For Quick Alerts
  ALLOW NOTIFICATIONS  
  For Daily Alerts

  ಡಿ-ಬಾಸ್ ಅವರ ಈ ಗುಣ ಎಲ್ಲರಲ್ಲೂ ಇರಬೇಕು: 'ಒಡೆಯ'ನ ಬಗ್ಗೆ ಪಂಕಜ್ ಮಾತು

  |

  ಚೆಲುವಿನ ಚಿಲಿಪಿಲಿ, ಚೈತ್ರದ ಚಂದ್ರಮ ಅಂತಹ ಸಿನಿಮಾಗಳ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ಈಗ ಕಂಬ್ಯಾಕ್ ನಿರೀಕ್ಷೆಯಲ್ಲಿದ್ದಾರೆ.

  ದುಷ್ಟ, ವೀರು, ರಣ ಅಂತಹ ಸಿನಿಮಾಗಳನ್ನು ಮಾಡಿದ್ದರೂ ಸಕ್ಸಸ್ ಸಿಕ್ಕಿಲ್ಲ. ಸ್ಟಾರ್ ನಿರ್ದೇಶಕನ ಪುತ್ರನಾಗಿದ್ದರೂ ಯಶಸ್ಸಿಗಾಗಿ ಕಾಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಡಿ ಬಾಸ್ ದರ್ಶನ್ ನಟನೆಯ 'ಒಡೆಯ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಳಿಕ ಪಂಕಜ್ ವೃತ್ತಿಜೀವನದಲ್ಲಿ ಕಂಬ್ಯಾಕ್ ಆಗುವ ಭರವಸೆಯಲ್ಲಿದ್ದಾರೆ.

  'ಒಡೆಯ' ಬಿಡುಗಡೆಗೂ ಮೊದಲೇ ದರ್ಶನ್ ಮತ್ತೊಂದು ಚಿತ್ರಕ್ಕೆ ಅಡ್ವಾನ್ಸ್ ನೀಡಿದ ಸಂದೇಶ್'ಒಡೆಯ' ಬಿಡುಗಡೆಗೂ ಮೊದಲೇ ದರ್ಶನ್ ಮತ್ತೊಂದು ಚಿತ್ರಕ್ಕೆ ಅಡ್ವಾನ್ಸ್ ನೀಡಿದ ಸಂದೇಶ್

  ದರ್ಶನ್ ಜೊತೆ ಮೊದಲ ಸಲ ತೆರೆಹಂಚಿಕೊಂಡ ಪಂಕಜ್, ಅವರಲ್ಲಿದ್ದ ವಿಶೇಷವಾದ ಗುಣದ ಬಗ್ಗೆ ಮಾತನಾಡಿದ್ದಾರೆ. ಇಂತಹ ಗುಣ ಎಲ್ಲರಲ್ಲೂ ಬೇಕು ಎಂದು ಹೇಳುವ ಮೂಲಕ ಒಡೆಯ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ, ಪಂಕಜ್ ಹೇಳಿದ ಆ ಗುಣ ಯಾವುದು?

  ಅಂದು ಆರೋಗ್ಯ ಸರಿ ಇರಲಿಲ್ಲ

  ಅಂದು ಆರೋಗ್ಯ ಸರಿ ಇರಲಿಲ್ಲ

  ಒಂದು ದಿನ ಅಣ್ಣನಿಗೆ ಹುಷಾರಿರಲಿಲ್ಲ. ಆಗ ನಾನು ಅವರ ಬಳಿ ಹೋಗಿ 'ಅಣ್ಣ ಹುಷಾರಿಲ್ಲ, ರೆಸ್ಟ್ ಮಾಡಬಹುದು ಅಲ್ವಾ' ಎಂದೆ. ಅದಕ್ಕೆ ಅವರು ಹೇಳಿದ್ರು, ''ಸುತ್ತು ಎಷ್ಟು ಜನ ಇದ್ದಾರೆ ನೋಡಿ'' ಎಂದರು. ಈ ಮಾತು ಕೇಳಿ, ನಮ್ಮ ತಂದೆಯವರು ಹೇಳಿದ್ದು ಹಾಗೂ ಅವರ ಆ ಗುಣ ಎಲ್ಲರಲ್ಲಿಯೂ ಇರಬೇಕು ಅಂತ ಅನಿಸ್ತಿತ್ತು'' ಎಂದು ಹೇಳಿಕೊಂಡರು.

  ''ಹ್ಯಾಟ್ರಿಕ್ ಹೀರೋ ಒಬ್ರೆ ಅದು ಶಿವರಾಜ್ ಕುಮಾರ್''- ದರ್ಶನ್''ಹ್ಯಾಟ್ರಿಕ್ ಹೀರೋ ಒಬ್ರೆ ಅದು ಶಿವರಾಜ್ ಕುಮಾರ್''- ದರ್ಶನ್

  ಒಬ್ಬರಿಂದ ಶೂಟಿಂಗ್ ನಿಲ್ಲಬಾರದು

  ಒಬ್ಬರಿಂದ ಶೂಟಿಂಗ್ ನಿಲ್ಲಬಾರದು

  ಒಡೆಯ ಮತ್ತು ಯಜಮಾನ ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಸಮಯದಲ್ಲಿ ದರ್ಶನ್ ಅವರ ಕಾರು ಅಪಘಾತವಾಗಿತ್ತು. ಕೈಗೆ ಪೆಟ್ಟು ಮಾಡಿಕೊಂಡಿದ್ದ ಡಿ ಬಾಸ್ ವಿಶ್ರಾಂತಿ ಪಡೆದುಕೊಂಡಿದ್ದರು. ಪೂರ್ಣವಾಗಿ ಗುಣಮುಖರಾಗದಿದ್ದರೂ, ಫಿಟ್ ಆದ ತಕ್ಷಣ ವಾಪಸ್ ಬಂದು ಯಜಮಾನ ಮತ್ತು ಒಡೆಯ ಚಿತ್ರೀಕರಣ ಮುಗಿಸಿದರು. ಕೈಗೆ ಪೆಟ್ಟಾಗಿದ್ದರೂ ತನ್ನಿಂದ ಶೂಟಿಂಗ್ ಗೆ ಕಷ್ಟವಾಗಬಾರದು ಎಂದು ನೋವಿನಲ್ಲಿಯೂ ಚಿತ್ರೀಕರಣ ಮಾಡಿದ್ದರು ದರ್ಶನ್. ಇದನ್ನು ಯಜಮಾನ ಮತ್ತು ಒಡೆಯ ನಿರ್ಮಾಪಕರು ಸ್ಮರಿಸಿಕೊಂಡಿದ್ದರು.

  ನೋಡಲು ಬಂದವನಿಗೆ ಅವಕಾಶ

  ನೋಡಲು ಬಂದವನಿಗೆ ಅವಕಾಶ

  ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ, ಜೊತೆಗೆ ಸಾಹಸ ಕಲಾವಿದನಾಗಿದ್ದ ಸಮರ್ಥ್, ಹೀಗೆ ಒಮ್ಮೆ ದರ್ಶನ್ ಅವರನ್ನು ನೋಡಲು ಮನೆಗೆ ಹೋಗಿದ್ದರಂತೆ. ಆಗ ಏನು ಮಾಡುತ್ತಿದ್ದಿಯಾ ಎಂದು ಕೇಳಿದ ದರ್ಶನ್ ಯೋಗಕ್ಷೇಮ ವಿಚಾರಿಸಿ ಕಳುಸಿದ್ದರಂತೆ. ಅಲ್ಲಿಂದ ಬಂದ ಬಳಿಕ ಸಂದೇಶ್ ಪ್ರೊಡಕ್ಷನ್ ನಿಂದ ಫೋನ್ ಬಂತು. ಯಜಮಾನರ ಆಶೀರ್ವಾದದಿಂದ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ತು'' ಎಂದು ಹೇಳಿಕೊಂಡಿದ್ದಾರೆ.

  ಮಕ್ಕಳಿಗೂ ಕೇಳಿರದ ಸಹಾಯವನ್ನು 'ಒಡೆಯ' ನಿರ್ಮಾಪಕರಿಗೆ ಕೇಳಿದರು ದರ್ಶನ್ ತಾಯಿಮಕ್ಕಳಿಗೂ ಕೇಳಿರದ ಸಹಾಯವನ್ನು 'ಒಡೆಯ' ನಿರ್ಮಾಪಕರಿಗೆ ಕೇಳಿದರು ದರ್ಶನ್ ತಾಯಿ

  ಒಡೆಯ ಚಿತ್ರಕ್ಕೆ ಆಯ್ಕೆ ಮೊದಲು ನಾನು

  ಒಡೆಯ ಚಿತ್ರಕ್ಕೆ ಆಯ್ಕೆ ಮೊದಲು ನಾನು

  ಇನ್ನು ಒಡೆಯ ಸಿನಿಮಾದಲ್ಲಿ ದರ್ಶನ್ ಅವರ ಸಹೋದರರಲ್ಲಿ ಒಬ್ಬರರಾಗಿರುವ ಯಶಸ್ ಸೂರ್ಯ, 'ಈ ಚಿತ್ರಕ್ಕೆ ಮೊದಲು ಆಯ್ಕೆ ಆಗಿದ್ದು ನಾನೇ' ಎಂದು ಖುಷಿ ಹಂಚಿಕೊಂಡಿದ್ದಾರೆ. ವೀರಂ ಸಿನಿಮಾ ನೋಡುವ ಸಂದರ್ಭದಲ್ಲೇ ನನ್ನ ಆಯ್ಕೆ ಮಾಡಿಕೊಳ್ಳಲಾಯಿತು'' ಎಂದು ಯಶಸ್ ಸೂರ್ಯ ಹೇಳಿಕೊಂಡಿದ್ದಾರೆ.

  English summary
  S Narayan son Pankaj Narayan has liked this attitude from challenging star darshan. he acted with d boss in odeya movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X