ಚಿರು ಸರ್ಜಾ ಜೊತೆ ಮಲ್ಟಿಸ್ಟಾರ್ ಚಿತ್ರ ಪ್ಲಾನ್ ಮಾಡಿದ್ದ ಪನ್ನಗಾಭರಣ
ಚಿರಂಜೀವಿ ಸರ್ಜಾ ಕೊನೆಯದಾಗಿ ಕಾಣಿಸಿಕೊಂಡಿರುವ ರಾಜಮಾರ್ತಾಂಡ, ಕ್ಷತ್ರೀಯ ಚಿತ್ರಗಳು ಬಿಡುಗಡೆಯಾಗಬೇಕಿದೆ. ಇನ್ನಷ್ಟು ಚಿತ್ರಗಳು ಮಾತುಕತೆಯ ಹಂತದಲ್ಲಿತ್ತು. ಆದ್ರೆ, ಚಿರು ಸರ್ಜಾ ಅವರ ಅಕಾಲಿಕ ನಿಧನದಿಂದ ಈ ಸಿನಿಮಾಗಳು ಸದ್ಯಕ್ಕೆ ಟೇಕ್ ಆನ್ ಅಗಲಿಲ್ಲ.
Recommended Video
ಎಲ್ಲ ಅಂದುಕೊಂಡಂತೆ ಆಗಿದ್ದರೆ ಚಿರು ಸರ್ಜಾ ಮತ್ತು ನಿರ್ದೇಶಕ ಪನ್ನಗಾಭರಣ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಬರಬೇಕಿತ್ತು. ಇದು ಕಮರ್ಷಿಯಲ್ ಕಥೆ ಹೊಂದಿತ್ತು ಹಾಗೂ ಮಲ್ಟಿಸ್ಟಾರ್ ಪ್ರಾಜೆಕ್ಟ್ ಆಗಿತ್ತು. ಸ್ಕ್ರಿಪ್ಟ್, ಇಬ್ಬರು ನಟರ ಜೊತೆ ಮಾತುಕತೆ ಎಲ್ಲವೂ ಮುಗಿದಿತ್ತು. ಆದ್ರೆ, ಸಿನಿಮಾ ಆರಂಭಕ್ಕೂ ಮುನ್ನವೇ ಚಿರು ಬಾರದ ಲೋಕಕ್ಕೆ ಹೋಗಿಬಿಟ್ಟರು. ಚಿರು ಜೊತೆಗಿನ ಪನ್ನಗಾಭರಣ ಅವರ ಈ ಆಸೆ ಕಮರಿ ಹೋಗಿದೆ. ಅಷ್ಟಕ್ಕೂ, ಚಿರು ಜೊತೆ ನಟಿಸಬೇಕಿದ್ದ ಮತ್ತೊಬ್ಬ ನಟ ಯಾರು? ಮುಂದೆ ಓದಿ....

ಲಾಕ್‌ಡೌನ್ ಆದ್ಮೇಲೆ ಆರಂಭಿಸಲು ಚಿಂತಿಸಿದ್ದರು
ಪನ್ನಗಾಭರಣ ನಿರ್ದೇಶನದಲ್ಲಿ ಮೂಡಿಬಂದಿದ್ದ ಫ್ರೆಂಚ್ ಬಿರಿಯಾನಿ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಪುನೀತ್ ರಾಜ್ ಕುಮಾರ್ ಬ್ಯಾನರ್‌ನಲ್ಲಿ ಈ ಸಿನಿಮಾ ತಯಾರಾಗಿತ್ತು. ಪನ್ನಗಾಭರಣ ಸಿನಿಮಾ ಎಂಬ ಕಾರಣಕ್ಕೆ ಚಿರು ಸರ್ಜಾಗೆ ಈ ಚಿತ್ರ ನೋಡಬೇಕೆಂಬ ಆಸೆ ಇತ್ತು. ರಿಲೀಸ್ ಆದ್ಮೇಲೆ ನೋಡುವ ಆಸೆ ಹೊಂದಿದ್ದರು.

ನಿರ್ದೇಶನ ಮಾಡಬೇಕೆಂಬ ಕನಸು ಇತ್ತು
ನನ್ನಿಂದ ಕಮರ್ಷಿಯಲ್ ಸಿನಿಮಾವೊಂದನ್ನು ನಿರ್ದೇಶನ ಮಾಡಿಸಬೇಕು ಎಂಬ ಆಸೆಯನ್ನು ಚಿರು ಸರ್ಜಾ ಹೊಂದಿದ್ದರು. ಚಿರುಗೆ ಸಿನಿಮಾ ಡೈರೆಕ್ಟ್ ಮಾಡಬೇಕೆಂದು ನಾನು ಆಸೆ ಇಟ್ಕೊಂಡಿದ್ದೆ. ಅದಕ್ಕೆ ತಯಾರಿ ಸಹ ನಡೆದಿತ್ತು. ನಿರ್ಮಾಪಕರ ಬಳಿಯೂ ಮಾತುಕತೆ ಆಗಿತ್ತು'' ಎಂದು ಫಿಲ್ಮಿಬೀಟ್ ಜೊತೆ ಪನ್ನಾಗಭರಣ ಹಂಚಿಕೊಂಡಿದ್ದಾರೆ.

ಪ್ರಜ್ವಲ್-ಚಿರು-ಪನ್ನಾಗಭರಣ ಪ್ರಾಜೆಕ್ಟ್
ಚಿರು ಸರ್ಜಾ ಮತ್ತು ಪ್ರಜ್ವಲ್ ದೇವರಾಜ್ ಇಬ್ಬರನ್ನು ನಾಯಕರನ್ನಾಗಿಸಿ ಮಲ್ಟಿಸ್ಟಾರ್ ಸಿನಿಮಾ ಮಾಡುವ ತಯಾರಿ ನಡೆಸಿದ್ದರು ಪನ್ನಗಾಭರಣ. ಈ ಕುರಿತು ಕಥೆ ಮಾಡಿ, ಸ್ಕ್ರಿಪ್ಟ್ ಕೆಲಸ ಮುಗಿಸಿ, ಇಬ್ಬರ ಬಳಿಯೂ ಚರ್ಚಿಸಿದ್ದರಂತೆ. ಲಾಕ್‌ಡೌನ್ ಆದ್ಮೇಲೆ ಶುರು ಮಾಡೋಣ ಅಂತ ಮೂವರು ಅಂದುಕೊಂಡಿದ್ದರಂತೆ.

ಮೂವರು ದೋಸ್ತಿಗಳು
ಪ್ರಜ್ವಲ್ ದೇವರಾಜ್, ಚಿರಂಜೀವಿ ಸರ್ಜಾ ಹಾಗೂ ಪನ್ನಗಾಭರಣ ಮೂವರು ದೋಸ್ತಿಗಳು. ಬಹಳ ಒಳ್ಳೆಯ ಸ್ನೇಹಿತರು. ಸಿನಿಮಾ ಕ್ಷೇತ್ರ ಬಿಟ್ಟು ಖಾಸಗಿಯಾಗಿ ಬಹಳ ಆತ್ಮೀಯ ವ್ಯಕ್ತಿಗಳು. ಅನೇಕ ಪಾರ್ಟಿ, ಸಮಾರಂಭ, ಕಾರ್ಯಕ್ರಮಗಳಲ್ಲಿ ಈ ಮೂವರು ಹಾಗೂ ಮೇಘನಾ ರಾಜ್ ಸಹ ಒಟ್ಟಿಗೆ ಭಾಗವಹಿಸಿರುವ ಉದಾಹರಣೆಗಳಿವೆ.


Click it and Unblock the Notifications











