ಕಳೆದ ವರ್ಷ ಈ ಸಮಯದಲ್ಲಿ ಚಿರು ಇದ್ದ ನೆನಪು ಹಂಚಿಕೊಂಡ ಪನ್ನಗಾಭರಣ
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಮರೆಯಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ. ಜೂನ್ 7ಕ್ಕೆ ಚಿರು ಸರ್ಜಾ ಮೊದಲನೇ ವರ್ಷದ ಪುಣ್ಯ ಸ್ಮರಣೆ. ಇಂತಹ ಸಮಯದಲ್ಲಿ ಚಿರು ಸರ್ಜಾ ಆಪ್ತ ಪನ್ನಗಾಭರಣ ತಮ್ಮ ಸ್ನೇಹಿತನ ನೆನಪು ಮೆಲುಕು ಹಾಕಿದ್ದಾರೆ.
Recommended Video
ಕಳೆದ ವರ್ಷ ಚಿರು ಸರ್ಜಾ ಈ ಸಮಯದಲ್ಲಿ ಏನು ಮಾಡ್ತಿದ್ದರು ಎಂದು ಫೋಟೋವೊಂದನ್ನು ಹಂಚಿಕೊಂಡು ಅಗಲಿದ ಸ್ನೇಹಿತನನ್ನು ನೆನಪಿಸಿಕೊಂಡಿದ್ದಾರೆ. ಪನ್ನಗಾಭರಣ ಶೇರ್ ಮಾಡಿರುವ ಫೋಟೋ ನೋಡಿ ಅಭಿಮಾನಿಗಳು ಬಹಳ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚಿರು ಇಲ್ಲ ಎಂದು ಊಹಿಸಲು ಕಷ್ಟ ಎಂದು ಭಾವುಕರಾಗಿದ್ದಾರೆ. ಮುಂದೆ ಓದಿ...

ಚಿರು ಜೊತೆ ಪನ್ನಗಾಭರಣ
ನಿರ್ದೇಶಕ ಪನ್ನಗಾಭರಣ ಹಂಚಿಕೊಂಡಿರುವ ವಿವರದ ಪ್ರಕಾರ ಈ ಫೋಟೋ ಮೇ 31ರಂದು ಕ್ಲಿಕ್ಕಿಸಿರುವುದು. ಅಂದ್ರೆ ಚಿರು ಸರ್ಜಾ ನಿಧನಕ್ಕೂ ಒಂದು ವಾರದ ಹಿಂದೆ. ಆ ದಿನ ಪನ್ನಗಾಭರಣ ಮತ್ತು ಚಿರಂಜೀವಿ ಸರ್ಜಾ ಜೊತೆ ಇದ್ದರು. ಫೋಟೋದಲ್ಲಿ ಪನ್ನಗಾ ಅವರ ಹೇರ್ ಟ್ರಿಮ್ ಮಾಡ್ತಿದ್ದಾರೆ ಚಿರು. ಅಂದ್ಹಾಗೆ, ಚಿರು ಜೊತೆಗಿನ ಕೊನೆಯ ಫೋಟೋ ಇದು ಎಂದು ಹೇಳಿಕೊಂಡಿದ್ದಾರೆ.z

ಅಂಬಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದ ನಿರ್ದೇಶಕ
ಮೇ 29 ರಂದು ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬಕ್ಕೆ ಪನ್ನಗಾಭರಣ ಫೋಟೋ ಶೇರ್ ಮಾಡಿ ಶುಭಕೋರಿದ್ದರು. ಆ ಫೋಟೋದಲ್ಲಿ ದಿವಂಗತ ನಟ ಚಿರಂಜೀವಿ ಸರ್ಜಾ, ಪನ್ನಗಾಭರಣ ಸೇರಿದಂತೆ ಸ್ನೇಹಿತರು ಇದ್ದರು.

ಚಿರು ಜೊತೆ ಸಿನಿಮಾ ಮಾಡುವ ಆಸೆ
ಅಂದ್ಹಾಗೆ, ಚಿರು ಸರ್ಜಾ, ಪ್ರಜ್ವಲ್ ದೇವರಾಜ್ ಜೊತೆ ಮಲ್ಟಿಸ್ಟಾರ್ ಸಿನಿಮಾ ಮಾಡಲು ತಯಾರಿ ನಡೆಸಿದ್ದರು ಎಂದು ಖುದ್ದು ಪನ್ನಗಾಭರಣ ಈ ಹಿಂದೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ್ದ ಹೇಳಿಕೊಂಡಿದ್ದರು. ಕಳೆದ ವರ್ಷದ ಲಾಕ್‌ಡೌನ್ ಮುಗಿದ ಮೇಲೆ ಶುರು ಮಾಡೋಣ ಅಂತಿದ್ದರು. ಆದ್ರೆ, ವಿಧಿಯ ಆಟದ ಮುಂದೆ ಪನ್ನಗಾಭರಣ ಆಸೆ ನೆರವೇರಲಿಲ್ಲ.

ಚಿರು ಇಲ್ಲದ ಒಂದು ವರ್ಷ
ಚಿರಂಜೀವಿ ಸರ್ಜಾ ಕಳೆದುಕೊಂಡ ಕುಟುಂಬ ಮತ್ತು ಅಭಿಮಾನಿ ವರ್ಗ ಬಹಳ ನೊಂದಿದ್ದರು. ಆಮೇಲೆ ಜೂನಿಯರ್ ಚಿರು ಆಗಮನದಿಂದ ಮೇಘನಾ ರಾಜ್ ಮುಖದಲ್ಲಿ ಮತ್ತೆ ಸಂತಸ ನೋಡುವಂತಾಯಿತು. ಮಗನ ರೂಪದಲ್ಲಿ ಚಿರು ಸರ್ಜಾರನ್ನು ನೋಡುತ್ತಿರುವ ಮೇಘನಾ ಪ್ರತಿದಿನವೂ ಪತಿಯನ್ನು ನೆನಪಿಸಿಕೊಳ್ಳುತ್ತಲೇ ಇರ್ತಾರೆ. ಇನ್ಸ್ಟಾದಲ್ಲಿ ಚಿರು ಫೋಟೋಗಳನ್ನು ಪೋಸ್ಟ್ ಮಾಡ್ತಾನೆ ಇರ್ತಾರೆ.


Click it and Unblock the Notifications











