twitter
    For Quick Alerts
    ALLOW NOTIFICATIONS  
    For Daily Alerts

    ಹಲ್ಲೆಗೊಳಗಾದ ಮಂಡ್ಯ ಯುವತಿ ಬೆಂಬಲಿಸಿ ಪಾರೂಲ್ ಕನ್ನಡದಲ್ಲಿ ಟ್ವೀಟ್

    |

    ವಾಹನ ತಪಾಸಣೆ ವೇಳೆ ಮಹಿಳಾ ಪಿಎಸ್‌ಐ ಯುವತಿಯೊಬ್ಬಳ ಕಪಾಳಕ್ಕೆ ಬಾರಿಸಿರುವ ಘಟನೆ ಮಂಡ್ಯದಲ್ಲಿ ನಡೆದಿತ್ತು. ಯುವತಿ ಮತ್ತು ಪೊಲೀಸರ ನಡುವಿನ ವಾಗ್ವಾದದಲ್ಲಿ ಮಹಿಳಾ ಅಧಿಕಾರಿ ಸಾರ್ವಜನಿಕವಾಗಿ ಯುವತಿಯ ಮೇಲೆ ಹಲ್ಲೆ ಮಾಡಿದ್ದರು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಪೊಲೀಸರ ಕ್ರಮಕ್ಕೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದರು. ಯುವತಿಯದ್ದು ತಪ್ಪೇ ಇರಬಹುದು, ಆಕೆಯ ಮೇಲೆ ಹಲ್ಲೆ ಮಾಡಿದ್ದು ಸರಿಯಿಲ್ಲ ಎಂದು ಟೀಕಿಸಿದ್ದರು.

    ಯುವತಿಗೆ ಕಪಾಳಮೋಕ್ಷ ಪ್ರಕರಣ; ವರದಿ ಕೇಳಿದ ಮಂಡ್ಯ ಎಸ್‌ಪಿ

    ಇದೀಗ, ಕನ್ನಡ ನಟಿ ಪಾರೂಲ್ ಯಾದವ್ ಈ ಘಟನೆಯನ್ನು ಖಂಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ''ಇದು ತಪ್ಪು. ಜನರನ್ನು ರಕ್ಷಿಸಲು ಪೋಲೀಸರು ಇರುವುದೇ ಹೊರತು, ಈ ರೀತಿ ಹಲ್ಲೆ ಮಾಡಿ ಅಧಿಕಾರ ಚಲಾಯಿಸಲು ಅಲ್ಲ. ಇದನ್ನು ನಾವೆಲ್ಲರೂ ಖಂಡಿಸೋಣ'' ಎಂದಿದ್ದಾರೆ.

    Parul Yadav Opposes Woman PSI slapping young woman on road

    ಈ ಘಟನೆ ಕುರಿತು ವರದಿ ನೀಡುವಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಅವರು, ಮಂಡ್ಯ ಡಿವೈಎಸ್‌ಪಿಗೆ ಸೂಚಿಸಿದ್ದಾರೆ. ಹಾಗೂ ಜಿಲ್ಲಾ ಪೊಲೀಸರಿಗೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಆದೇಶಿಸಿದ್ದಾರೆ.

    Parul Yadav Opposes Woman PSI slapping young woman on road

    ಘಟನೆ ವಿವರ

    Recommended Video

    4ವರ್ಷಾದ ಮಗುವಾಗಿದ್ದಾಗಲೇ ಹಾರ್ಮೋನಿಯಂ‌ ನುಡಿಸಿದ ಶ್ರೆಯಾ ಘೋಶಾಲ್ | Filmibeat Kannada

    ಈ ಘಟನೆ ಮಾರ್ಚ್ 7 ರಂದು ನಡೆದಿದೆ ಎಂದು ಸ್ವತಃ ಯುವತಿ ತಿಳಿಸಿದ್ದಾರೆ. ಮಂಡ್ಯದ ನೂರಡಿ ರಸ್ತೆಯ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಟ್ರಾಫಿಕ್ ಪೊಲೀಸರು ಯುವತಿಯ ವಾಹನವನ್ನು ಅಡ್ಡಗಟ್ಟಿ ದಾಖಲಾತಿ ಪರಿಶೀಲಿಸಿದರು. ದಾಖಲಾತಿ ಎಲ್ಲವೂ ಇತ್ತು. ಆದರೆ, ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ಕೇಳಿದರು. ನನ್ನ ಬಳಿ ನಗದು ಇರಲಿಲ್ಲ, ಗೂಗಲ್ ಪೇ ಮಾಡುತ್ತೇನೆ ಎಂದೆ. ಆದರೆ ಅವರು ನಗದು ಕೊಡಬೇಕು, ಇಲ್ಲ ಅಂದ್ರೆ ಸ್ಟೇಷನ್‌ಗೆ ಬಂದು ವಾಹನ ಬಿಡಿಸಿಕೊಂಡು ಹೋಗಿ ಅಂದರು. ಹಾಗಾಗಿ, ಮಾತಿಗೆ ಮಾತು ಬೆಳೆಯಿತು. ನಂತರ ಸ್ಟೇಷನ್‌ನಲ್ಲಿ ಇದು ಇತ್ಯರ್ಥ ಆಯಿತು. ವಿಡಿಯೋ ಈಗ ವೈರಲ್ ಆಗಿದೆ ಅಷ್ಟೇ ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ.

    English summary
    Kannada Actress Parul Yadav opposed to woman PSI slapping young woman on road.
    Thursday, March 11, 2021, 12:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X