»   » 'ಆಕ್ಷನ್ ಹೀರೋ' ಆಗ್ಬೇಕೆನ್ನೋ ಆಸೆ ನಿಮಗೂ ಇದ್ಯಾ?

'ಆಕ್ಷನ್ ಹೀರೋ' ಆಗ್ಬೇಕೆನ್ನೋ ಆಸೆ ನಿಮಗೂ ಇದ್ಯಾ?

Posted By:
Subscribe to Filmibeat Kannada

ಬೆಳ್ಳಿತೆರೆ ಮೇಲೆ 'ಆಕ್ಷನ್ ಹೀರೋ' ಅಂತ ಬ್ರ್ಯಾಂಡ್ ಆಗ್ಬೇಕು ಅಂದ್ರೆ ಮೊದಲು ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ಬಾಡಿ ಬಿಲ್ಡ್ ಮಾಡಬೇಕು.

'ಬ್ಲಾಕ್ ಕೋಬ್ರಾ' ದುನಿಯಾ ವಿಜಯ್, ರಾಕಿಂಗ್ ಸ್ಟಾರ್ ಯಶ್, ಚೇತನ್ ಚಂದ್ರ, ಲವ್ಲಿ ಸ್ಟಾರ್ ಪ್ರೇಮ್ ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಿ ಸಿಲ್ವರ್ ಸ್ಕ್ರೀನ್ ಮೇಲೆ ಸೂಪರ್ ಸ್ಟಂಟ್ಸ್ ಮಾಡಿರುವುದನ್ನ ನೀವೆಲ್ಲಾ ನೋಡಿರ್ತೀರಾ.

Pani Puri Kitty's all new gym 'Muscle Planet'

ಇಂತಹ ಸ್ಟಾರ್ ನಟರ ಹಾಗೆ ನಿಮಗೂ ಬಾಡಿ ಬಿಲ್ಡ್ ಮಾಡುವ ಆಸಕ್ತಿ ಇದ್ಯಾ? ಫಿಟ್ ಆಗಿ ಕಟ್ಟುಮಸ್ತಾಗಿರಲು ನೀವು ಬಯಸುತ್ತೀರಾ? ಹಾಗಾದ್ರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. [ಬಾಹುಬಲ ಹೆಚ್ಚಿಸಿಕೊಳ್ಳಲು ಯೋಗೀಶ್ ಕಸರತ್ತು!]

'ಕರಿಚಿರತೆ' ದುನಿಯಾ ವಿಜಯ್, 'ರಾಮಾಚಾರಿ' ಯಶ್, ಪ್ರೇಮ್ ರಂತಹ ನಟರಿಗೆಲ್ಲಾ ತರಬೇತಿ ನೀಡಿರುವ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದಿರುವ, ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ 'ಪಾನಿ ಪೂರಿ' ಕಿಟ್ಟಿ ತಮ್ಮದೇ ಆದ ಹೊಸ ಜಿಮ್ ಓಪನ್ ಮಾಡುತ್ತಿದ್ದಾರೆ.

Pani Puri Kitty's all new gym 'Muscle Planet'

ವಿದ್ಯಾರಣ್ಯಪುರದಲ್ಲಿ 'ಮಸಲ್ ಪ್ಲಾನೆಟ್' ಎಂಬ ಹೊಸ ಜಿಮ್ ಇದೇ ತಿಂಗಳ 24 ನೇ ತಾರೀಖು ಉದ್ಘಾಟನೆ ಆಗಲಿದೆ. ಉದ್ಘಾಟನಾ ಸಮಾರಂಭಕ್ಕೆ ದುನಿಯಾ ವಿಜಯ್, ಯಶ್, ಧನಂಜಯ್ ಸೇರಿದಂತೆ ಸ್ಯಾಂಡಲ್ ವುಡ್ ನ ಟಾಪ್ ತಾರೆಯರೆಲ್ಲಾ ಭಾಗವಹಿಸಲಿದ್ದಾರೆ.

ಎರಡು ಅಂತಸ್ತಿನ 'ಮಸಲ್ ಪ್ಲಾನೆಟ್' ನಲ್ಲಿ ಏರೋಬಿಕ್ಸ್, ಝುಂಬಾ ಸೇರಿದಂತೆ ಬಾಡಿ ವರ್ಕೌಟ್ ಗೆ ಬೇಕಾದ ಎಲ್ಲಾ ತರಬೇತಿ ನೀಡಲಾಗುತ್ತೆ. 35 ಸ್ಪೆಷಲ್ ಟ್ರೇನರ್ಸ್ ನೀಡುವ ಮಾರ್ಗದರ್ಶನದಲ್ಲಿ ನಿಮಗೆ ಬೇಕಾದ ತರಬೇತಿ ಪಡೆಯಬಹುದು.

ಸ್ಟಾರ್ ಹೀರೋಗಳಿಗೆ ತರಬೇತಿ ನೀಡಿರುವ 'ಪಾನಿ ಪೂರಿ' ಕಿಟ್ಟಿ ಮಾರ್ಗದರ್ಶನದಲ್ಲಿ ನೀವೂ ಬಾಡಿ ಬಿಲ್ಡ್ ಮಾಡಬೇಕು ಅಂದ್ರೆ, 'ಮಸಲ್ ಪ್ಲಾನೆಟ್'ಗೆ ಭೇಟಿ ನೀಡಿ.

English summary
Are you interested in Body Building? Do you want become like Kannada Actors Yash, Duniya Vijay and Prem? Then join 'Muscle Planet' gym which is owned by Pani Puri Kitty, trainer for Kannada Actors.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada