'D 53' ಪೋಸ್ಟರ್ ಹಿಂದಿನ ಪ್ರತಿಭಾವಂತ ಇವರೇ

ಒಬ್ಬ ಪ್ರತಿಭಾವಂತ ತನಗೆ ಒಂದು ಸಣ್ಣ ಅವಕಾಶ ಸಿಕ್ಕರೂ ತಾನೇನು ಅಂತ ಸಾಬೀತು ಮಾಡಿಕೊಳ್ಳಬೇಕು. ಈಗ ಅದೇ ರೀತಿ ಒಬ್ಬ ಟ್ಯಾಲೆಂಟೆಡ್ ಹುಡುಗ ತನ್ನ ಕೆಲಸದ ಮೂಲಕ ಎಲ್ಲರ ಮೆಚ್ಚುಗೆಗಳಿಸಿದ್ದಾನೆ.

ನಟ ದರ್ಶನ್ ಅಭಿನಯದ 53 ಸಿನಿಮಾದ ಮೊದಲ ಪೋಸ್ಟರ್ ನಿನ್ನೆ ಬಿಡುಗಡೆಯಾಗಿದೆ. ದರ್ಶನ್ ಅಭಿಮಾನಿಗಳು ಪೋಸ್ಟರ್ ನೋಡಿ ದಿಲ್ ಖುಷಿ ಆಗಿದ್ದಾರೆ. ಬೇರೆಲ್ಲ ಸಿನಿಮಾಗಳಿಂತ ಈ ಪೋಸ್ಟರ್ ತುಂಬ ವಿಭಿನ್ನ ಹಾಗೂ ವಿಶೇಷವಾಗಿದೆ.

ಫಸ್ಟ್ ಇಂಪ್ರೆಷನ್ ಬೆಸ್ಟ್ ಇಂಪ್ರೆಷನ್ ಎನ್ನುವ ಹಾಗೆ ಪೋಸ್ಟರ್ ಮೊದಲ ನೋಟಕ್ಕೆ ಇಷ್ಟವಾಗಿದೆ. ಸದ್ಯ ಎಲ್ಲ ಕಡೆ ಟ್ರೆಂಡ್ ಆಗುತ್ತಿರುವ ಈ ಪೋಸ್ಟರ್ ಯಾರು ಮಾಡಿದರು ಎಂಬ ನಿರೀಕ್ಷೆ ಎಲ್ಲರಿಗೆ ಇರುತ್ತದೆ. 'D 53' ಪೋಸ್ಟರ್ ಹಿಂದಿನ ಪ್ರತಿಭೆ ಯಾರು ಎಂಬ ವಿವರ ಮುಂದಿದೆ ಓದಿ...

ಪರಿವರ್ತನ್ ಬರೆದ ಚಿತ್ರ

ಪರಿವರ್ತನ್ ಬರೆದ ಚಿತ್ರ

'D 53' ಸಿನಿಮಾದ ಈ ಪೋಸ್ಟರ್ ಡಿಸೈನ್ ಮಾಡಿದವರು ಪರಿವರ್ತನ್. ಯಾವುದೇ ಕಂಪ್ಯೂಟರ್ ಗ್ರಾಫಿಕ್ ಬಳಸದೆ, ಬರೀ ಕೈ ನಲ್ಲಿ ಅವರು ಈ ಚಿತ್ರ ಬರೆದಿದ್ದಾರಂತೆ. ಪೋಸ್ಟರ್ ಗೆ ಎಲ್ಲ ಕಡೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದ್ದು, ಪರಿವರ್ತನ್ ಕೂಡ ಖುಷಿಯಾಗಿದ್ದಾರೆ.

ಇಂಡಸ್ಟ್ರಿಗೆ ಬಂದು ನಾಲ್ಕು ವರ್ಷವಾಗಿದೆ

ಇಂಡಸ್ಟ್ರಿಗೆ ಬಂದು ನಾಲ್ಕು ವರ್ಷವಾಗಿದೆ

ಕಡಿಮೆ ಸಿನಿಮಾ ಮಾಡಿದರೂ ಪರವಾಗಿಲ್ಲ ಒಳ್ಳೆಯ ಸಿನಿಮಾಗೆ ಕೆಲಸ ಮಾಡಬೇಕು ಎನ್ನುವುದು ಪರಿವರ್ತನ್ ಅವರ ಅಭಿಪ್ರಾಯ. ಅದೇ ಕಾರಣಕ್ಕೆ ಅವರು ತಮಗೆ ಬರುವ ಅವಕಾಶದಲ್ಲಿ ಎಲ್ಲವನ್ನು ಒಪ್ಪಿಕೊಳ್ಳುವುದಿಲ್ಲವಂತೆ. ಇಂಡಸ್ಟ್ರಿಗೆ ಬಂದು ನಾಲ್ಕು ವರ್ಷವಾಗಿದ್ದು, 20 ರಿಂದ 30 ಸಿನಿಮಾಗೆ ಕೆಲಸ ಮಾಡಿದ್ದಾರಂತೆ.

ನಿರ್ದೇಶಕರ ತಂಡದಲ್ಲಿ ಕೆಲಸ

ನಿರ್ದೇಶಕರ ತಂಡದಲ್ಲಿ ಕೆಲಸ

ಮೂಲತಃ ಸಕಲೇಶಪುರದ ಪರಿವರ್ತನ್ ಮೈಸೂರಿನ ಒಂದು ಕಾಲೇಜಿನಲ್ಲಿ ಆರು ವರ್ಷ ಮಾಸ್ಟರ್ ಡಿಗ್ರಿ ಕೋರ್ಸ್ ಮುಗಿಸಿದ್ದಾರೆ. ಚಿತ್ರ ಬರೆಯುವುದು ಅಂದರೆ ಅವರಿಗೆ ನೀರು ಕುಡಿದಷ್ಟು ಸುಲಭ. ಟೈಟಲ್ ಡಿಸೈನ್ ಮಾಡುವ ಮೂಲಕವೇ ಚಿತ್ರರಂಗಕ್ಕೆ ಬಂದ ಅವರು ಸದ್ಯ ಡೈರೆಕ್ಷನ್ ಟೀಂ ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ.

ದರ್ಶನ್ ಅಭಿಮಾನಿ

ದರ್ಶನ್ ಅಭಿಮಾನಿ

ಪರಿವರ್ತನ್, ನಟ ದರ್ಶನ್ ಅವರ ಅಭಿಮಾನಿಯಂತೆ. ದರ್ಶನ್ ಫ್ಯಾನ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅವರು, ಈಗ ಅವ್ರ ಬಾಸ್ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. ದರ್ಶನ್ ಕೂಡ ಈ ಪೋಸ್ಟರ್ ಅನ್ನು ಬಹಳ ಇಷ್ಟ ಪಟ್ಟಿದ್ದಾರಂತೆ.

'ಹೆಬ್ಬುಲಿ' ಟೈಟಲ್ ಡಿಸೈನ್

'ಹೆಬ್ಬುಲಿ' ಟೈಟಲ್ ಡಿಸೈನ್

ಸುದೀಪ್ ಅವರ 'ಹೆಬ್ಬುಲಿ' ಚಿತ್ರದ ಟೈಟಲ್ ಡಿಸೈನ್ ತುಂಬ ಫೇಮಸ್ ಆಗಿತ್ತು. ಆ ಡಿಸೈನ್ ಕೂಡ ಮಾಡಿದ್ದು, ಪರಿವರ್ತನ್ ಅವರೇ. ಅಲ್ಲದೆ 'ಹೆಬ್ಬುಲಿ' ಸಿನಿಮಾದ ನಿರ್ದೇಶಕರ ತಂಡದಲ್ಲಿ ಕೆಲಸ ಮಾಡಿದ್ದ, ಇವರು ಈಗ 'ಡಿ 53' ಸಿನಿಮಾದ ಡೈರೆಕ್ಷನ್ ಟೀಂ ನಲ್ಲಿ ಸಹ ಇದ್ದಾರೆ.

ತರುಣ್ ಕೆಲಸ ಮಾಡಿಸಿಕೊಂಡರು

ತರುಣ್ ಕೆಲಸ ಮಾಡಿಸಿಕೊಂಡರು

ತಮ್ಮ ಪೋಸ್ಟರ್ ಬಗ್ಗೆ ಮಾತನಾಡಿದ ಪರಿವರ್ತನ್ ''ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸಾಯಿ ಕೃಷ್ಣ ಅವರು ನನ್ನಿಂದ ಕೆಲಸ ತೆಗೆಸಿಕೊಂಡರು. ತರುಣ್ ಅವರ ಕಥೆಗೆ ತಕ್ಕಂತೆ ಪೋಸ್ಟರ್ ಬಂದಿದೆ.'' ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.

More from Filmibeat

English summary
Parivarthan designed kannada actor Darshan's 53rd movie poster. The movie will be directed by Tharun Sudhir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X