ನನ್ನ ಬಳಿ 2 ಕನಸನ್ನ ಹೇಳಿಕೊಂಡಿದ್ದರು, ಅದನ್ನ ನಿಜ ಮಾಡಿದ್ದಾರೆ; ಪತಿಯ ಬಗ್ಗೆ ಪರಿಮಳ ಜಗ್ಗೇಶ್ ಮಾತು

ಸಿನಿಮಾರಂಗದಲ್ಲಿ 40 ವರ್ಷಗಳನ್ನು ಪೂರೈಸಿರುವ ಜಗ್ಗೇಶ್ ಯಶಸ್ಸಿನ ಹಿಂದೆ ಅವರ ಪತ್ನಿಯ ಪಾತ್ರವು ಸಾಕಷ್ಟಿದೆ. ಜಗ್ಗೇಶ್ ಕಷ್ಟದ ಸಮಯದಲ್ಲಿ ಜೊತೆಗಿದ್ದು, ಬೆಂಬಲಕ್ಕೆ ನಿಂತಿದ್ದು ಪತ್ನಿ ಪರಿಮಳ ಜಗ್ಗೇಶ್. ಜಗ್ಗೇಶ್ ಗೆ ಸಿನಿಮಾದ ಮೇಲಿರುವ ಪ್ರೀತಿ ಎಷ್ಟಿದೆ ಎನ್ನುವುದು ಪರಿಮಳ ಜಗ್ಗೇಶ್ ಅವರಿಗೆ ಚೆನ್ನಾಗಿಯೇ ಗೊತ್ತಿದೆ.

Recommended Video

ಸಿನಿ ಜೀವನದ ಮೊದಲ ಡೈಲಾಗ್ ಹೊಡೆದ ಜಗ್ಗೇಶ್ | Jaggesh 40 years Cine Journey | Filmibeat Kannada

40 ವರ್ಷ ಪೂರೈಸಿದ ಈ ಸಮಯದಲ್ಲಿ ಜಗ್ಗೇಶ್ ಇಂದು (ನವೆಂಬರ್ 24) ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಜಗ್ಗೇಶ್ ಅವರ 40 ವರ್ಷದ ಸಿನಿಮಾ ಪಯಣದಲ್ಲಿ ಜೊತೆಯಲ್ಲೇ ನಿಂತು, ಸಹಾಯ ಮಾಡಿದ ಪತ್ನಿ ಪರಿಮಳ ಜಗ್ಗೇಶ್ ಮಾತನಾಡಿದ್ದಾರೆ. ಜಗ್ಗೇಶ್ ಎರಡು ಕನಸನ್ನು ಹೇಳಿಕೊಂಡಿದ್ದರು, ಒಂದು ಬಣ್ಣ ಹಚ್ಚಬೇಕು ಮತ್ತೊಂದು ನಿನ್ನನ್ನೇ ಮದುವೆ ಆಗಬೇಕು ಎಂದು ಹೇಳಿಕೊಂಡಿದ್ದರು ಎನ್ನುವ ವಿಚಾರವನ್ನು ಪರಿಮಳ ಜಗ್ಗೇಶ್ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

ಎರಡು ಕನಸನ್ನು ಹೇಳಿಕೊಂಡಿದ್ದರು

ಎರಡು ಕನಸನ್ನು ಹೇಳಿಕೊಂಡಿದ್ದರು

'ನಾನು ಜಗ್ಗೇಶ್ ಅವರನ್ನು ಭೇಟಿಯಾಗಿದ್ದು 19ನೇ ವಯಸ್ಸಿನಲ್ಲಿ. ಅವಾಗಲೇ ಎರಡು ಕನಸನ್ನು ಹೇಳಿಕೊಂಡಿದ್ರು. ಒಂದು ಬಣ್ಣ ಹಚ್ಚಬೇಕು ಅನ್ನೋದು. ಮತ್ತೊಂದು ನಿನ್ನನ್ನು ಮದುವೆ ಆಗ್ಬೇಕು ಅಂತಾ ಹೇಳಿಕೊಂಡಿದ್ರು. ಅದನ್ನು ಅವರು ನಿಜ ಮಾಡಿದ್ರು. ಮದುವೆಯಾದ ಹೊಸದರಲ್ಲಿ ಯಾರೂ ನಮ್ಮ ಜೊತೆ ಇರಲಿಲ್ಲ. ನನ್ನ ದೊಡ್ಡ ಮಗನ ಮೊದಲ ವರ್ಷದ ಬರ್ತ್ ಡೇಗೆ ಶಾಪಿಂಗ್ ಗೆ ಹೋಗಿದ್ವಿ. ಆಗ ಅಲ್ಲೊಬ್ಬರು ಜಗ್ಗೇಶ್ ಅವರನ್ನು ಗುರುತಿಸಿದ್ರು. ಆಗ ತುಂಬಾನೇ ಖುಷಿ ಆಗಿತ್ತು. ನನ್ನ ಅಪ್ಪ ಅಮ್ಮನಿಗೆ ದೇವರ ಮೇಲೆ ಪ್ರೀತಿಯಿಲ್ಲ. ಆದ್ರೆ ಜಗ್ಗೇಶ್ ಮನೆಯಲ್ಲಿ ತೀರ ಭಿನ್ನ.'

ಮಂತ್ರಾಲಯಕ್ಕೆ ಹೋಗಿ ಬಂದಮೇಲೆ ಸಾಕಷ್ಟು ಪವಾಡಗಳು ಆಗಿವೆ

ಮಂತ್ರಾಲಯಕ್ಕೆ ಹೋಗಿ ಬಂದಮೇಲೆ ಸಾಕಷ್ಟು ಪವಾಡಗಳು ಆಗಿವೆ

'ಅವರು ರಾಯರನ್ನು ಅಷ್ಟೊಂದು ನಂಬುತ್ತಿದ್ರು ರಾಯರ ಮೇಲೆ ಅಷ್ಟೊಂದು ಅಭಿಮಾನ ಇಟ್ಟುಕೊಂಡಿದ್ರು. ಮಂತ್ರಾಲಯಕ್ಕೆ ಹೋಗಿ ಬಂದ್ಮೇಲೆ ಸಾಕಷ್ಟು ಪವಾಡಗಳು ಆಗಿದ್ದವು. ಕೃಷ್ಣ ನೀನು ಕುಣಿದಾಗ ಸಿನಿಮಾದಲ್ಲಿ ಜಗ್ಗಿ ಎಂಟ್ರಿಗೆ ಜನರು ಎದ್ದು ಚಪ್ಪಾಳೆ ತಟ್ಟಿದ್ರು. ಅದನ್ನು ನೋಡಿ ನನಗೆ ತುಂಬಾ ಖುಷಿ ಆಯಿತು. ಅಲ್ಲಿಂದ ಇಲ್ಲಿ ತನಕ ಅಂದುಕೊಂಡಿದ್ದೆಲ್ಲವೂ ಆಗಿದೆ.' ಎಂದು ಹೇಳಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ನಾನು ಯಾರು ಅಂತಾನೆ ಯಾರಿಗೂ ಗೊತ್ತಿರಲಿಲ್ಲ

ನಾನು ಯಾರು ಅಂತಾನೆ ಯಾರಿಗೂ ಗೊತ್ತಿರಲಿಲ್ಲ

ರೇಣುಕಾಂಬ ಚಿತ್ರಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಗ್ಗೇಶ್ 40 ವರ್ಷದ ಪಯಣವನ್ನು ಮೆಲುಕು ಹಾಕಿದ್ರು. 'ನಾನು ಯಾರು ಅಂತಾನೇ ಯಾರಿಗೂ ಗೊತ್ತಿರಲಿಲ್ಲ. ಆಗ ನನ್ನನ್ನು ಗುರುತಿಸಿದ್ದು ಮಾಧ್ಯಮ. ಅಲ್ಲಿಂದ ನನಗೆ ಅವಕಾಶ ಸಿಗೋಕೆ ಆರಂಭ ಆಯ್ತು' ಎಂದು ಜಗ್ಗೇಶ್ ಹೇಳಿದ್ದಾರೆ.

ಜೊತೆಯಲ್ಲಿ ನಿಂತ ಎಲ್ಲರಿಗೂ ಧನ್ಯವಾದಗಳು

ಜೊತೆಯಲ್ಲಿ ನಿಂತ ಎಲ್ಲರಿಗೂ ಧನ್ಯವಾದಗಳು

ಚಿತ್ರರಂಗದಲ್ಲಿ 40 ವರ್ಷದ ಸವೆಸಿದ ಜಗ್ಗೇಶ್ ತನ್ನ ಜರ್ನಿಯಲ್ಲಿ ಬೆನ್ನಿಗೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಸಾಕಷ್ಟು ಪ್ರೀತಿ ಕೊಟ್ಟು, 40 ವರ್ಷ ನಡೆಸಿಕೊಂಡು ಬಂದಿದ್ದಾರೆ ಅಂತ ನೆನೆದು ಭಾವುಕರಾದರು. ಸಿನಿಮಾರಂಗದಲ್ಲಿ ನನ್ನನ್ನು 40 ವರ್ಷ ಪೂರೈಸುವಂತೆ ಆ ದೇವರು ಮಾಡಿರುವುದು. ಸಾಕಷ್ಟು ಜನ ಸಹಾಯ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

More from Filmibeat

English summary
Actor Jaggesh wife Parimala speak about her husband 40 years journey in Kannada Film Industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X