'ಮಾಸ್ತಿ ಗುಡಿ' ದುರಂತ ಸಂಭವಿಸಿದ್ಮೇಲೆ ದುನಿಯಾ ವಿಜಯ್, ಪಾನಿಪೂರಿ ಕಿಟ್ಟಿ ಸ್ನೇಹದಲ್ಲಿ ಬಿರುಕು.!

Recommended Video

ದುನಿಯಾ ವಿಜಯ್ ಮತ್ತು ಸಹಚರರು ಅಂದರ್..! | FIlmibeat Kannada

ಇಂದು ನಿನ್ನೆಯದ್ದಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ದುನಿಯಾ ವಿಜಯ್ ಹಾಗೂ ಪಾನಿಪೂರಿ ಕಿಟ್ಟಿ ಮಧ್ಯೆ ಸ್ನೇಹ, ಸೇಡು ಇದ್ದೇ ಇದೆ.

ಇಪ್ಪತ್ತು ವರ್ಷಗಳಿಂದ ಆತ್ಮೀಯವಾಗಿದ್ದ ದುನಿಯಾ ವಿಜಯ್ ಹಾಗೂ ಪಾನಿಪೂರಿ ಕಿಟ್ಟಿ ಮಧ್ಯೆ ಬೇಸರ, ಮನಸ್ತಾಪ ಉಂಟು ಮಾಡಿದ್ದು 'ಮಾಸ್ತಿ ಗುಡಿ ದುರಂತ'. ಹೌದು, 'ಮಾಸ್ತಿ ಗುಡಿ' ದುರಂತ ಸಂಭವಿಸಿ ಎರಡು ವರ್ಷಗಳು ಉರುಳಿವೆ. ಈ ಎರಡು ವರ್ಷಗಳಿಂದ ದುನಿಯಾ ವಿಜಯ್ ಹಾಗೂ ಪಾನಿಪೂರಿ ಕಿಟ್ಟಿ ನಡುವೆ ಮಾತಿಲ್ಲ, ಕಥೆ ಇಲ್ಲ.!

'ಮಾಸ್ತಿ ಗುಡಿ' ದುರಂತ ಸಂಭವಿಸಿದ ಮೇಲೆ ದುನಿಯಾ ವಿಜಯ್ ರಿಂದ ಪಾನಿಪೂರಿ ಕಿಟ್ಟಿ ದೂರ ಉಳಿದರು. ಹೀಗಾಗಿ, ಪರ್ಸನಲ್ ಜಿಮ್ ಟ್ರೈನರ್ ಆಗಿದ್ದ ಪಾನಿಪೂರಿ ಕಿಟ್ಟಿ ಜಾಗಕ್ಕೆ ಪ್ರಸಾದ್ ಎಂಬುವರನ್ನು ದುನಿಯಾ ವಿಜಯ್ ಕರೆತಂದರು. ಇದೇ ಪ್ರಸಾದ್ ರಿಂದಲೇ ಮೊನ್ನೆ ರಾತ್ರಿ ರಂಪಾಟ ನಡೆದಿದೆ ಎನ್ನಲಾಗಿದೆ.

ಅಷ್ಟಕ್ಕೂ, 'ಮಾಸ್ತಿ ಗುಡಿ' ದುರಂತ ಸಂಭವಿಸಿದ್ಮೇಲೆ ದುನಿಯಾ ವಿಜಯ್ ರಿಂದ ಪಾನಿಪೂರಿ ಕಿಟ್ಟಿ ಅಂತರ ಕಾಯ್ದುಕೊಂಡಿದ್ದು ಯಾಕೆ.? ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

'ಮಾಸ್ತಿ ಗುಡಿ' ದುರಂತದಲ್ಲಿ ಇಬ್ಬರು ಖಳನಟರ ಸಾವು

'ಮಾಸ್ತಿ ಗುಡಿ' ದುರಂತದಲ್ಲಿ ಇಬ್ಬರು ಖಳನಟರ ಸಾವು

'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಹೆಲಿಕಾಫ್ಟರ್ ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕಿ ಖಳನಟರಾದ ಅನಿಲ್ ಹಾಗೂ ಉದಯ್ ಸಾವನ್ನಪ್ಪಿದರು. ಈ ಘಟನೆಯಿಂದ ಪಾನಿಪೂರಿ ಕಿಟ್ಟಿ ಆಘಾತಗೊಂಡರು.

ಪ್ರಾಣ ಸ್ನೇಹಿತರು

ಪ್ರಾಣ ಸ್ನೇಹಿತರು

ಅನಿಲ್ ಹಾಗೂ ಉದಯ್ ಗೆ ಪಾನಿಪೂರಿ ಕಿಟ್ಟಿ ಪ್ರಾಣ ಸ್ನೇಹಿತ. ಅನಿಲ್ ಹಾಗೂ ಉದಯ್ ಗೆ ಜಿಮ್ ಟ್ರೈನರ್ ಆಗಿದ್ದವರು ಕೂಡ ಇದೇ ಪಾನಿಪೂರಿ ಕಿಟ್ಟಿ. ಅನಿಲ್ ಮತ್ತು ಉದಯ್ 'ಮಾಸ್ತಿ ಗುಡಿ' ಶೂಟಿಂಗ್ ಸಂದರ್ಭದಲ್ಲಿ ಸಾವನ್ನಪ್ಪಿದ್ಮೇಲೆ, ದುನಿಯಾ ವಿಜಯ್ ರಿಂದ ಪಾನಿಪೂರಿ ಕಿಟ್ಟಿ ದೂರ ಸರಿದರು. ಹಾಗಂತ ಸ್ವತಃ ಪಾನಿಪೂರಿ ಕಿಟ್ಟಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಪಾನಿಪೂರಿ ಕಿಟ್ಟಿ ಹೇಳಿದ್ದೇನು.?

ಪಾನಿಪೂರಿ ಕಿಟ್ಟಿ ಹೇಳಿದ್ದೇನು.?

''ಮಾಸ್ತಿ ಗುಡಿ ಘಟನೆ ಆದ್ಮೇಲೆ, ನನಗೆ ತುಂಬಾ ಬೇಸರ ಆಯ್ತು. ನನ್ನ ಸ್ನೇಹಿತರು ಅನಿಲ್, ಉದಯ್ ತೀರಿಕೊಂಡರು. ಅದಾದ್ಮೇಲೆ, ನಾನು ದುನಿಯಾ ವಿಜಯ್ ಜೊತೆಗೆ ಮಾತನಾಡಲಿಲ್ಲ. ಫೋನ್ ಮಾಡಿದರೂ ತೆಗೆಯುತ್ತಿರಲಿಲ್ಲ'' ಎಂದು ಮಾಧ್ಯಮಗಳ ಮುಂದೆ ಪಾನಿಪೂರಿ ಕಿಟ್ಟಿ ಹೇಳಿದ್ದಾರೆ.

ಕಾನೂನು ಹೋರಾಟಕ್ಕೆ ಮುಂದಾದ ಪಾನಿಪೂರಿ ಕಿಟ್ಟಿ

ಕಾನೂನು ಹೋರಾಟಕ್ಕೆ ಮುಂದಾದ ಪಾನಿಪೂರಿ ಕಿಟ್ಟಿ

''ಅಣ್ಣನ ಮಗ ಮಾರುತಿ ಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ದುನಿಯಾ ವಿಜಯ್ ಗೆ ತಕ್ಕ ಶಿಕ್ಷೆ ಆಗಬೇಕು. ಯಾವುದೇ ಕಾರಣಕ್ಕೂ ರಾಜಿ ಆಗಲ್ಲ. ಕಾನೂನು ಹೋರಾಟ ಮಾಡುವೆ'' ಎಂದಿದ್ದಾರೆ ಪಾನಿಪೂರಿ ಕಿಟ್ಟಿ.

More from Filmibeat

English summary
Panipuri Kitty kept distance from Kannada Actor Duniya Vijay after 'Maasthi Gudi' Tragedy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X