ಬದುಕಿನ ಕರಾಳದಿನಗಳ ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ ಪಾರೂಲ್
ಗೋವಿಂದಾಯ ನಮಃ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಪಾರೂಲ್ ಯಾದವ್. ಮುಂಬೈ ಮೂಲದ ಬೆಡಗಿ ಆದರೂ ಕೂಡ ಕನ್ನಡ ಪ್ರೇಕ್ಷಕರಿಗೆ ಪಾರೂಲ್ ನಮ್ಮ ನೆಲದ ಹುಡುಗಿ ಎನ್ನಿಸುವಷ್ಟು ಹತ್ತಿರವಾದರು.
ತೆರೆ ಮೇಲೆ ತಮ್ಮ ಅಭಿನಯದ ಮೂಲಕ ರಂಜಿಸಿ ಖುಷಿ ಪಡಿಸುವ ನಟಿ ತಮ್ಮ ಕರಾಳ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಸದಾ ಖುಷಿಯಲ್ಲಿ ನಗುನಗುತ್ತಾ ಇರುವ ಪಾರುಲ್ ತಮ್ಮ ತಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ.
ಇಂದು (ಫೆ.4) ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಯಾರಿಗೂ ಗೊತ್ತಿಲ್ಲದ ವಿಚಾರವನ್ನ ಪಾರೂಲ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಹಾಗಾದ್ರೆ ಪಾರೂಲ್ ಬಿಚ್ಚಿಟ್ಟ ಸತ್ಯ ಏನು? ಪಾರೂಲ್ ತಾಯಿಗೆ ಏನಾಗಿತ್ತು? ಇವೆಲ್ಲವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ನಟಿ ಪಾರೂಲ್ ಹೇಳಿದ ಮಾತು
ನಟಿ ಪಾರೂಲ್ ತಮ್ಮ ಜೀವನದ ಕರಾಳ ದಿನಗಳ ಬಗ್ಗೆ ಮಾತನಾಡಿದ್ದಾರೆ. ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬುವ ಮಾತುಗಳನ್ನ ಹೇಳಿದ್ದಾರೆ.

ಕ್ಯಾನ್ಸರ್ ವಿರುದ್ದ ಪಾರೂಲ್ ಹೋರಾಟ
ಪಾರೂಲ್ ಅವರ ತಾಯಿ ದೇವಯಾನಿ ಯಾದವ್ ಐದು ವರ್ಷದ ಹಿಂದೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರಂತೆ. ಕುಟುಂಬದ ಪ್ರತಿಯೊಬ್ಬರು ಈ ವಿಚಾರ ಕೇಳಿ ಭಯ ಪಟ್ಟಿದ್ದರಂತೆ. ಆದರೆ ನಂತರ ಎಲ್ಲರೂ ಕ್ಯಾನ್ಸರ್ ವಿರುದ್ದ ಹೋರಾಟ ಪ್ರಾರಂಭ ಮಾಡಿದ್ದಾರೆ.

ಹೋರಾಟಕ್ಕೆ ಸಿಕ್ಕಿತು ಜಯ
ಸತತ ಒಂದು ವರ್ಷಗಳ ಹೋರಾಟದಿಂದ ಈಗ ಪಾರೂಲ್ ಅವರ ತಾಯಿ ದೇವಯಾನಿ ಯಾದವ್ ಕ್ಯಾನ್ಸರ್ ನಿಂದ ಮುಕ್ತಿ ಪಡೆದುಕೊಂಡಿದ್ದಾರೆ. ನಾಲ್ಕು ವರ್ಷಗಳಿಂದ ಖುಷಿಯಾದ ಜೀವನವನ್ನು ಸಾಗಿಸುತ್ತಿದ್ದಾರೆ. ಈ ವಿಚಾರವನ್ನ ಖುದ್ದು ಪಾರೂಲ್ ಹೇಳಿಕೊಂಡಿದ್ದಾರೆ.

ಪ್ರೀತಿಯಿಂದ ನೋಡಿಕೊಳ್ಳಿ
ಇದೇ ಸಮಯದಲ್ಲಿ ಪಾರೂಲ್ ಕ್ಯಾನ್ಸರ್ ರೋಗಿಗಳಿಗೆ ಸ್ಫೂರ್ತಿ ತುಂಬುವ ಮಾತುಗಳನ್ನ ಹೇಳಿದ್ದಾರೆ. ಕ್ಯಾನ್ಸರ್ ಬಂದ ತಕ್ಷಣ ಹೆದರಿಕೊಳ್ಳಬೇಡಿ. ಅದರ ವಿರುದ್ದ ಹೋರಾಟ ಮಾಡಿ ಮತ್ತು ರೋಗಿಗಳನ್ನ ಪ್ರೀತಿಯಿಂದ ನೋಡಿಕೊಳ್ಳಿ ಎಂದಿದ್ದಾರೆ.


Click it and Unblock the Notifications











