಕಿಂಗ್, ಹಾಡುಗಳು, ಟ್ರೈಲರ್ ಹೀಗೆ ಪ್ರತಿಯೊಂದು ವಿಚಾರದಲ್ಲೂ ಗಮನ ಸೆಳೆಯುತ್ತಿದ್ದ ಸಿನಿಮಾ ಮಾರ್ಚ್ 29ರಂದು ಚಿತ್ರಮಂದಿರಕ್ಕೆ ಲಗ್ಗೆಯಿಡ್ತಿದೆ.
ಹೊಸ ತಂಡ, ಯುವ ಕಲಾವಿದರನ್ನ ಕಟ್ಕೊಂಡು ಭಟ್ಟರು ಹೊಸದೊಂದು ಪ್ರಯೋಗ ಮಾಡುತ್ತಿದ್ದು, ಈ ಬಾರಿ ಪ್ರೇಕ್ಷಕರಿಗೆ ಮನರಂಜನೆ ಪಕ್ಕಾ ಎನ್ನುತ್ತಿದ್ದಾರೆ.

'ಮುಗುಳುನಗೆ' ಚಿತ್ರದ ನಂತರ ಭಟ್ಟರು ಮಾಡ್ತಿರುವ ಈ ಚಿತ್ರಕ್ಕೆ ಬರಿ ನಿರ್ದೇಶನ ಮಾತ್ರವಲ್ಲ, ಚಿತ್ರಕಥೆ ಬರೆದು, ಸಾಹಿತ್ಯ ರಚಿಸಿ, ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಸೂಪರ್ ಹಿಟ್ ಆಗಿದ್ದು, ಹರಿಪ್ರಸಾದ್ ಜಯಣ್ಣ, ಹೇಮಂತ್ ಪರಡ್ಕರ್ ಬಂಡವಾಳ ಹಾಕಿದ್ದಾರೆ.
ಪಂಚತಂತ್ರ ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಸಖತ್ ಕಲರ್ ಫುಲ್ ಆಗಿ ಮೂಡಿಬಂದಿದೆ ಎಂಬ ನಿರೀಕ್ಷೆ ಇದೆ. ವಿಹಾನ್ ನಾಯಕನಾಗಿದ್ದು, ಸೋನಾಲ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಅಕ್ಷರಾ ಗೌಡ, ರಂಗಾಯಣ ರಘು ಕೂಡ ಇದ್ದಾರೆ.
English summary
Yogaraj bhat Directional movie Panchatantra movie will release on march 29th.


Click it and Unblock the Notifications