ಜೋಶ್ #Martin ಚಾಲೆಂಜ್‌ನಲ್ಲಿ ಭಾಗವಹಿಸಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೀಟ್ ಮಾಡಿ

By ಫಿಲ್ಮಿಬೀಟ್ ಡೆಸ್ಕ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಚಿತ್ರದ ಟೀಸರ್ ಫೆ.23 ರಂದು ಬಿಡುಗಡೆಗೊಂಡಿದ್ದು, ಮೂರು ವರ್ಷದ ನಂತರ ಅವರನ್ನ ತೆರೆ ಮೇಲೆ ಕಂಡ ಸಿನಿರಸಿಕರು ಫುಲ್ ಖುಷ್ ಆಗಿದ್ದಾರೆ.

ಸಾಮಾನ್ಯವಾಗಿ ಚಿತ್ರದ ಟೀಸರ್ ಯು ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡರೆ, 'ಮಾರ್ಟಿನ್' ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್ - ಟೀಸರ್‌ ಅನ್ನೇ ಸಿನಿಮಾದಂತೆ ದೊಡ್ಡ ಪರದೆಯ ಮೇಲೆ ಅದ್ಧೂರಿಯಾಗಿ ಬಿಡುಗಡೆ ಮಾಡಿದ್ದಾರೆ. ಮಾರ್ಟಿನ್ ಚಿತ್ರದ ಟೀಸರ್ 23ರ ಸಂಜೆ 5.55ಕ್ಕೆ ಲಹರಿ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದರೆ, ಅದಕ್ಕೂ ಮುಂಚೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಚಿತ್ರದ ಟೀಸರ್ ಅನ್ನು ಭರ್ಜರಿಯಾಗಿ ಬಿಡುಗಡೆಗೊಳಿಸಲಾಗಿದೆ.

Participants in the Martin Josh Challenge will have the opportunity to meet Dhruva Sarja

Josh Filter Link

Martin Teaser Link

ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ವೈಭವೀ ಶಾಂಡಿಲ್ಯ ತೆರೆ ಹಂಚಿಕೊಂಡಿದ್ದು, ನಿರ್ಮಾಪಕ ಉದಯ್ ಮೆಹ್ತಾ ಅವರು ಸಿನಿಮಾ ರಿಚ್ನೆಸ್‌ಗೆ ಕಾರಣಕರ್ತರಾಗಿದ್ದಾರೆ. ನಿರ್ದೇಶಕ ಎ.ಪಿ.ಅರ್ಜುನ್ ಅವರಂತೂ, ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದ್ದಾರೆ. ಇನ್ನು ಬಹು ಭಾಷೆಯಲ್ಲಿ ರಿಲೀಸ್ ಆಗ್ತಿರೋ ಈ ಚಿತ್ರಕ್ಕೆ ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಮಾಡಿದ್ದು, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಹ ಕೆಲಸ ಮಾಡಿದ್ದಾರೆ.

Josh Audio Link

Josh Challenge Link

#Martin - ಜೋಶ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ, ಧ್ರುವ ಸರ್ಜಾ ಮೀಟ್ ಮಾಡಿ

ಇನ್ನು ಟೀಸರ್ ಲಾಂಚ್ ಆಗಿ ಒಂದೇ ದಿನ ಆಗಿದ್ದರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವ 'ಮಾರ್ಟಿನ್', 'ಜೋಶ್' ಅಪ್ಲಿಕೇಶನ್‌ನಲ್ಲೂ ಟ್ರೆಂಡ್ ಆಗುತ್ತಿದೆ. ಜೋಶ್‌ನಲ್ಲಿ 'ಮಾರ್ಟಿನ್' ಚಿತ್ರದ ಚಾಲೆಂಜ್ ಲೈವ್ ಆಗಿದ್ದು, ಕ್ರಿಯೇಟರ್‌ಗಳು ಚಿತ್ರದ ಟೀಸರ್‌ಗೆ ಸಾಕಷ್ಟು ವಿಡಿಯೊಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ನೀವೂ ಕೂಡ #Martin ಚಾಲೆಂಜ್ ನಲ್ಲಿ ಭಾಗವಹಿಸಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನ ಭೇಟಿ ಆಗೋ ಅವಕಾಶ ಪಡೆಯಬಹುದು.

More from Filmibeat

English summary
Participants in the Martin Josh Challenge will have the opportunity to meet Action Prince Dhruva Sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X