»   » 'ಪೈಲ್ವಾನ್' ತಂಡದಿಂದ ಬಂತು ಕಿಚ್ಚನ ಅಭಿಮಾನಿಗಳಿಗೆ ಬಂಪರ್ ಆಫರ್

'ಪೈಲ್ವಾನ್' ತಂಡದಿಂದ ಬಂತು ಕಿಚ್ಚನ ಅಭಿಮಾನಿಗಳಿಗೆ ಬಂಪರ್ ಆಫರ್

Posted By:
Subscribe to Filmibeat Kannada

'ಪೈಲ್ವಾನ್'... ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಬೇರೆಯದ್ದೇ ಲುಕ್ ನಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿರುವ 'ಪೈಲ್ವಾನ್' ಸಿನಿಮಾ, ಫಸ್ಟ್ ಲುಕ್ ನಿಂದಲೇ ಪ್ರೇಕ್ಷಕರನ್ನ ಹಾಗೂ ಸುದೀಪ್ ಅಭಿಮಾನಿಗಳನ್ನ ಚಿತ್ರದ ಬಗ್ಗೆ ಹೆಚ್ಚು ಕುತೂಹಲ ಮೂಡಿಸುವಂತೆ ಮಾಡಿದೆ.

'ದಿ ವಿಲನ್' ಸಿನಿಮಾದ ಚಿತ್ರೀಕರಣ ಮುಗಿಯುತ್ತಾ ಬಂತು, 'ಪೈಲ್ವಾನ್' ಸಿನಿಮಾ ಚಿತ್ರೀಕರಣ ಯಾವಾಗ ಅಂತ ಕೇಳುತ್ತಿದ್ದ ಅಭಿಮಾನಿಗಳಿಗೆ ನಿರ್ದೇಶಕ 'ಕೃಷ್ಣ' ಒಂದು ಸಿಹಿ ಸುದ್ದಿ ತಂದಿದ್ದಾರೆ. ಏನಪ್ಪಾ ಅಂತಹ ಸುದ್ದಿ ಅಂತೀರಾ.? ಮುಂದೆ ಓದಿ....

ಅಭಿಮಾನಿಗಳಿಗೆ ಸಖತ್ ಚಾನ್ಸ್

'ಪೈಲ್ವಾನ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿರುವ ನಿರ್ದೇಶಕರು ಈಗ ಸಿನಿಮಾದ ಟೈಟಲ್ ಡಿಸೈನ್ ಗಾಗಿ ಒಂದು ಐಡಿಯಾ ಮಾಡಿದ್ದಾರೆ. 'ಪೈಲ್ವಾನ್' ಡಿಸೈನ್ ಮಾಡಿ ನಿರ್ದೇಶಕರಿಗೆ ಕಳುಹಿಸಿದ್ರೆ, ಅದರಲ್ಲಿ ಬೆಸ್ಟ್ ಅನ್ನ ಸೆಲೆಕ್ಟ್ ಮಾಡಿ ಅವ್ರಿಗೆ ಬಂಪರ್ ಬಹುಮಾನವನ್ನ ನೀಡಲು 'ಪೈಲ್ವಾನ್' ಸಿನಿಮಾತಂಡ ನಿರ್ಧಾರ ಮಾಡಿದೆ.

'ಡಿಸೈನ್' ತಲುಪಿಸೋದು ಹೇಗೆ.?

ಈ ಸ್ಪರ್ಧೆಯಲ್ಲಿ ಕಿಚ್ಚನ ಅಭಿಮಾನಿಗಳು ಮಾತ್ರ ಭಾಗಿಯಾಗಬೇಕು ಅನ್ನೋದು ಇಲ್ಲ. ನಿಮಗಿಷ್ಟವಾದ ಸ್ಟೈಲ್ ನಲ್ಲಿ ನಿಮಗೆ ಬೇಕಾದ ರೀತಿಯಲ್ಲಿ 'ಪೈಲ್ವಾನ್' ಟೈಟಲ್ ಅನ್ನ ಡಿಸೈನ್ ಮಾಡಿಕೊಡಬೇಕು ಅಷ್ಟೇ. ಇನ್ನು ನಿರ್ದೇಶಕರಾದ ಕೃಷ್ಣ ಅವ್ರ "dopkrish@gmail.com" ಈ ಐಡಿಗೆ ತಮ್ಮ ಡಿಸೈನ್ ಗಳನ್ನ ಮೇಲ್ ಮಾಡಬೇಕು. ವಿಶೇಷ ಸೂಚನೆ ಏನಪ್ಪಾ ಅಂದ್ರೆ ಇದು 'ಟೈಟಲ್' ಡಿಸೈನ್ ಗಳನ್ನ ಕಳುಹಿಸೋದಕ್ಕೆ ಮಾತ್ರ ಅವಕಾಶ.

ಬೇಗ ಯೋಚನೆ ಮಾಡಿ -ಬೇಗ ಡಿಸೈನ್ ಮಾಡಿ

ಸದ್ಯ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿರುವ 'ಗಜಕೇಸರಿ ಕೃಷ್ಣ' ಅಂಡ್ ಟೀಮ್ ಡಿಸೆಂಬರ್ ಮೊದಲ ವಾರದ ಅಂತ್ಯಕ್ಕೆ ಈ ಡಿಸೈನ್ಸ್ ಗಳನ್ನ ಫೈನಲ್ ಮಾಡಬೇಕಾಗಿದೆ. ಆದ್ದರಿಂದ ನಿಮ್ಮ ಡಿಸೈನ್ಸ್ ಗಳನ್ನ ಡಿಸೆಂಬರ್ ಮೊದಲ ವಾರದ ಒಳಗೆ ತಲುಪಿಸಬೇಕು.

ಚಿತ್ರೀಕರಣ ಯಾವಾಗ್ಲಿಂದ ಶುರು.?

'ಹೆಬ್ಬುಲಿ' ಸಿನಿಮಾ ಸಕ್ಸಸ್ ನಂತ್ರ ನಿರ್ದೇಶಕ ಕೃಷ್ಣ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಕೆಲಸ ಮಾಡ್ತಿರೋ ಎರಡನೇ ಸಿನಿಮಾ ಇದು. ಮೇಕಿಂಗ್ ಕ್ವಾಲಿಟಿ, ಸ್ಕ್ರೀನ್ ಪ್ಲೇ ಹಾಗೂ ಜನ ಸಾಮಾನ್ಯರಿಗೆ ಇಷ್ಟವಾಗುವಂತಹ ಕತೆಯನ್ನ ನೀಡುವಲ್ಲಿ ಕೃಷ್ಣ ಯಶಸ್ಸು ಕಂಡಿದ್ದಾರೆ. ಮುಂಬರುವ ಪೈಲ್ವಾನ್ ಸಿನಿಮಾದಲ್ಲಿಯೂ ಈ ಎಲ್ಲಾ ಎಲಿಮೆಂಟ್ಸ್ ಗಳನ್ನ ತೆರೆ ಮೇಲೆ ನೋಡೋದಕ್ಕೆ ಅಭಿಮಾನಿಗಳು ಕಾತುರರಾಗಿದ್ದಾರೆ.

English summary
Hurry Up, Participate in 'Pailwan' title design contest and Win exciting prizes.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada