For Quick Alerts
  ALLOW NOTIFICATIONS  
  For Daily Alerts

  ಓಲಾ ಚಾಲಕನಿಂದ ಪಾರೂಲ್ ಗೆ ಪರದಾಟ

  By Pavithra
  |
  ಓಲಾದವರ ಬಗ್ಗೆ ಪಾರುಲ್ ಯಾದವ್ ಗರಂ | FIlmibeat Kannada

  ಓಲಾ ಚಾಲಕರಿಂದ ಸಮಸ್ಯೆಗಳು ಆಗುತ್ತಿರುವುದು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ನಟಿ ಪಾರೂಲ್ ಸದ್ಯ ಇಂಥದೊಂದು ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಪಾರೂಲ್ ತಮ್ಮ ಮನೆ ಶಿಫ್ಟ್ ಮಾಡುವ ಹಿನ್ನಲೆಯಲ್ಲಿ ಓಲಾ ಬುಕ್ ಮಾಡಿಕೊಂಡು ಪ್ರಯಾಣ ಮಾಡಿದ್ದಾರೆ. ಸ್ನೇಹಿತರ ವಿವಾಹ ವಾರ್ಷಿಕೋತ್ಸವಕ್ಕಾಗಿ ಮಾರ್ಗ ಮಧ್ಯೆಯಲ್ಲಿ ವಾಚ್ ಖರೀದಿ ಮಾಡಿ ಅದನ್ನು ಓಲಾದಲ್ಲಿ ಇಟ್ಟಿದ್ದಾರೆ.

  ಓಲಾದಲ್ಲಿ ಬರುವ ವಸ್ತುಗಳನ್ನ ಹೊಸ ಮನೆಯಲ್ಲಿ ಶಿಫ್ಟ್ ಮಾಡಿ ಮುಂಬೈಗೆ ಹೊರಡಲು ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದಾರೆ. ಏರ್ ಪೋರ್ಟ್ ತಲುಪಿದ ನಂತರ ತಿಳಿದಿದೆ ಪಾರೂಲ್ ಖರೀದಿ ಮಾಡಿದ್ದ ವಾಚುಗಳು ಕಾಣೆಯಾಗಿವೆ ಎಂದು. ನಂತರ ಓಲಾ ಚಾಲಕನಿಗೆ ಕರೆ ಮಾಡಿ ವಿಚಾರಿಸಿದರೆ ಆತ ನನ್ನ ಬಳಿ ಯಾವ ವಾಚ್ ಗಳು ಇಲ್ಲ ಎಂದಿದ್ದಾರೆ.

  ಬದುಕಿನ ಕರಾಳದಿನಗಳ ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ ಪಾರೂಲ್ಬದುಕಿನ ಕರಾಳದಿನಗಳ ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ ಪಾರೂಲ್

  ಪಾರೂಲ್ ತಡ ಮಾಡದೇ ಏರ್ ಪೋರ್ಟ್ ನಲ್ಲಿರುವ ಪೋಲೀಸರಿಗೆ ದೂರು ನೀಡಿದ್ದಾರೆ. ಮೂರು ದಿನಗಳ ನಂತರ ಓಲಾ ಚಾಲಕನನ್ನು ಸೆರೆ ಹಿಡಿದಿರುವ ಪೋಲೀಸರು ಪಾರೂಲ್ ಖರೀದಿ ಮಾಡಿದ್ದ ವಾಚ್ ಗಳನ್ನು ಹಿಂತಿರುಗಿಸಿದ್ದಾರೆ. ಇತ್ತ ಓಲಾ ದವರು‌‌ ತನಿಖೆಯಲ್ಲಿ‌ ಸಹಕರಿಸಿರುವುದಾಗಿ‌ ತಿಳಿಸಿದ್ದಾರೆ ಆದರೆ‌ ಸಾಕಷ್ಟು‌ ತೊಂದರೆ ಅನುಭವಿಸಿರುವ ಪಾರೂಲ್ ಅವರನ್ನು ಸಂಪರ್ಕಿಸುವ ಪ್ರಯತ್ನ‌ ಮಾತ್ರ ಮಾಡಿಲ್ಲ.

  ಆದರೆ ಓಲಾದವರಿಗೆ ಈಮೇಲ್ ಮೂಲಕ ದೂರು ನೀಡಿ ಮೂರು ದಿನವಾದರೂ ಯಾವುದೇ ರೀತಿಯ ಪ್ರತಿಕ್ರಿಯೆ ಕೊಟ್ಟಿಲ್ಲ. ಸೌಜನ್ಯಕ್ಕಾಗಿಯೂ ಪಾರೂಲ್ ಅವರನ್ನು ಸಂಪರ್ಕಿಸಿ ಆಗಿರುವ ತೊಂದರೆ ಬಗ್ಗೆ ವಿಚಾರಿಸಿಲ್ಲ.

  ಹೌದು ಓಲಾದಿಂದ ಈ ರೀತಿಯ ಸಮಸ್ಯೆಗಳು ಆಗುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಸಾಕಷ್ಟು ಬಾರಿ ಇಂತಹ ತೊಂದರೆಗಳು ಆಗಿವೆ. ವಸ್ತುಗಳು ಕಳೆದು ಹೋದರೆ ಪರವಾಗಿಲ್ಲ. ಆದರೆ ಹೆಣ್ಣು ಮಕ್ಕಳು ಓಲಾದವರನ್ನು ನಂಬಿ ಪ್ರಯಾಣ ಮಾಡುವುದಾದರೂ ಹೇಗೆ. ದೂರು ಕೊಟ್ಟು ಮೂರು ದಿನವಾದರು ಪ್ರತಿಕ್ರಿಯಿಸದವರು ಲೈಂಗಿಕ ಕಿರುಕುಳ, ಅತ್ಯಾಚಾರಗಳು ಆದರೆ ಏನು ಮಾಡುತ್ತಾರೆ ಎನ್ನುವುದು ನಟಿ ಪಾರೂಲ್ ಅವರ ವಾದ.

  English summary
  Kannada actress Parul has filed a police complaint against the Ola Company and the Driver. The driver has been caught by the police who stole their watch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X