ದುನಿಯಾ ವಿಜಯ್ ಗೆ ಜಾಮೀನು: ಪಾನಿಪೂರಿ ಕಿಟ್ಟಿ ಏನಂದ್ರು.?

Recommended Video

ದುನಿಯಾ ವಿಜಯ್‌ಗೆ ಬೇಲ್ ಸಿಕ್ಕಿದ್ದಕ್ಕೆ ಬೇಸರಗೊಂಡರಾ ಕಿಟ್ಟಿ..! | Filmibeat Kannada

ಜಿಮ್ ಟ್ರೈನರ್ ಮಾರುತಿ ಗೌಡ ಕಿಡ್ನ್ಯಾಪ್ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಮತ್ತು ಸ್ನೇಹಿತರಿಗೆ ಇಂದು ಸೆಷನ್ಸ್ ಕೋರ್ಟ್ ‍ಷರತ್ತು ಬದ್ಧ ಜಾಮೀನು ನೀಡಿದೆ.

ಈ ಬಗ್ಗೆ ಪಾನಿಪೂರಿ ಕಿಟ್ಟಿ ಅವರು ಪ್ರತಿಕ್ರಿಯಿಸಿದ್ದು, ''ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ. ನಮ್ಮ ವಕೀಲರ ಜೊತೆ ಈ ಬಗ್ಗೆ ಚರ್ಚೆ ಮಾಡುತ್ತೇನೆ'' ಎಂದು ತಿಳಿಸಿದರು.

''ದುನಿಯಾ ವಿಜಯ್ ಅವರು ಹೊರಗೆ ಬಂದರೇ ನನಗೆ ಮತ್ತು ನನ್ನ ಅಣ್ಣನ ಮಗನಿಗೆ ಅಪಾಯವಿದೆ ಎಂಬ ಆತಂಕ. ನಮಗೆ ಸಾರ್ವಜನಿಕ ಅಭಿಯೋಜಕರಾಗಿ ವಕೀಲ ಶ್ಯಾಮ ಸುಂದರ್ ಅವರೇ ಬೇಕು ಎಂದು ಮನವಿ ಮಾಡಿಕೊಂಡಿದ್ದೇವು. ಆದ್ರೆ, ನೀಡಿರಲಿಲ್ಲ. ಈಗ ಅವರು ಹೇಳಿದಾಗೆ ನಾವು ಮಾಡ್ತೀವಿ. ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ'' ಎಂದು ಪಾನಿ ಪೂರಿ ಕಿಟ್ಟಿ ಹೇಳಿದ್ದಾರೆ.

pani puri kitty reaction on duniya vijay bail

''ಈ ಪ್ರಕರಣದ ಬಗ್ಗೆ ನಾನು ಎಲ್ಲೂ ರಾಜಿ ಸಂಧಾನದ ಬಗ್ಗೆ ಮಾತನಾಡಿಲ್ಲ. ನಾನು ರಾಜಿ ಆಗುವುದಿಲ್ಲ. ದುನಿಯಾ ವಿಜಯ್ ಅವರ ಪತ್ನಿ ನಾಗರತ್ನ ಅವರು ಆಸ್ಪತ್ರೆಗೆ ಬಂದಾಗ ಕೇವಲ ಆರೋಗ್ಯ ವಿಚಾರಿಸಿದರು. ಯಾವುದೇ ರಾಜಿ ಬಗ್ಗೆ ಮಾತನಾಡಿಲ್ಲ'' ಎಂದು ಸ್ಪಷ್ಟಪಡಿಸಿದರು.

''ಈ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಯಾರೂ ನನಗೆ ಯಾರೂ ಒತ್ತಡ ಹೇರಿಲ್ಲ. ನನ್ನ ಕುಟುಂಬದ ಮೇಲೆ ಕೈಹಾಕಿದ್ದಾರೆ ಎಂಬುದೇ ಈಗ ನನಗೆ ತುಂಬಾ ನೋವಿದೆ'' ಎಂದು ಬೇಸರ ಮಾಡಿಕೊಂಡರು.

ಸದ್ಯ, ಸೆಷನ್ಸ್ ಕೋರ್ಟ್ ನಿಂದ ಜಾಮೀನು ಸಿಕ್ಕಿದ್ದು, ದುನಿಯಾ ವಿಜಯ್ ಅವರ ಪರ ವಕೀಲ ಶಿವಕುಮಾರ್ ಅವರು, ಈಗ ಜಾಮೀನು ಪ್ರಕ್ರಿಯೆಯನ್ನ ಪೂರೈಸಿ, ಸಂಜೆ 6.30 ಗಂಟೆಯೊಳಗೆ ಜೈಲಿಗೆ ಆದೇಶದ ಪ್ರತಿ ಮತ್ತು ಪ್ರಕ್ರಿಯೆಗಳನ್ನ ಮುಗಿಸಬೇಕಾಗಿದೆ. ಈ ಪ್ರಕ್ರಿಯೆ ಮುಗಿದ್ರೆ, ಇಂದೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಲ್ಲವಾದಲ್ಲಿ, ಬುಧವಾರ ಬಿಡುಗಡೆಯಾಗಲಿದ್ದಾರೆ. ಯಾಕಂದ್ರೆ ನಾಳೆ ಗಾಂಧಿಜಯಂತಿ ಪ್ರಯುಕ್ತ ರಜೆ ಇರುತ್ತೆ.

More from Filmibeat

English summary
Kannada actor duniya vijay assault case: Session court granted bail today (october 1st). pani puri kitty reaction on duniya vijay bail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X