For Quick Alerts
  ALLOW NOTIFICATIONS  
  For Daily Alerts

  'ಪರಿಮಳ ಲಾಡ್ಜ್' ಕಡೆಯಿಂದ ಡಿ ಬಾಸ್ ಗೆ ಅಪ್ಪನ ಫೊಟೋ ಗಿಫ್ಟ್

  |
  Parimala lodge movie : ಪರಿಮಳ ಲಾಡ್ಜ್ ಚಿತ್ರತಂಡದಿಂದ ದಾಸನಿಗೆ ಉಡುಗೊರೆ

  ಪರಿಮಳ ಲಾಡ್ಜ್ ಅವರು ಯಾಕೆ ದರ್ಶನ್ ಗೆ ಗಿಫ್ಟ್ ಕೊಡ್ತಿದ್ದಾರೆ ಅಂತ ಗೊಂದಲಕ್ಕೆ ಒಳಗಾಗಬೇಡಿ. ಪರಿಮಳ ಲಾಡ್ಜ್ ಅಂದ್ರೆ ಸಿನಿಮಾ ಎನ್ನುವುದು ಈಗಾಗಲೆ ಬಹುತೇಕರಿಗೆ ಗೊತ್ತಾಗಿದೆ. ನಿರ್ದೇಶಕ ವಿಜಯ್ ಪ್ರಸಾದ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಪರಿಮಳ ಲಾಡ್ಜ್ ಈಗ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  ವಿಶೇಷ ಅಂದ್ರೆ ವಿಜಯ್ ಪ್ರಸಾದ್ ಅವರ ಪರಿಮಳ ಲಡ್ಜ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಿದ್ದಾರೆ. ಟೀಸರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರತಂಡ ದರ್ಶನ್ ಗೆ ಅವರ ತಂದೆ, ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಅವರ ಫೊಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ.

  ಈ ಹಿಂದೆ ಅಂದ್ರೆ ವಿಜಯ್ ಪ್ರಸಾದ್ ನಿರ್ದೇಶನದ ನೀರ್ ದೋಸೆ ಸಿನಿಮಾ ಆಡಿಯೋ ರಿಲೀಸ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದರು. ಆ ಸಮಯದಲ್ಲಿ ವಿಜಯ್ ಪ್ರಸಾದ್ ಅಂಡ್ ಟೀಂ ಶಿವಣ್ಣನಿಗೆ ಡಾ.ರಾಜ್ ಫೊಟೋವನ್ನು ಗಿಫ್ಟಾಗಿ ನೀಡಿದ್ದರು.

  ಅಂದ್ಹಾಗೆ ಪರಿಮಳ ಲಾಡ್ಜ್ ನಲ್ಲಿ ನೀನಾಸಂ ಸತೀಶ್ ಮತ್ತು ಯೋಗಿ ಇಬ್ಬರು ಸಲಿಂಗ ಕಾಮಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಸುಮನ್ ರಂಗನಾಥ್ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡರೆ ಹಿರಿಯ ನಟ ದತ್ತಣ್ಣ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ.

  English summary
  Vijaya Prasad's Parimala Lodge team Thoogudeepa srinivas Photo gifts to Challenging star Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X